Advertisement

ಅಭಿವೃದಿಗೆ ಶಿಕ್ಷಣವೇ ಮೂಲಮಂತ್ರ

05:38 PM Nov 12, 2021 | Team Udayavani |

ಗುರುಮಠಕಲ್‌: ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಮಂತ್ರವಾಗಿದ್ದು, ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಎಸ್‌ ಎಸ್‌ಕೆ ಸಮಾಜದ ಮುಖಂಡ ಚಂದ್ರಲಾಲ್‌ ಚೌದ್ರಿ ಹೇಳಿದರು.

Advertisement

ಪಟ್ಟಣದ ಅಂಕಮ್ಮದೇವಿ ದೇವಸ್ಥಾನದಲ್ಲಿ ಎಸ್‌ ಎಸ್‌ಕೆ ಸಮಾಜದ ನವ ಯುವಕ ಸಂಘದಿಂದ ಆಯೋಜಿಸಿದ್ದ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ಉತ್ತರ ಭಾರತದಲ್ಲಿ ಸಹಸ್ರಾ ನದಿ ಸಹಸ್ರಾರ್ಜುನ ಮಹಾರಾಜರ ಬಾಣದಿಂದ ಹುಟ್ಟಿದೆ. ಅದು ಇಂದಿಗೂ ಪ್ರಖ್ಯಾತಿ ಹೊಂದಿದೆ. ಕ್ರಿ.ಪೂ 2600ರಲ್ಲಿ ವಿವಿಧ ಪುರಾಣಗಳಲ್ಲಿ ಮಹಾರಾಜರ ಕುರಿತು ಉಲ್ಲೇಖಗಳಿವೆ. ಆಗ ಒಂದು ಸಹಸ್ರ ಅಶ್ವಮೇಧ ಯಜ್ಞ ಮಾಡುವುದರೊಂದಿಗೆ ಋಷಿಮುನಿಗಳ ಅಪಾರ ಸೇವೆ ಸಹಸ್ರಾರ್ಜುನ ಮಹಾರಾಜರು ಮಾಡಿದ್ದಾರೆ ಎಂದರು.

ಎಸ್‌ಎಸ್‌ಕೆ ಸಮಾಜದ ಬುಡ್ಡಪ್ಪ ಜನಾರ್ಧನ ಮಾತನಾಡಿ, ಮಹಾರಾಜರ ಸಾಕಷ್ಟು ತಪಸ್ಸುಗಳ ಫಲವಾಗಿ ದತ್ತಾತ್ರೇಯ ದೇವರಿಂದ ಸಹಸ್ರಾರ್ಜುನ ಮಹಾರಾಜರಿಗೆ ಸಹಸ್ರ ಬಾಹು ವರದಾನ ದೊರೆಯುತ್ತದೆ. ಇದನ್ನರಿತ ಅಗ್ನಿ ಋಷಿಗಳು ಮಹಾರಾಜರ ಹತ್ತಿರ ಬಂದು ನೀವೆ ನನ್ನನ್ನು ತೃಪ್ತಿ ಪಡಿಸಬೇಕೆಂದು ಕೇಳಿದಾಗ ಅವರು ತಮ್ಮ ಶಕ್ತಿಯಿಂದ ಸಾಕಷ್ಟು ಆಶ್ರಮ ಸುಡಲಾರಂಭಿಸಿದರು. ಅದರಲ್ಲಿ ಆಪವ ಋಷಿಗಳ ಆಶ್ರಮವೂ ಸುಟ್ಟು ಹೋಗಿದ್ದರಿಂದ ಕುಪಿತಗೊಂಡ ಋಷಿ ಅಗ್ನಿದೇವರಲ್ಲಿ ಇಷ್ಟು ಶಕ್ತಿ ಬರಲು ಕಾರಣೀಕರ್ತರು ಯಾರೆಂದು ತಿಳಿದು ಆಗ ಸಹಸ್ರಾರ್ಜುನ ಮಹಾರಾಜರಿಗೆ ಶಾಪ ನೀಡುವುದನ್ನು ಕಾಣುತ್ತೇವೆ ಎಂದರು. ಗುರುಮಠಕಲ್‌ ತಾಪಂ ಸಹಾಯಕ ನಿರ್ದೇಶಕ ರಾಮಚಂದ್ರರಾವ್‌ ಬಸೂದೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯ ಕುಮಾರ ಹಬೀಬ ಮಾತನಾಡಿದರು.

ದಂಡೋತಿಯ ಜಯಶ್ರೀ ಮಾತೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Advertisement

ಜಯಂತಿ ನಿಮಿತ್ತ ಬೆಳಗ್ಗೆ 8 ಗಂಟೆಗೆ ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ರಾಮಕಿಶನರಾವ್‌ ಗೊಂಗಲೆ, ಗೌರವಾಧ್ಯಕ್ಷ ನಾರಾಯಣರಾವ್‌ ಚೌಧರಿ, ಡಾ|ನರಸಿಂಗರಾವ್‌, ತುಳಸಿರಾಮ ಗೊಂಗಲೆ, ಚಂದ್ರಕಾಂತ ಚೌದರಿ, ಜಗದೀಶ ಮೇಂಗಜಿ, ಹಣಮಂತರಾವ್‌ ಗೊಂಗಲೆ, ಅನೀಲ್‌ ಬಸೂದೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next