Advertisement

CBI ತನಿಖೆಗೆ ಒಳಪಟ್ಟಿದ್ದ ಇಡಿ ಅಧಿಕಾರಿಯ ಶ*ವ ರೈಲ್ವೆ ಹಳಿಯಲ್ಲಿ ಪತ್ತೆ!

01:05 PM Aug 21, 2024 | Team Udayavani |

ಹೊಸದಿಲ್ಲಿ: ಆಪಾದಿತ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ(CBI) ತನಿಖೆಗೆ ಒಳಪಟ್ಟಿದ್ದ ಜಾರಿ ನಿರ್ದೇಶನಾಲಯದ(ED) ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲೋಕ್ ಕುಮಾರ್ ಪಂಕಜ್ ಅವರ ಮೃ*ತದೇಹ ಮಂಗಳವಾರ(ಆ 20) ದೆಹಲಿ ಸಮೀಪದ ಸಾಹಿಬಾಬಾದ್‌ನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.

Advertisement

ಗಾಜಿಯಾಬಾದ್‌ನ ನಿವಾಸಿಯಾಗಿರುವ ಅಲೋಕ್‌ಕುಮಾರ್‌, ದೆಹಲಿಯಲ್ಲಿ ಇಡಿಯಲ್ಲಿ ಡೆಪ್ಯುಟೇಶನ್‌ನಲ್ಲಿದ್ದರು. ಈ ಹಿಂದೆ ಅವರು ಆದಾಯ ತೆರಿಗೆ ಇಲಾಖೆಯಲ್ಲಿ(IT) ಕೆಲಸ ಮಾಡಿದ್ದರು. ಇತ್ತೀಚೆಗೆ, ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸಿಬಿಐ ಅವರನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಿತು ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೈಬಿಡಲಾಗಿತ್ತು.

ಪೊಲೀಸರು ಮೃ*ತದೇಹವನ್ನು ಮ*ರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದು ಆತ್ಮಹತ್ಯೆಗೆ ಕಾರಣ ತನಿಖೆಯ ನಂತರ ತಿಳಿದು ಬರಬೇಕಿದೆ.

ಇಡಿ ಸಹಾಯಕ ನಿರ್ದೇಶಕ ಸಂದೀಪ್ ಸಿಂಗ್ ಅವರನ್ನು ಸಿಬಿಐ ಬಂಧಿಸಿದ ನಂತರ ಲಂಚ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಂಕಜ್ ಹೆಸರು ಕೇಳಿಬಂದಿತ್ತು. ತನ್ನ ಮಗನನ್ನು ಬಂಧಿಸದಿರಲು 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರಿಂದ ಸಿಬಿಐ ದೂರು ಸ್ವೀಕರಿಸಿದ ನಂತರ ಲಂಚ ಸ್ವೀಕರಿಸುವಾಗ ಸಂದೀಪ್ ಸಿಂಗ್  ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next