Advertisement

M3M ಗ್ರೂಪ್ ನಿರ್ದೇಶಕ ರೂಪ್ ಕುಮಾರ್ ಬನ್ಸಾಲ್ ರನ್ನು ಬಂಧಿಸಿದ ED

04:45 PM Jun 09, 2023 | Team Udayavani |

ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಇಡಿ) ಗುರುಗ್ರಾಮ್ ಮೂಲದ ರಿಯಾಲ್ಟಿ ಕಂಪನಿ M3M ನ ನಿರ್ದೇಶಕರನ್ನು ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಬಂಧಿಸಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

Advertisement

ರೂಪ್ ಕುಮಾರ್ ಬನ್ಸಾಲ್ ಅವರನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 1 ರಂದು, ಫೆಡರಲ್ ತನಿಖಾ ಸಂಸ್ಥೆಯು M3M ಗ್ರೂಪ್ ಮತ್ತು ಅದರ ನಿರ್ದೇಶಕರ ವಿರುದ್ಧ ಹಾಗೂ ಇನ್ನೊಂದು ರಿಯಲ್ ಎಸ್ಟೇಟ್ ಸಮೂಹವಾದ IREO ವಿರುದ್ಧ ದೆಹಲಿ ಮತ್ತು ಗುರುಗ್ರಾಮ್‌ನಲ್ಲಿ ದಾಳಿಗಳನ್ನು ನಡೆಸಿತ್ತು.

M3M ಗ್ರೂಪ್‌ನ ಮಾಲಕರು, ನಿಯಂತ್ರಕರು ಮತ್ತು ಪ್ರವರ್ತಕರಾದ ಬಸಂತ್ ಬನ್ಸಾಲ್, ರೂಪ್ ಕುಮಾರ್ ಬನ್ಸಾಲ್, ಪಂಕಜ್ ಬನ್ಸಾಲ್ ಮತ್ತು ಇತರ ಪ್ರಮುಖ ವ್ಯಕ್ತಿಗಳು ದಾಳಿಯ ಸಮಯದಲ್ಲಿ ತನಿಖೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿದ್ದಾರೆ ಎಂದು ಅದು ನಂತರ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿತ್ತು.

ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಸೋಮವಾರ ತಿಳಿಸಿತ್ತು. ಎರಡು ಗ್ರೂಪ್ ಗಳ ಮೇಲೆ ದಾಳಿ ನಡೆಸಿದಾಗ 60 ಕೋಟಿ ಮೌಲ್ಯದ ಫೆರಾರಿ, ಲಂಬೋರ್ಗಿನಿ ಮತ್ತು ಬೆಂಟ್ಲಿ ಸೇರಿದಂತೆ 5.75 ಕೋಟಿ ಮೌಲ್ಯದ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ.

Advertisement

ಬನ್ಸಾಲ್ ಸೇರಿದಂತೆ ಎಂ3ಎಂ ನಿರ್ದೇಶಕರು ಇಡಿ ಪ್ರಕರಣವನ್ನು ರದ್ದುಪಡಿಸಲು ಹುಡುಕಾಟದ ನಂತರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಮತ್ತು ಅವರಿಗೆ ನೀಡಲಾದ ಸಮನ್ಸ್‌ಗಳು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿರುವುದಾಗಿ ಮೂಲಗಳು ಸೂಚಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next