Advertisement

ಮಕ್ಕಳಿಗೆ ಬಾಲ್ಯದಿಂದಲೇ ನೈತಿಕ ಶಿಕ್ಷಣ ನೀಡಿ

02:55 PM Feb 09, 2022 | Team Udayavani |

ಸುರಪುರ: ಮಕ್ಕಳು ಭವಿಷ್ಯದಲ್ಲಿ ನಾಡಿನ ಉತ್ತಮ ಪ್ರಜೆಗಳು. ಈ ದಿಸೆಯಲ್ಲಿ ಮಕ್ಕಳಿಗೆ ಈಗಿಂದಲೇ ನೈತಿಕ ಮೌಲ್ಯ ತಿಳಿಸಿಕೊಡಬೇಕು ಎಂದು ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಬಂಡಾರೆ ಹೇಳಿದರು.

Advertisement

ರುಕ್ಮಾಪುರದ ಕೊಟ್ಟೂರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾರಾಯಣಪ್ಪ ಬಂಡಾರೆಯವರ ಸ್ಮರಣೋತ್ಸವ ನಿಮಿತ್ತ ಮಂಗಳವಾರ ನಡೆದ ರಸಪ್ರಶ್ನೆ ವಿಜೇತ ಮಕ್ಕಳಿಗೆ ಪುಸ್ತಕ ಮತ್ತು ನೋಟ್‌ಬುಕ್‌ ವಿತರಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಾಮರಸ್ಯ ಹಾಳಾಗುತ್ತಿದೆ. ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುತ್ತಿಲ್ಲ. ಇದಕ್ಕೆಲ್ಲ ನೈತಿಕ ಮೌಲ್ಯಗಳ ಕುಸಿತವೇ ಕಾರಣವಾಗಿದೆ. ಆದ್ದರಿಂದ ಶಿಕ್ಷಕರು ಸಾಧ್ಯವಾದಷ್ಟು ಮಕ್ಕಳಲ್ಲಿ ನೈತಿಕ ಶಿಕ್ಷಣ ನೀಡಬೇಕು ಎಂದರು.

ನಿವೃತ್ತ ಡಿಡಿಪಿಯು ಗುರುಲಿಂಗಪ್ಪ ಮಿಣಜಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಡಾರೆ ಶಿಕ್ಷಣದ ಬಗ್ಗೆ ಹೆಚ್ಚು ಒಲವುಳ್ಳವರು. ಯಾರೇ ಭೇಟಿಯಾಗಲಿ ಗ್ರಾಮದ ಎಲ್ಲರ ಬಗ್ಗೆ ವಿಚಾರಿಸುತ್ತಿದ್ದರು. ನಮ್ಮೂರಿನ ಯುವಕರು ದೊಡ್ಡ ಹುದ್ದೆಗಳಿಗೆ ಬರಬೇಕು ಎಂಬುದು ಅವರ ಮಹಾದಾಸೆ ಎಂದರು.

ಇದೇ ವೇಳೆ ವಿಜೇತ ಮಕ್ಕಳಿಗೆ ಎಳೆಯರ ಮಹಾಭಾರತ, ರಾಮಾಯಣ, ಭಗವದ್ಗೀತೆ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ತೆನಾಲಿ ರಾಮಕೃಷ್ಣ, ಮಹಾತ್ಮ ಗಾಂಧೀಜಿ, ಡಾ| ಅಂಬೇಡ್ಕರ್‌, ಬಸವೇಶ್ವರ ಸೇರಿದಂತೆ ಇತರೆ ಮಹಾತ್ಮರ ಪುಸ್ತಕ ಹಾಗೂ ನೋಟ್‌ಬುಕ್‌ ವಿತರಿಸಿದರು.

Advertisement

ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ನಿವೃತ್ತ ಪ್ರಾಚಾರ್ಯ ಸಂಗಪ್ಪ ಸಲೇಗಾರ, ಪತ್ರಕರ್ತ ಸುಭಾಶ ಬಣಗಾರ, ದೇವಿಂದ್ರ ದೇವಶೆಟ್ಟಿ, ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next