Advertisement

ಹಗರಣ: ಇಡಿಯಿಂದ ಪಶ್ಚಿಮ ಬಂಗಾಳದ ಮಾಜಿ ಸಚಿವನ ತೀವ್ರ ವಿಚಾರಣೆ

02:42 PM Nov 07, 2022 | Team Udayavani |

ಕೋಲ್ಕತಾ : ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಸೋಮವಾರ ಪಶ್ಚಿಮ ಬಂಗಾಳದ ಮಾಜಿ ಸಚಿವ ಪರೇಶ್ ಅಧಿಕಾರಿಯನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.

Advertisement

ಈ ಹಿಂದೆ ಇದೇ ಪ್ರಕರಣದಲ್ಲಿ ಸಿಬಿಐನಿಂದ ವಿಚಾರಣೆಗೊಳಗಾಗಿದ್ದ ಅಧಿಕಾರಿ ಮತ್ತೆ ವಿಚಾರಣೆ ಎದುರಿಸಲು ಬೆಳಗ್ಗೆ ಇಡಿ ಕಚೇರಿಯ ಸಿಜಿಒ ಕಾಂಪ್ಲೆಕ್ಸ್‌ಗೆ ಆಗಮಿಸಿದ್ದರು ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಶಿಕ್ಷಣ ಖಾತೆಯ ಮಾಜಿ ಸಚಿವ ತಮ್ಮ ಪುತ್ರಿ ಅಂಕಿತಾ ಅವರನ್ನು ಕೂಚ್ ಬೆಹಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯನ್ನಾಗಿ ನೇಮಿಸಿಕೊಳ್ಳಲು ಕಾನೂನುಬಾಹಿರ ಮಾರ್ಗಗಳನ್ನು ಅನುಸರಿಸಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ.

ಕಲ್ಕತ್ತಾ ಹೈಕೋರ್ಟ್ ಈ ವರ್ಷದ ಆರಂಭದಲ್ಲಿ ಅಂಕಿತಾ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು ಮತ್ತು ಅವರು 2018 ರಿಂದ ಶಿಕ್ಷಕಿಯಾಗಿ ಪಡೆದ ಸಂಬಳವನ್ನು ಹಿಂದಿರುಗಿಸುವಂತೆ ಹೇಳಿತ್ತು. ಆಗಸ್ಟ್‌ನಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕ್ಯಾಬಿನೆಟ್ ಪುನರ್ ರಚನೆಯ ಸಮಯದಲ್ಲಿ ಅಧಿಕಾರಿಯನ್ನು ತಮ್ಮ ಸಚಿವಾಲಯದಿಂದ ಕೈಬಿಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next