Advertisement

ಪೀಡಕನ ಹಿಡಿದದ್ದು ಸಿಬಂದಿ

06:00 AM May 15, 2018 | Team Udayavani |

ತಿರುವನಂತಪುರ: ಕೇರಳದ ಮಣಪ್ಪುರಂದಲ್ಲಿ ಆಭರಣ ಉದ್ಯಮಿ ಮೊಯಿದೀನ್‌ ಕುಟ್ಟಿ 10 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣವು ಬೆಳಕಿಗೆ ಬಂದಿದ್ದು ಸಿನಿಮಾ ಥಿಯೇಟರಿನ ಸಿಬಂದಿ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದಾಗ.

Advertisement

ಅಂದು ನಡೆದಿದ್ದಿಷ್ಟು. ಎಲ್ಲ ಸಮಯದಲ್ಲೂ ಸಿಸಿಟಿವಿ ಗಮನಿಸುವಂಥ ಸಿಬಂದಿ, ಅಂದು ಇನ್ನೊಂದು ಸ್ಕ್ರೀನ್‌ನಲ್ಲಿ ಯಾವುದೋ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಸಿಸಿಟಿವಿ ವೀಕ್ಷಿಸಿರಲಿಲ್ಲ. 9 ಗಂಟೆ ಹೊತ್ತಿಗೆ ಸಿಸಿಟಿವಿ ವೀಕ್ಷಿಸಲು ಆಗಮಿಸಿದಾಗ ಮಗುವಿನ ಮೇಲೆ ದೌರ್ಜನ್ಯ ನಡೆಯುತ್ತಿರು ವುದು ಕಂಡುಬಂತು ಎಂದಿದ್ದಾರೆ ಸಿಬಂದಿ ಸನೂಪ್‌. ಸ್ಕ್ರೀನ್‌ ಜೂಮ್‌ ಮಾಡಿದಾಗ ನನ್ನ ಅನುಮಾನ ನಿಜವಾಯಿತು. ಆದರೆ, ಸಿನಿಮಾ ಮುಗಿಯಲು 10 ನಿಮಿಷವಷ್ಟೇ ಬಾಕಿಯಿತ್ತು. ಕೂಡಲೇ ಥಿಯೇಟರ್‌ ಮ್ಯಾನೇಜರ್‌ಗೆ ತಿಳಿಸಿದೆ. ಮಕ್ಕಳ ಸಹಾಯವಾಣಿ ಅಧಿಕಾರಿ ಗಳಿಗೆ ವಿಡಿಯೋ ಹಸ್ತಾಂತರಿಸಿದೆವು. ಸಿನಿಮಾ ಮುಗಿಯುತ್ತಿದ್ದಂತೆ ಮೊಯಿದೀನ್‌ನನ್ನು ಬೆನ್ನಟ್ಟಿ ಹೋಗಿ, ಆತನ ಬೆಂಜ್‌ ಕಾರಿನ ನಂಬರ್‌ ಅನ್ನು ಬರೆದುಕೊಂಡೆವು. ದೌರ್ಜ ನ್ಯದ ವೇಳೆ ಮಗು ಮುಂದಿನ ಸೀಟಿನಲ್ಲಿ, ಮಗುವಿನ ತಾಯಿ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.

ಇಡೀ ವಿಡಿಯೋ ವೀಕ್ಷಿಸಿ ಮರುದಿನ ಪೊಲೀಸರಿಗೆ ದೂರು ನೀಡಲಾಯಿತು. ಪ್ರತಿ ದಿನ  ಕರೆ ಮಾಡಿ ಪ್ರಕರಣದ ವರದಿ ಕೇಳುತ್ತಿ ದ್ದೆವು. ಆದರೆ ಟಿವಿ ಚಾನೆಲ್‌ ಈ ದೃಶ್ಯ ಪ್ರಸಾರ ಮಾಡುವವರೆಗೂ ಪೊಲೀಸರು ಯಾವ ಕ್ರಮ ವನ್ನೂ ಕೈಗೊಳ್ಳಲಿಲ್ಲ ಎಂದಿದ್ದಾರೆ ಸನೂಪ್‌.

ಸದ್ಯ ಮೊಯಿದೀನ್‌ ಕುಟ್ಟಿಯನ್ನು ಹಾಗೂ ದೌರ್ಜನ್ಯ ನಡೆಯುತ್ತಿದ್ದರೂ ತಡೆಯದ ಆಕೆಯ ತಾಯಿಯನ್ನೂ ಬಂಧಿಸಲಾಗಿದೆ. ಮೊಯಿದೀನ್‌ ಕುಟ್ಟಿ ಈ ಭಾಗದಲ್ಲಿ ಸ್ವರ್ಣ ಕುಟ್ಟಿ  ಎಂದೇ ಹೆಸರಾಗಿದ್ದ. ಅಷ್ಟೇ ಅಲ್ಲ, ಕಥುವಾದ ಆಸಿಫಾ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆಯಲ್ಲೂ ಮುಂದೆನಿಂತು ಭಾಗವಹಿಸಿದ್ದ! ಆದರೆ ಆತನೇ ಇದೀಗ ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next