ಮಹೋತ್ಸವವಾಗಿ ವಿಶ್ವವಿಖ್ಯಾತವಾಗಿದೆ.
Advertisement
ಅಥೆನ್ಸ್‌ನಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ಸ್‌ನಲ್ಲಿ 14 ದೇಶಗಳ 214 ಕ್ರೀಡಾಳುಗಳು 10 ಕ್ರೀಡೆಗಳ ಒಟ್ಟು 43 ವಿಭಾಗಗಳ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರೆ ಈಗ 2024ರಲ್ಲಿ ನಡೆಯುತ್ತಿರುವ 33ನೇ ಅವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿಶ್ವದಾದ್ಯಂತದ 206 ದೇಶಗಳ 10,500ಕ್ಕೂ ಅಧಿಕ ಕ್ರೀಡಾಳುಗಳು 32 ಕ್ರೀಡೆಗಳ ಒಟ್ಟು 329 ಉಪವಿಭಾಗಗಳ ಸ್ಪರ್ಧೆಗಳಲ್ಲಿ ಸೆಣಸಾಟ ನಡೆಸಲಿದ್ದಾರೆ. ಈ ಅಂಕಿಅಂಶಗಳೇ ಒಲಿಂಪಿಕ್ಸ್ ಪಂದ್ಯಾವಳಿಯ ಅಗಾಧತೆ, ವೈಶಿಷ್ಟé ಮತ್ತು ಮಹತ್ವವನ್ನು ಸಾರುತ್ತವೆ.
Related Articles
Advertisement
ಇವೆಲ್ಲರದ ಪರಿಣಾಮವಾಗಿ ಟೋಕಿಯೊ ಒಲಿಂಪಿಕ್ಸ್‌ನಿಂದೀಚೆಗೆ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಒಂದಿಷ್ಟು ಹೊಳಪು ಮೂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿವಿಧ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ನಿರ್ವಹಣೆತೋರುತ್ತಲೇ ಬಂದಿರುವುದರಿಂದ ಸಹಜವಾಗಿಯೇ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನತ್ತ ದೇಶದ ಜನತೆ ಕುತೂಹಲದ ದೃಷ್ಟಿ ಬೀರಿದ್ದಾರೆ. ಹಾಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 117 ಮಂದಿ ಭಾರತೀಯ ಕ್ರೀಡಾಳುಗಳು ವಿವಿಧ ಕ್ರೀಡೆಗಳ ಒಟ್ಟು 16 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಜಾವೆಲಿನ್, ವೇಟ್ ಲಿಫ್ಟಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಶೂಟಿಂಗ್, ಗಾಲ್ಫ್, ಹಾಕಿ, ಬಾಕ್ಸಿಂಗ್, ಆರ್ಚರಿ, ಸ್ವಿಮ್ಮಿಂಗ್‌ನಲ್ಲಿ ಭಾರತೀಯ ಕ್ರೀಡಾಳುಗಳು ಪದಕದ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಈ ಬಾರಿ ಭಾರತೀಯ ಕ್ರೀಡಾಪಟುಗಳು ಪದಕಗಳ ಗಳಿಕೆಯಲ್ಲಿ ಹಿಂದಿನ ದಾಖಲೆಯನ್ನು ಮುರಿಯುವುದರ ಜತೆಯಲ್ಲಿ ಅತ್ಯಮೋಘ ನಿರ್ವಹಣೆ ಯನ್ನು ತೋರಿ ದೇಶದ ಕ್ರೀಡಾಜ್ಯೋತಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ದೇಶದ ಕ್ರೀಡಾಭಿಮಾನಿಗಳು. ಸರಕಾರ ಮತ್ತು ಸಂಘಸಂಸ್ಥೆಗಳ ಪ್ರೋತ್ಸಾಹ, ಕ್ರೀಡಾಳುಗಳ ಪರಿಶ್ರಮ ಫಲಪ್ರದವಾಗಿ ಪ್ಯಾರಿಸ್ ಒಲಿಂಪಿಕ್ಸ್ ಭಾರತೀಯರಿಗೆ ಸದಾ ನೆನಪಿನಲ್ಲಿ ಉಳಿಯುವಂತಾಗಲಿ.