Advertisement

ಲಾಲು ಪ್ರಸಾದ್‌ ಅಳಿಯ ರಾಹುಲ್‌ ಯಾದವ್‌ಗೆ ಇಡಿ ಸಮನ್ಸ್‌

12:02 PM Jan 16, 2018 | udayavani editorial |

ಹೊಸದಿಲ್ಲಿ : ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥರಾಗಿರುವ ಲಾಲು ಪ್ರಸಾದ್‌ ಯಾದವ್‌ ಅವರ ಇನ್ನೋರ್ವ ಅಳಿಯ ರಾಹುಲ್‌ ಯಾದವ್‌ ಅವರಿಗೆ ಜಾರಿ ನಿರ್ದೇಶನಾಲಯ, ಸಂಸದೆ ಮೀಸಾ ಭಾರತಿ ಮತ್ತು ಇತರರಿಂದ ನಡೆದಿರುವ ಹಣ ದುರಪಯೋಗ ಕೇಸಿಗೆ ಸಂಬಂಧಿಸಿ ಸಮನ್ಸ್‌ ಜಾರಿ ಮಾಡಿದೆ.

Advertisement

ರಾಹುಲ್‌ ಯಾದವ್‌ ಅವರು ತಮ್ಮ ಅತ್ತೆ ರಾಬ್ರಿ ದೇವಿ (ಲಾಲು ಅವರ ಪತ್ನಿ) ಅವರಿಗೆ ಅಕ್ರಮ ಹಣ ವರ್ಗಾಯಿಸಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಆತನಿಗೆ ಸಮನ್ಸ್‌ ಕಳುಹಿಸಿದೆ. 

ಸುಮಾರು 1 ಕೋಟಿ ರೂ. ಅಕ್ರಮ ವರ್ಗಾವಣೆ ಮಾಡಿರುವ ಸಂಬಂಧ ವಿವರಣೆ ಕೊಡುವಂತೆ ಸೂಚಿಸಿ ರಾಹುಲ್‌ ಯಾದವ್‌ (ಲಾಲು ಅವರ ನಾಲ್ಕನೇ ಪುತ್ರಿ ರಾಗಿಣಿ ಅವರ ಪತಿ) ಗೆ ತನ್ನ ಮುಂದೆ ಹಾಜರಾಗಿ ಸಾಕ್ಷ್ಯ ನುಡಿಯುವಂತೆ ಸೂಚಿಸಿ ಇಡಿ ಸಮನ್ಸ್‌ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ.  

Advertisement

Udayavani is now on Telegram. Click here to join our channel and stay updated with the latest news.

Next