Advertisement

ಕೆಲೂರ ಶಾಲೆಗೆ ಶಿಕ್ಷಣ ಸಚಿವ ನಾಗೇಶ್‌ ಭೇಟಿ

03:36 PM Apr 12, 2022 | Team Udayavani |

ಅಮೀನಗಡ: 155ನೇ ವರ್ಷದ ವರ್ಷಾಚರಣೆ ಸಂಭ್ರಮ ಆಚರಿಸಿಕೊಂಡ ಕೆಲೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಭೇಟಿ ನೀಡಿದರು.

Advertisement

ನಂತರ ಶಾಲೆಯ 155 ವರ್ಷದ ಪುರಾತನ ಕೊಠಡಿ ಸೇರಿದಂತೆ ಎಲ್ಲ ಕೊಠಡಿಗಳನ್ನು ವೀಕ್ಷಣೆ ಮಾಡಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಮಾತನಾಡಿ, ಕೆಲೂರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 155ನೇ ವರ್ಷದ ವರ್ಷಾಚರಣೆ ಸಮಾರಂಭ ಅದ್ದೂರಿಯಾಗಿ ಆಚರಿಸಿದ್ದು ಸಂತಸದ ವಿಷಯ. ಸಮಾರಂಭಕ್ಕೆ ನಾನು ಆಗಮಿಸಬೇಕಾಗಿತ್ತು ಆದರೆ, ಅನ್ಯ ನಿಗದಿತ ಕಾರ್ಯಕ್ರಮ ಇದ್ದ ಕಾರಣ ಸಮಾರಂಭಕ್ಕೆ ಆಗಮಿಸಲು ಆಗಲಿಲ್ಲ. ಶಾಲೆ ಉತ್ತಮ ಕಾರ್ಯನಿರ್ವಹಿಸುತ್ತಿರುವುದನ್ನು ಶ್ಲಾಘಿಸಿದರು.

ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಎಂದು ಶಾಸಕರಾದ ದೊಡ್ಡನಗೌಡ ಜಿ.ಪಾಟೀಲ, ವಿಧಾನ ಪರಷತ್‌ ಸದಸ್ಯರಾದ ಹನಮಂತ ನಿರಾಣಿ ಅವರು ಮಾಹಿತಿ ನೀಡಿದ್ದಾರೆ. ಶಾಲೆ ಪ್ರಾರಂಭವಾದ ನಂತರ ಶಾಲೆಯಲ್ಲಿರುವ ಶಿಕ್ಷಕರ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಮತ್ತು ರಾಜ್ಯದಲ್ಲಿರುವ ಶತಮಾನ ಕಂಡ ಶಾಲೆಗಳಿಗೆ ಸರ್ಕಾರ ಅನುದಾನ ಮೀಸಲಿಟ್ಟಿದೆ. ಕೆಲೂರ ಗ್ರಾಮದ ಶಾಲೆಗೂ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರಿಂದ ಸಚಿವ ಬಿ.ಸಿ.ನಾಗೇಶ ಮತ್ತು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಅವರನ್ನು ಸನ್ಮಾನಿಸಲಾಯಿತು.

Advertisement

ಸ್ಥಳದಲ್ಲಿ ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಬೆಳ್ಳನ್ನವರ, ಯುವ ಮುಖಂಡ ಸಂಗನಗೌಡ ಗೌಡರ, ಗ್ರಾಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡ್ರ, ರಾಮಚಂದ್ರ ವಡ್ಡರ, ವಿಶ್ವನಾಥ ಹಿರೇಮಠ, ಡಾ|ಬಿ.ಡಿ.ಜೋಶಿ, ಮಡಿವಾಳಪ್ಪ ಮಡಿವಾಳರ, ಗುರುಪಾದಪ್ಪ ಕಡಪಟ್ಟಿ, ಉಮೇಶ ಹೂಗಾರ, ರಮೇಶ ಕೊಪ್ಪದ, ತಿಪ್ಪಣ್ಣ ಹೂಗಾರ ಇದ್ದರು.

ಕರದಂಟು ಸವಿದ ಶಿಕ್ಷಣ ಸಚಿವ ನಾಗೇಶ ಪಟ್ಟಣದ ಪ್ರಸಿದ್ದ ವಿಜಯಾ ಕರದಂಟು ಮಳಿಗೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಭೇಟಿ ನೀಡಿ ಕರದಂಟು ಸವಿದರು. ಈ ವೇಳೆ ವಿಜಯಾ ಕರದಂಟು ಮಾಲೀಕ, ಪಪಂ ಸದಸ್ಯ ಸಂತೋಷ ಐಹೊಳ್ಳಿ ಸಚಿವರಿಗೆ ಎಲ್ಲ ಬಗೆಯ ಕರದಂಟು ಬಗ್ಗೆ ಮಾಹಿತಿ ನೀಡಿದರು.

ಕರದಂಟು ಸವಿದು ಮಾತನಾಡಿದ ಸಚಿವ ಬಿ.ಸಿ.ನಾಗೇಶ್‌, ಗ್ರಾಮೀಣ ಭಾಗದಲ್ಲಿ ಇದ್ದುಕೊಂಡು ನೂರಾರು ವರ್ಷಗಳಿಂದ ಇಷ್ಟೊಂದು ಅದ್ಭುತವಾಗಿ ರುಚಿಕರವಾದ ಕರದಂಟು ತಯಾರಿಸಿ ರಾಜ್ಯಮಟ್ಟದಲ್ಲಿ ಕರದಂಟು ಉದ್ಯಮ ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next