Advertisement

ಸಚಿವ ಜಮೀರ್‌ಗೆ ಇ.ಡಿ ಸಮನ್ಸ್‌

01:53 AM Jun 29, 2019 | Sriram |
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಚಿವ ಜಮೀರ್‌ ಅಹ್ಮದ್‌ಗೆ ಸಂಕಷ್ಟ ಎದುರಾಗಿದೆ. ಐಎಂಎ ಕಂಪನಿಗೆ ಆಸ್ತಿ ಮಾರಾಟ ಮಾಡಿ ಹಣ ಪಡೆದ ಬಗ್ಗೆ ಸ್ಪಷ್ಟೀಕರಣ ಕೋರಿರುವ ಜಾರಿ ನಿರ್ದೇಶನಾಲಯ ಜಮೀರ್‌ ಅಹ್ಮದ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ.

ಶುಕ್ರವಾರ ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿ ನೀಡಿದ್ದ ಇಡಿ ಅಧಿಕಾರಿಗಳ ತಂಡ, ಐಎಂಎ ಕಂಪನಿ ಜತೆಗಿನ ಆಸ್ತಿ ಮಾರಾಟ ಹಾಗೂ ಹಣಕಾಸು ವ್ಯವಹಾರದ ಬಗ್ಗೆ ವಿಚಾರಣೆಗೆ ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ಸಮನ್ಸ್‌ ನೀಡಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಜಮೀರ್‌ ಅಹ್ಮದ್‌, ಜುಲೈ 5ರೊಳಗೆ ಐಎಂಎಗೆ ಮಾರಾಟ ಮಾಡಿರುವ ಆಸ್ತಿಗೆ ಸಂಬಂಧಿಸಿ ದಾಖಲೆ ಕೇಳಿದ್ದಾರೆ. ಎಲ್ಲಾ ದಾಖಲೆಗಳೂ ನನ್ನ ಬಳಿ ಇವೆ. ಅವುಗಳನ್ನು ಒದಗಿಸುತ್ತೇನೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next