Advertisement
ಮಕ್ಕಳ ಮನಸ್ಸು ಶಿಕ್ಷಣದಿಂದ ದೂರವಾಗಬಾರದು ಎಂಬ ಉದ್ದೇಶದಿಂದ ಪುತ್ತೂರಿನ ನಿವಾಸಿ ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ| ರಾಜೇಶ್ ಬೆಜ್ಜಂಗಳ ಅವರು ಸ್ಥಾಪಿಸಿದ ರೀಡರ್ಸ್ ಫಾರಂ ಸಂಸ್ಥೆಯ ವಿನೂತನ ಯೋಜನೆ ಇದು.
Related Articles
Advertisement
ಇಡೀ ಯೋಜನೆ ಸಂಪೂರ್ಣ ಸೇವಾ ರೂಪದಲ್ಲೇ ಇದೆ. ಗೂಗಲ್ ಫಾರಂ ತುಂಬಿ ವಠಾರ ಪಾಠ ಯೋಜನೆಗೆ ಸೇರಿ ಎಂಬ ಕರೆಗೆ ಕಾಸರಗೋಡು, ದಕ್ಷಿಣ ಕನ್ನಡವಲ್ಲದೆ ಮೈಸೂರಿನ ಕೆಲವು ಕಡೆಗಳ ಸುಮಾರು 60ಕ್ಕೂ ಮಂದಿ ಕೈಜೋಡಿಸಿದರು. ಅನಂತರ
ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಕಾರ್ಯ ಚಟು ವಟಿಕೆಗಳ ಬಗ್ಗೆ ಮಾಹಿತಿ ವಿನಿಮಯ ನಡೆಸ ಲಾ ಯಿತು. ವಿದ್ಯಾರ್ಥಿಗಳ ಆಸಕ್ತಿಯ ಪಠ್ಯೇತರ ವಿಷಯಗಳೂ ಸೇರಿದಂತೆ ಪಠ್ಯ ವಿಷಯಗಳನ್ನು ಸ್ವಯಂಸೇವಕರು ಕಲಿಸುತ್ತಿದ್ದಾರೆ. ಹೆತ್ತವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂಸೇವಕರಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಮಕ್ಕಳ ಕೂಟಶಾಲಾ ತರಗತಿಗಳು ಪುನಾರಾರಂಭಗೊಂಡ ಬಳಿಕ ವಠಾರ ಪಾಠ ಯೋಜನೆಯಲ್ಲಿ ಸೇರಿದವರನ್ನು ಮುಂದುವರಿಸಿ ಮಕ್ಕಳ ಕೂಟ ಹುಟ್ಟುಹಾಕುವ ಚಿಂತನೆ ನಡೆದಿದೆ. ಇದರಲ್ಲಿ ವಾರಕೊಮ್ಮೆ ಅವರ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ವೇದಿಕೆ ಒದಗಿಸಲು ಯೋಜಿಸಲಾಗಿದೆ. ಧನಾತ್ಮಕ ನೆಲೆಯಲ್ಲಿ ಪ್ರಾರಂಭಗೊಂಡ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ.
400 ಫಲಾನುಭವಿಗಳು :
2021ರ ಜುಲೈಯಲ್ಲಿ ಆರಂಭವಾದ ಈ ಪ್ರಯತ್ನದಲ್ಲಿ ಈ ವರೆಗೆ 60 ಮಂದಿ ಪದವೀಧರರು ಪ್ರತೀ ಬ್ಯಾಚಲ್ಲಿ ಐವರು ವಿದ್ಯಾರ್ಥಿಗಳಂತೆ ಸುಮಾರು 400 ಮಂದಿಗೆ ಬೋಧಿಸಿದ್ದಾರೆ.
ಜುಲೈಯಲ್ಲಿ ವಠಾರ ಪಾಠದ ಚಿಂತನೆ ಹುಟ್ಟಿಕೊಂಡಿತ್ತು. ಮನೆ ಪರಿಸರದ ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಪಠ್ಯೇತರ ಕಲಿಕೆಯನ್ನು ಉಚಿತವಾಗಿ ಕಲ್ಪಿಸುವ ಕರೆಗೆ ಅಪೂರ್ವ ಸ್ಪಂದನೆ ದೊರೆತಿದೆ. ಮಕ್ಕಳನ್ನು ಸದಾ ಚಟುವಟಿಕೆಯಿಂದ ಇರಿಸುವ ಪ್ರಯತ್ನಕ್ಕೆ ವಿದ್ಯಾವಂತರ ಬಳಗ ಕೈ ಜೋಡಿಸಿದೆ. – ಡಾ| ರಾಜೇಶ್ ಬೆಜ್ಜಂಗಳ, ನಿರ್ದೇಶಕ, ಕಣ್ಣೂರು ವಿ.ವಿ. ಭಾರತೀಯ ಭಾಷಾ, ಅಧ್ಯಯನಾಂಗ ಕನ್ನಡ ವಿಭಾಗ
-ಕಿರಣ್ ಪ್ರಸಾದ್ ಕುಂಡಡ್ಕ