Advertisement

ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಯ ಆರೋಪದಲ್ಲಿ ಸಿಲುಕಿಕೊಂಡ ಅಮೆಜಾನ್

01:31 PM Jan 30, 2021 | Team Udayavani |

ನವದೆಹಲಿ: ಸರಕುಗಳ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ಭಾರತದ ನೀತಿ ನಿಯಮಗಳನ್ನು ಉಲ್ಲಂಘಿಸಿರುವ  ಆರೋಪದಲ್ಲಿ ವಿಶ್ವದ ಖ್ಯಾತ ಆನ್ ಲೈನ್ ಮಾರುಕಟ್ಟೆ ಮಳಿಗೆಯಾಗಿರುವ ಅಮೆಜಾನ್ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.ವಿದೇಶಿ ವಿನಿಮಯ ಕಾಯ್ದೆ(FEMA)ಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Advertisement

ಈ ಕುರಿತಾಗಿ ಮಾಹಿತಿ ನೀಡಿರುವ ಅಮೆಜಾನ್ ವಕ್ತಾರರು ‘ಅಮೆಜಾನ್ ವಿರುದ್ಧವಾಗಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿರುವ ಕುರಿತಾಗಿ ಯಾವುದೇ ಮಾಹಿತಿ ತಿಳಿದು ಬಂದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಮಗನ ಮೇಲೆ ಬಾಂಬ್ ಎಸೆದು ಕೊಲ್ಲಲು ಹೋದ ತಂದೆಯೇ ಸ್ಫೋಟಕ್ಕೆ ಬಲಿ

ಕಾನೂನು ಬಾಹಿರವಾಗಿ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳು ಹೂಡಿಕೆ ಮಾಡುವ ಮೂಲಕ FEMA ಮತ್ತು FDI ನಿಯಮಗಳನ್ನು  ಉಲ್ಲಂಘಿಸಿದೆ ಎಂದು ಅಖಿಲ ಭಾರತ ವ್ಯಾಪಾರಿ ಒಕ್ಕೂಟವು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಫ್ಯೂಚರ್ ಗ್ರೂಪ್ ರಿಲಯನ್ಸ್ ನ 24713 ಕೋಟಿ ರೂ. ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆಜಾನ್  ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಭವಿಷ್ಯದ ಚಿಲ್ಲರೆ ವ್ಯಾಪಾರವನ್ನು ನಿಯಂತ್ರಿಸುವ ಕ್ರಮಗಳನ್ನು ಅಮೆರಿಕಾ ಮೂಲದ ಕಂಪನಿಗಳು ಮಾಡುವ ಮೂಲಕ ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿತ್ತು.

Advertisement

ಇದನ್ನೂ ಓದಿ: ಹೊಕ್ಕಾಡಿಗೋಳಿಯಲ್ಲಿ ‘ವೀರ-ವಿಕ್ರಮ’ ಜೋಡುಕರೆ ಬಯಲು ಕಂಬಳಕ್ಕೆ ಸಂಭ್ರಮದ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next