Advertisement

ಫಡ್ನವಿಸ್ ಪತ್ನಿಯಿಂದ ಸುಲಿಗೆಗೆ ಯತ್ನ; ಬುಕ್ಕಿ ಜೈಸಿಂಘಾನಿ 3.4 ಕೋಟಿ ರೂ.ಆಸ್ತಿ ಜಪ್ತಿ

03:34 PM Jun 17, 2023 | Team Udayavani |

ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬುಕ್ಕಿ ಅನಿಲ್ ಜೈಸಿಂಘಾನಿ ಅವರ 3.4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ (ಜಾರಿ ನಿರ್ದೇಶನಾಲಯ) ಮುಟ್ಟುಗೋಲು ಹಾಕಿಕೊಂಡಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರನ್ನು ಅನಿಲ್ ಜೈಸಿಂಘಾನಿ ತನ್ನ ಪುತ್ರಿಯನ್ನು ಬಳಸಿಕೊಂಡು ಸುಲಿಗೆ ಮಾಡಲು ಮತ್ತು ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸಿದ್ದ.

Advertisement

2015 ರಲ್ಲಿ ಗುಜರಾತ್‌ನ ವಡೋದರಾ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಅನಿಲ್ ಜೈಸಿಂಘಾನಿ ಸೇರಿದಂತೆ ವಿವಿಧ ಕ್ರಿಕೆಟ್ ಬುಕ್ಕಿಗಳ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ.

ಅನಿಲ್ ಜೈಸಿಂಘಾನಿ ಕ್ರಿಕೆಟ್ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಮೋಸದ ಚಟುವಟಿಕೆಗಳ ಮೂಲಕ, ಬೆಟ್ಟಿಂಗ್ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಮೂಲಕ ಭಾರಿ ಮೊತ್ತದ ಹಣವನ್ನು ಸಂಗ್ರಹಿಸಿದ್ದಾರೆ” ಎಂದು ಇಡಿ ತಿಳಿಸಿದೆ. ಮೂಲಗಳ ಪ್ರಕಾರ ಹೆಚ್ಚಿನ ಆಸ್ತಿ ಲಗತ್ತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಅಧಿಕಾರಿಗಳ ಪ್ರಕಾರ, ಅನಿಲ್ ಜೈಸಿಂಘಾನಿ ಅವರು 2015 ರಿಂದ ಇಡಿ ಸಮನ್ಸ್ ತಪ್ಪಿಸಿಕೊಳ್ಳುತ್ತಿದ್ದರು ಮತ್ತು 2015 ರಲ್ಲಿ ಅವರ ವಿರುದ್ಧ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್ (NBW) ಹೊರಡಿಸಿದ್ದರೂ PMLA ತನಿಖೆಗೆ ಸಹಕರಿಸಲಿಲ್ಲ. ಐಪಿಎಲ್ ಬೆಟ್ಟಿಂಗ್‌ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಂಘಾನಿಯನ್ನು ಈ ವರ್ಷ ಎ 8 ರಂದು ಇಡಿ ಬಂಧಿಸಿತ್ತು. ಅಧಿಕಾರಿಗಳು ಜೂನ್ 6 ರಂದು ಅಹಮದಾಬಾದ್‌ನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಜೈಸಿಂಘಾನಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next