Advertisement

ಜೈಲಲ್ಲಿ ಅದ್ದೂರಿ ಬದುಕಿಗಾಗಿ ತಿಂಗಳಿಗೆ ಕೋಟಿ ರೂ. ಲಂಚ!

01:31 AM Dec 18, 2021 | Team Udayavani |

ಹೊಸದಿಲ್ಲಿ: 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಖೇಶ್‌ ಚಂದ್ರಶೇಖರ್‌, ತಿಹಾರ್‌ ಜೈಲಿನಲ್ಲೇ ಅದ್ದೂರಿ ಜೀವನ ನಡೆಸಲು ಜೈಲಧಿಕಾರಿಗಳಿಗೆ ತಿಂಗಳಿಗೆ ಒಂದು ಕೋಟಿ ರೂ. ಲಂಚ ಕೊಟ್ಟಿದ್ದಾನೆ. ಜಾರಿ ನಿರ್ದೇಶನಾಲಯ (ಇಡಿ)ದ ಮೂಲಗಳನ್ನು ಉಲ್ಲೇಖಿಸಿ”ನ್ಯೂಸ್‌ 18′ ಈ ವರದಿ ಮಾಡಿದೆ.

Advertisement

ಬಾಲಿವುಡ್‌ ನಟಿಯರಾದ ಜಾಕ್ವೆಲಿನ್‌ ಫ‌ರ್ನಾಂಡೀಸ್‌, ನೋರಾ ಫ‌ತೇಹಿಯ ರೊಂದಿಗೆ ಸ್ನೇಹದಿಂದಿದ್ದ ಸುಖೇಶ್‌ನನ್ನು ನೋಡುವುದಕ್ಕೆ ತಿಹಾರ್‌ ಜೈಲಿಗೆ 12ಕ್ಕೂ ಅಧಿಕ ನಟಿಯರು ಬಂದಿದ್ದರು. ಸುಖೇಶ್‌ಗೆ ಜೈಲಿನೊಳಗೇ ಒಂದು ಕಚೇರಿಯಿದೆ. ಅದರಲ್ಲಿ ಸೋಫಾ, ಫ್ರಿಡ್ಜ್, ಎಸಿ, ಮಿನರಲ್‌ ನೀರಿನ ಬಾಟಲಿ ಸೇರಿ ಎಲ್ಲ ಸೌಲಭ್ಯಗಳೂ ಇವೆ. ಆತನೊಂದಿಗೆ ಜೈಲು ಸೇರಿರುವ ಆತನ ಪತ್ನಿ ಲೀನಾ ಮರಿಯಾ ಪೌಲ್‌, ಯಾವುದೇ ಅನುಮತಿ ಇಲ್ಲದೆಯೇ ಆತನ ಕಚೇರಿಗೆ ಬಂದು ಹೋಗುತ್ತಿರುತ್ತಾಳೆ. ಅವರಿಬ್ಬರೂ ಅಲ್ಲೇ ಚಿಕನ್‌ ಪಾರ್ಟಿಯನ್ನೂ ಮಾಡುತ್ತಾರೆ ಎಂದು ಇಡಿ ಮೂಲ ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ:ಪೆಗಾಸಸ್‌ ವಿವಾದ: ಪ.ಬಂಗಾಳಕ್ಕೆ ಮುಖಭಂಗ; ಸಮಿತಿಯ ತನಿಖೆಗೆ ಸುಪ್ರೀಂ ಕೋರ್ಟ್‌ ತಡೆ

ಆದರೆ ಸುಖೇಶ್‌ ಮಾತ್ರ “ಜೈಲಿನಲ್ಲಿ ವ್ಯವಸ್ಥೆ ಸರಿಯಿಲ್ಲ. ಭೇದ ಭಾವ ಮಾಡಲಾಗುತ್ತಿದೆ. ನನ್ನ ಪತ್ನಿಯನ್ನು ಭೇಟಿ ಮಾಡುವುದಕ್ಕೂ ಅವಕಾಶ ಕೊಡಲಾಗುತ್ತಿಲ್ಲ’ ಎಂದು ಜೈಲಧಿಕಾರಿ ಗಳಿಗೆ ಪತ್ರ ಬರೆದಿದ್ದಾನೆ,

Advertisement

Udayavani is now on Telegram. Click here to join our channel and stay updated with the latest news.

Next