Advertisement

ಶಿಕ್ಷಣ ಲಾಭ ಗಳಿಕೆಗೆ ನಡೆಸುವ ವ್ಯಾಪಾರವಲ್ಲ: ಸುಪ್ರೀಂ ಕೋರ್ಟ್‌

06:48 PM Nov 08, 2022 | Team Udayavani |

ನವದೆಹಲಿ: ಶಿಕ್ಷಣ ಲಾಭ ಗಳಿಕೆಗೆ ನಡೆಸುವ ವ್ಯಾಪಾರವಲ್ಲ. ಬೋಧನಾ ಶುಲ್ಕವು ಯಾವಾಗಲೂ ಕೈಗೆಟುಕುವಂತಿರಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

Advertisement

ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾ. ಎಂ.ಆರ್‌.ಶಾ ಮತ್ತು ನ್ಯಾ. ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ, ಆಂಧ್ರ ಪ್ರದೇಶದಲ್ಲಿ ಮೆಡಿಕಲ್‌ ಕಾಲೇಜುಗಳ ಬೋಧನಾ ಶುಲ್ಕವನ್ನು ವಾರ್ಷಿಕ 24 ಲಕ್ಷ ರೂ.ಗೆ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿದ್ದ ಆಂಧ್ರ ಪ್ರದೇಶ ಹೈಕೋರ್ಟ್‌ನ ಕ್ರಮವನ್ನು ಎತ್ತಿಹಿಡಿಯಿತು.

ಆಂಧ್ರ ಪ್ರದೇಶ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ನಾರಾಯಣ ಮೆಡಿಕಲ್‌ ಕಾಲೇಜು ಹಾಗೂ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದವು.

ಇದೇ ವೇಳೆ ನಾರಾಯಣ ಮೆಡಿಕಲ್‌ ಕಾಲೇಜು ಹಾಗೂ ಆಂಧ್ರ ಪ್ರದೇಶ ರಾಜ್ಯ ಸರ್ಕಾರವು ಒಟ್ಟು 5 ಲಕ್ಷ ರೂ.ಗಳನ್ನು ಆರು ವಾರಗಳ ಒಳಗಾಗಿ ಕೋರ್ಟ್‌ ರಿಜಿಸ್ಟ್ರಿಯಲ್ಲಿ ಠೇವಣಿ ಇಡುವಂತೆ ನ್ಯಾಯಪೀಠ ಸೂಚಿಸಿತು.

“ಈ ಹಿಂದೆ ಇದ್ದ ಬೋಧನಾ ಶುಲ್ಕಕ್ಕಿಂತ ಏಳು ಪಟ್ಟು ಹೆಚ್ಚಿಸಿ, ವಾರ್ಷಿಕ 24 ಲಕ್ಷ ರೂ. ನಿಗದಿಪಡಿಸಿರುವುದು, ಯಾವ ರೀತಿಯಲ್ಲಿಯೂ ಸಮರ್ಥನೀಯವಲ್ಲ. ಶಿಕ್ಷಣ ವ್ಯಾಪಾರವಲ್ಲ,’ ಎಂದು ನ್ಯಾಯಪೀಠ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next