Advertisement

ಕೋವಿಡ್ ಪೂರ್ವದ ಹಂತಕ್ಕೆ ಅರ್ಥವ್ಯವಸ್ಥೆ ಚೇತರಿಕೆ

01:04 AM Aug 10, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮತ್ತೆ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದ್ದು, ಆ.8ಕ್ಕೆ ಮುಕ್ತಾಯಗೊಂಡ ವಾರದಲ್ಲಿ ಶೇ.99.4ರಷ್ಟು ಹೆಚ್ಚಾಗಿವೆ.

Advertisement

ನೊಮುರಾ ಇಂಡಿಯಾ ಬ್ಯುಸೆನೆಸ್‌ ರೆಸಮ್ಮನ್‌ ಇಂಡೆಕ್ಸ್‌ (ಎನ್‌ಐಬಿಆರ್‌ಐ)ನ ಅಧ್ಯಯನದಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಕಳೆದ ವಾರದ ಲೆಕ್ಕಾಚಾರಗಳನ್ನು ಗಮನಿಸಿದಾಗ ಶೇ.94ರಷ್ಟು ಚಟುವಟಿಕೆಗಳು ಶುರುವಾಗಿದ್ದವು, ನೊಮುರಾ ಇಂಡಿಯಾದ ವಿಶ್ಲೇಷಕ ಸೋನಲ್‌ ವರ್ಮಾ ತಮ್ಮ ಟಿಪ್ಪಣಿಯಲ್ಲಿ “ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಗಮನಿಸಿದಾಗ ಕೊರೊನಾ ಹರಡುವುದಕ್ಕೆ ಮೊದಲು ಇದ್ದ ಸ್ಥಿತಿಗೆ ತಲುಪಿದೆ.

ಇದರಿಂದಾಗಿ ಸೋಂಕಿನ 2ನೇ ಅಲೆ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಗಿಂತ ಉತ್ತಮವಾಗಿದೆ’ ಎಂದು ಉಲ್ಲೇಖೀಸಿದ್ದಾರೆ. ಗೂಗಲ್‌ ವರ್ಕ್‌ಪ್ಲೇಸ್‌, ಚಿಲ್ಲರೆ ಮಾರಾಟ ಕ್ಷೇತ್ರ, ಮನರಂಜನೆ ಮತ್ತು ಆ್ಯಪಲ್‌ ಡ್ರೈವಿಂಗ್‌ ಇಂಡೆಕ್ಸ್‌ ಕ್ರಮವಾಗಿ ಶೇ.7.4, 5.3, ಮತ್ತು ಶೇ.6.7ರಷ್ಟು ಬೆಳವಣಿಗೆ ದಾಖಲಿಸಿದೆ. ಲಾಕ್‌ಡೌನ್‌ ತೆರವುಗೊಂಡ ಬಳಿಕ ವಿದ್ಯುತ್‌ ಬಳಕೆ ಪ್ರಮಾಣ ಕೂಡ ಹೆಚ್ಚಾಗಿದೆ.

ನೊಮುರಾ ಇಂಡೆಕ್ಸ್‌ ಪ್ರಕಾರ ಸತತ ಮೂರು ವಾರಗಳ ಅವಧಿಯಲ್ಲಿ ಶೇ.5.3ರಷ್ಟು ಹೆಚ್ಚಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಿಗಳು, ನೌಕರರು ಕರ್ತವ್ಯದಲ್ಲಿ ತೊಡಗಿಸಿ ಕೊಂಡಿರುವವರ ಪ್ರಮಾಣ ಶೇ. 39.8 ರಿಂದ ಶೇ.41.5ರ ವರೆಗೆ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next