Advertisement

ಉಪಾಹಾರಕ್ಕೂ ಒತ್ತು: ಹೊಸ ಶಿಕ್ಷಣ ನೀತಿಯಲ್ಲಿ ಉಲ್ಲೇಖ

01:54 AM Aug 03, 2020 | Hari Prasad |

ಹೊಸದಿಲ್ಲಿ: ಕಲಿಯುವ ಮಕ್ಕಳಿಗೆ ಪೌಷ್ಟಿಕಾಂಶ ಸಮೃದ್ಧ ಆಹಾರವನ್ನು ಒದಗಿಸಿದರೆ ಉತ್ತಮ ಎಂಬುದು ಹೊಸ ಶಿಕ್ಷಣ ನೀತಿಯ ಪ್ರಮುಖ ಅಂಶಗಳಲ್ಲಿ ಒಂದು.

Advertisement

ಸದ್ಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ.

ಇದರ ಜತೆಗೆ ಬೆಳಗ್ಗಿನ ಉಪಾಹಾರವನ್ನೂ ನೀಡಿದರೆ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ ಎಂದು ಶಿಕ್ಷಣ ನೀತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉಪಾಹಾರವೇಕೆ?
ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬೆಳಗ್ಗಿನ ಉಪಾಹಾರ ಕೊಟ್ಟರೆ ಮಕ್ಕಳು ಪಾಠವನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಬಿಸಿಯೂಟಕ್ಕೆ ಪೂರಕವಾಗಿ ಇದನ್ನೂ ನೀಡಬಹುದು ಎಂದು ವರದಿ ಅಭಿಪ್ರಾಯಪಟ್ಟಿದೆ.

ಪೌಷ್ಟಿಕಾಂಶಯುಕ್ತ ಆಹಾರದ ಮಹತ್ವದ ಬಗ್ಗೆಯೂ ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಮಕ್ಕಳು ಅನಾರೋಗ್ಯಕ್ಕೀಡಾಗಿದ್ದರೆ, ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದರೆ ಅವರ ಕಲಿಕೆ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಾಗಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಅಗತ್ಯ. ಜತೆಗೆ ಶಾಲಾ ಕಲಿಕೆಯಲ್ಲಿ ತರಬೇತಾದ ಸಾಮಾಜಿಕ ಕಾರ್ಯಕರ್ತರು, ಆಪ್ತಸಮಾಲೋಚಕರು ಮತ್ತು ಸಮುದಾಯವೂ ಒಳಗೊಳ್ಳುವಂತೆ ಮಾಡ ಬೇಕು ಎಂದು ವರದಿ ತಿಳಿಸಿದೆ.

Advertisement

ನೆಲಗಡಲೆ, ಕಡಲೆ ನೀಡಿ
ಬೆಳಗ್ಗೆ ಬಿಸಿ ಉಪಾಹಾರ ನೀಡಲು ಸಾಧ್ಯವಾಗದಿದ್ದಲ್ಲಿ ನೆಲಗಡಲೆ ಅಥವಾ ಕಡಲೆ ನೀಡಬಹುದು. ಬೆಲ್ಲ ಯಾ ಸ್ಥಳೀಯ ಹಣ್ಣುಗಳನ್ನು ಮಿಶ್ರ ಮಾಡಿ ನೀಡಬಹುದು ಎಂದು ವರದಿ ತಿಳಿಸಿದೆ. ಮಕ್ಕಳ ಆರೋಗ್ಯ ಪರೀಕ್ಷಿಸಬೇಕು. ಅವರು ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿರಬೇಕು, ಹೆಲ್ತ್‌ ಕಾರ್ಡ್‌ ನೀಡಿ ಆರೋಗ್ಯದ ಮೇಲೆ ನಿಗಾ ಇರಿಸ ಬೇಕು ಎಂದೂ ವರದಿ ಹೇಳಿದೆ.

ಪೂರ್ವ ಪ್ರಾಥಮಿಕಕ್ಕೂ ಬಿಸಿಯೂಟ ಕೊಡಿ
ಸದ್ಯ ಬಿಸಿಯೂಟ 1ರಿಂದ 8ನೇ ತರಗತಿವರೆಗೆ ಮಾತ್ರ ಇದೆ. ಮುಂದೆ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೂ ಒದಗಿಸಲು ವರದಿ ಶಿಫಾರಸು ನೀಡಿದೆ. ಈ ವಯೋಹಂತ ಮಹತ್ವದ್ದಾಗಿದ್ದು, ಮಧ್ಯಾಹ್ನದ ಬಿಸಿಯೂಟವನ್ನು ಇಲ್ಲಿಗೂ ವಿಸ್ತರಣೆ ಮಾಡಬಹುದಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next