ಹೊಸದಿಲ್ಲಿ: ನೋಟು ಅಪನಗದೀಕರಣದ ಬಳಿಕ ಕಪ್ಪು ಹಣ ವನ್ನು ಬಿಳಿಯಾಗಿಸುವಲ್ಲಿ ಸಹಕರಿಸಿದ ಗುಮಾನಿಯಲ್ಲಿ ಶನಿವಾರ ಭಾರೀ ಕಾರ್ಯಾಚರಣೆಗಿಳಿದಿರುವ ಜಾರಿ ನಿರ್ದೇಶನಾಲಯ ಏಕಕಾಲದಲ್ಲಿ ದೇಶದ 16 ರಾಜ್ಯಗಳ 100 ಕಡೆಗಳಲ್ಲಿ 300 ಬೇನಾಮಿ ಕಂಪೆನಿಗಳ ಮೇಲೆ ದಾಳಿ ನಡೆಸಿ ಭ್ರಷ್ಟರಿಗೆ ಶಾಕ್ ನೀಡಿದೆ.
ಬೆಂಗಳೂರು, ಚೆನ್ನೈ,ದೆಹಲಿ,ಮುಂಬಯಿ, ಭುವನೇಶ್ವರ, ಕೋಲ್ಕತಾ ಸೇರಿದಂತೆ ಇತರೆಡೆ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ದಾಳಿಗೊಳಗಾದ ಕಂಪೆನಿಗಳು 500 ರೂ ಮತ್ತು 1000 ರೂಪಾಯಿ ನೋಟುಗಳ ವರ್ಗಾಯಿಸುವಲ್ಲಿ ಕಪ್ಪು ಕುಳಗಳಿಗೆ ನೆರವಾಗಿ ನೂರಾರು ಕೋಟಿ ಅವ್ಯವಹಾರ ನಡೆಸಿದ್ದವು ಎನ್ನಲಾಗಿದೆ.
ಮುಂಬಯಿಯಲ್ಲಿ ಒಬ್ಬನ ಹೆಸರಿನಲ್ಲಿ ನೂರಾರು ನಕಲಿ ಕಂಪೆನಿಗಳಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಈತನ ಡೈರಿಯಲ್ಲಿ ಎನ್‌ಸಿಪಿ ನಾಯಕ ಛಗನ್ ಭುಜ್‌ಬಲ್‌ಗೆ 46 ಕೋಟಿ ರೂ ಹಣ ನೀಡಿರುವ ಬಗ್ಗೆ ಬರೆದಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.