Advertisement

ಶಿಕ್ಷಣಕ್ಕಿದೆ ಅಂಧಕಾರ ಹೊಡೆದೋಡಿಸುವ ಶಕ್ತಿ

06:12 PM Jan 29, 2021 | Nagendra Trasi |

ಇಂಡಿ: ಸಾವಿತ್ರಿಬಾಯಿ ಫುಲೆ ದೇಶದ ಪ್ರಪ್ರಥಮ ಅಕ್ಷರದ ಅವ್ವ ಎಂದರೆ ತಪ್ಪಾಗದು. ಅಂದಿನ ಅಂಧಕಾರ ಸಮಾಜದಲ್ಲಿ ಮೌಡ್ಯಗಳಿಗೆ ಸಡ್ಡು ಹೊಡೆದು ಬಡವ, ಬಲ್ಲಿದ, ದೀನ ದುರ್ಬಲರಿಗೆ ಶಿಕ್ಷಣ ನೀಡಿ ಜ್ಞಾನದ ದಾಸೋಹ ನೀಡಿದ ಮಹಾತಾಯಿ ಸಾವಿತ್ರಿಬಾಯಿ ಫುಲೆಯವರು ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.

Advertisement

ಗುರುಭವನದಲ್ಲಿ ಸರಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಸ್ಥಳೀಯ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ, ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ದೇಶದಲ್ಲಿ ಶೈಕ್ಷಣಿಕ ಪ್ರಗತಿಯಾಗುತ್ತದೆಯೋ ಆ ದೇಶ ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿಯಾಗುತ್ತದೆ. ಇಂತಹ ದೊಡ್ಡ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣಕ್ಕೆ ಮನುಷ್ಯನ ಅಂಧಕಾರವನ್ನು ಹೊಡೆದೋಡಿಸಿ ಸಚ್ಚಾರಿತ್ರವಂತನಾಗಿ ಮಾಡುವ ದಿವ್ಯಶಕ್ತಿ ಇದೆ ಎಂದರು.

ಇಂಧುಮತಿ ಸಾಲಿಮಠ ಮಹಿಳಾ ಸಬಲೀಕರಣ ಕುರಿತು ವಿವರಿಸಿದರು. ಡಾ| ಲತಾ ಮುಳ್ಳೂರಫುಲೆಯವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಡಾ| ರೇಖಾ ಪಾಟೀಲ, ಕ್ಷೇತ್ರಸಮನ್ವಯಾಧಿಕಾರಿ ಸಿ.ಎಂ. ಬಂಡಗರ ಶಿಕ್ಷಣದಲ್ಲಿ ಶಿಕ್ಷಕಿಯರ ಪಾತ್ರದ ಕುರಿತು ಉಪನ್ಯಾಸ ನೀಡಿದರು.ಅಧ್ಯಕ್ಷತೆಯನ್ನು ಮಲ್ಲಮ್ಮ ಗಿರಣಿವಡ್ಡರ ವಹಿಸಿದ್ದರು. ಸಾನ್ನಿಧ್ಯವನ್ನು ಮಹಾದೇವಿ ಮಠದ ಮಾತಾ ವನಶ್ರೀ ತಾಯಿ ವಹಿಸಿದ್ದರು.

ಸೈಪನಮಾ ಮಕಾನದಾರ, ಎಸ್‌.ಕೆ. ಮಾವಿನಮರದ, ಕ್ಷೇತ್ರಶಿಕ್ಷಣಾಧಿ ಕಾರಿ ವಸಂತ ರಾಠೊಡ, ಶಂಕರಗೌಡ ಪಾಟೀಲ, ಜಯಶ್ರೀ ದೇವರ, ನೀಲಗಂಗಾ ಅಣ್ಣೇಪ್ಪನವರ, ರಾಜಶ್ರೀ ಗೋಡಕೆ, ಎಸ್‌.ಎಂ. ತಳವಾರ, ಎನ್‌.ಎಂ. ಪಾಟೀಲ, ಜಿ.ಜಿ. ಬರಡೋಲ, ಭಾರತಿ ಉಪಾಸೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next