Advertisement
ಶೇ. 30 ಶುಲ್ಕ ಕಡಿತದ ನಿರ್ಧಾರವನ್ನು ಪುನರ್ ಪರಿಶೀಲಿಸುವ ಪ್ರಶ್ನೆಯೇ ಇಲ್ಲ ಎಂದು ಸರಕಾರ ಸ್ಪಷ್ಪಪಡಿಸಿದೆ.ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿತ್ತು. ಆದರೆ ಹೆತ್ತವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪೂರಕವಾಗುವಂತೆ ಶೇ. 30ರಷ್ಟು ಶುಲ್ಕ ಕಡಿತದ ನಿರ್ಧಾರ ತೆಗೆದುಕೊಂಡಿದ್ದೇವೆ. ಇದರ ವಿನಾ ಪ್ರಸಕ್ತ ಸಾಲಿಗೆ ಯಾವುದೇ ಪರ್ಯಾಯ ಮಾರ್ಗ ಇಲ್ಲ. ಹೀಗಾಗಿ ಶುಲ್ಕ ಕಡಿತ ನಿರ್ಧಾರದಲ್ಲಿ ಬದ ಲಾವಣೆ ಇಲ್ಲ ಮತ್ತು ಪುನರ್ ಪರಿಶೀಲನೆಯೂ ಇಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿ ಸಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಸಂಬಂಧ ಚಿಂತನೆ ಗಳು ನಡೆಯುತ್ತಿವೆ. ಸಿಎಂ ಜತೆಗೂ ಚರ್ಚೆ ನಡೆಸಲಾಗುತ್ತದೆ. ಖಾಸಗಿ ಶಾಲಾ ಶಿಕ್ಷಕರಿಗೆ ನೆರವಾಗಲು ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷಕರ ಕಲ್ಯಾಣ ನಿಧಿಯಲ್ಲಿರುವ ಹಣದ ಬಳಕೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಸಚಿವರು ಭರವಸೆ ನೀಡಿದರು.
Related Articles
ರಾಜ್ಯದಲ್ಲಿ 1ರಿಂದ 5ನೇ ತರಗತಿ ಆರಂಭಿ ಸುವ ಸಂಬಂಧ ಶೀಘ್ರವೇ ಕೋವಿಡ್ ತಜ್ಞರ ಸಲಹಾ ಸಮಿತಿಯ ಮಾರ್ಗದರ್ಶನ ಪಡೆದು ತೀರ್ಮಾನಿಸಲಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.
Advertisement
ಮಹಾರಾಷ್ಟ್ರ , ಕೇರಳ ಗಡಿ ಭಾಗ ಮತ್ತು ಬಿಬಿಎಂಪಿ ವ್ಯಾಪ್ತಿ ಬಿಟ್ಟು ಬೇರೆಲ್ಲ ಕಡೆ 6ರಿಂದ 8ನೇ ತರಗತಿ ಆರಂಭವಾಗಿವೆ. ಉತ್ತಮ ಸ್ಪಂದನೆ ವ್ಯಕ್ತವಾಗು ತ್ತಿದೆ. ಸದ್ಯ ಕೊರೊನಾ ಪ್ರಕರಣ ಏರಿಕೆ ಕಾಣುತ್ತಿಲ್ಲ. ಹೀಗಾಗಿ 1ರಿಂದ 5ನೇ ತರಗತಿ ಆರಂಭ ಸಂಬಂಧ ಶೀಘ್ರವೇ ಕೋವಿಡ್ ಸಲಹಾ ಸಮಿತಿಯ ಮಾರ್ಗದರ್ಶನ ಪಡೆದು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದರು.
ಎಸೆಸೆಲ್ಸಿ: ಫೆ. 25ರ ಬಳಿಕ ವೇಳಾಪಟ್ಟಿಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ 8.51 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿ ಕೊಂಡಿ ದ್ದಾರೆ. ಕೊರೊನಾ ಆತಂಕ ಇದ್ದು, ಎಸೆಸೆಲ್ಸಿ ಪರೀಕ್ಷೆ ಯನ್ನು ಸುರಕ್ಷಿತವಾಗಿ ನಡೆಸುವ ಸವಾಲು ಇದೆ. ಫೆ. 25ರ ಬಳಿಕ ಅಂತಿಮ ವೇಳಾಪಟ್ಟಿ ಪ್ರಕಟಿಸಲಿದ್ದೇವೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು. ಕಳೆದ ವರ್ಷ 8.48 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಬಾರಿ 3 ಸಾವಿರ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಕಳೆದ ಬಾರಿ ಇಲಾಖೆಗಳು ಮತ್ತು ಎಲ್ಲರ ಸಹಕಾರದಿಂದ ದೇಶಕ್ಕೆ ಮಾದರಿಯಾಗುವಂತೆ ಪರೀಕ್ಷೆಗಳನ್ನು ನಡೆಸಿದ್ದೇವೆ ಎಂದರು.