Advertisement
ಪರಿಸ್ಥಿತಿ ಹೀಗಿರುವಾಗ “ವಿಸ್ಡನ್ ಕ್ರಿಕೆಟ್’ ಪತ್ರಿಕೆಯ ಸಂಪಾದಕ ಡೇವಿಡ್ ಫ್ರಿತ್, “ಭಾರತದಂಥ ತಂಡವನ್ನು ಇಂಥ ಪ್ರತಿಷ್ಠಿತ ಕೂಟಕ್ಕೆ ಆರಿಸಲೇಬಾರದು. ಭಾರತಕ್ಕೆ ಚಾಂಪಿಯನ್ ಆಗಲು ಖಂಡಿತ ಸಾಧ್ಯವಿಲ್ಲ’ ಎಂದು ಬರೆದಿದ್ದರು. ಇನ್ನೂ ಮುಂದು ವರಿದು, “ಅಕಸ್ಮಾತ್ ಭಾರತ ವಿಶ್ವಕಪ್ ಎತ್ತಿದ್ದೇ ಆದಲ್ಲಿ ನಾನಿಲ್ಲಿ ಬರೆದುದನ್ನು ಕಾಗದ ಸಮೇತ ನುಂಗುತ್ತೇನೆ’ ಎಂದು ಚಾಲೆಂಜ್ ಕೂಡ ಹಾಕಿದ್ದರು.
ಡೇವಿಡ್ ಫ್ರಿತ್‌ಗೆ ತಾನು ಬರೆ ದದ್ದು ನೆನಪಿನಲ್ಲಿತ್ತೋ ಇಲ್ಲವೋ, ಆದರೆ ನ್ಯೂ ಜೆರ್ಸಿಯಲ್ಲಿರುವ ಭಾರತೀಯ ಮೂಲದ ಮಾನ್ ಸಿಂಗ್ ಎಂಬ ಓದುಗರೊಬ್ಬರು ಇದನ್ನು ನೆನಪಿಸಿದರು. ಫ್ರಿತ್ ಹಿಂದೇಟು ಹಾಕಲಿಲ್ಲ. ಕೊಟ್ಟ ಮಾತಿನಂತೆ ಆ ಬರಹವುಳ್ಳ ವಿಸ್ಡನ್ ಪತ್ರಿಕೆಯ ಪುಟಗಳನ್ನು ಹರಿದು ತಿಂದೇ ಬಿಟ್ಟರು. ಮುಂದಿನ ಸಂಚಿಕೆ ಯಲ್ಲಿ ತಾನು ಕಾಗದ ತಿನ್ನುತ್ತಿರುವ ಚಿತ್ರವನ್ನೂ ಪ್ರಕಟಿಸಿ ಓದುಗರಿಂದ ಶಹಬ್ಟಾಸ್‌ಗಿರಿ ಪಡೆದರು! ಫ್ರಿತ್ ಕಾಗದ ತಿನ್ನುತ್ತಿರುವ ಚಿತ್ರ ಹಾಗೂ ಮಾನ್ ಸಿಂಗ್ ಅವರ ಪತ್ರ 1983ರ ಸೆಪ್ಟಂಬರ್ ಸಂಚಿಕೆಯ “ವಿಸ್ಡನ್’ ಸಂಚಿಕೆಯಲ್ಲಿ ಒಟ್ಟೊಟ್ಟಿಗೇ ಪ್ರಕಟವಾಗಿತ್ತು.