Advertisement

ಈ ವರ್ಷ ದೇಶದ ಇಂಟರ್‌ನೆಟ್‌ ಆರ್ಥಿಕತೆಗೆ ವೇಗ

01:12 AM Feb 14, 2021 | Team Udayavani |

ಹೊಸದಿಲ್ಲಿ: ಈ ವರ್ಷ ದೇಶದ ಇಂಟರ್‌ನೆಟ್‌ ಆರ್ಥಿಕತೆಯು ಭರ್ಜರಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಾಧ್ಯತೆಯಿದೆ.

Advertisement

ಆಹಾರ ಸರಬರಾಜು ಸ್ಟಾರ್ಟಪ್‌ ಝೊಮ್ಯಾಟೊ, ಕೊರಿಯರ್‌ ಸೇವಾದಾರ ದೆಲಿವರಿ, ಫ್ಲಿಪ್‌ಕಾರ್ಟ್‌ ಮತ್ತು ಇ-ಟೈಲರ್‌ ನ್ಯಾಕಾ ಕಂಪೆನಿಗಳು 2021ರಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ.

ಕಳೆದ ಐದು ವರ್ಷಗಳಲ್ಲಿ ಭಾರತೀಯ ಇಂಟರ್‌ನೆಟ್‌ ಸ್ಟಾರ್ಟಪ್‌ಗ್ಳಲ್ಲಿ 6 ಸಾವಿರ ಕೋಟಿ ಡಾಲರ್‌ಗಳಿಗೂ ಅಧಿಕ ಬಂಡವಾಳ ಹೂಡಿಕೆಯಾಗಿದ್ದರೆ, 2020 ವರ್ಷವೊಂದರಲ್ಲೇ 1,200 ಕೋಟಿ ಡಾಲರ್‌ ಹೂಡಿಕೆಯಾಗಿದೆ. ಇವುಗಳಲ್ಲಿ ಬಹುತೇಕ ಸ್ಟಾರ್ಟಪ್‌ಗ್ಳು ಹೊಸ ವರ್ಷದಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎಂದು ಎಚ್‌ಎಸ್‌ಬಿಸಿ ಗ್ಲೋಬಲ್‌ ರಿಸರ್ಚ್‌ ಇತ್ತೀಚೆಗೆ ವರದಿಯೊಂದರಲ್ಲಿ ತಿಳಿಸಿದೆ.

ದೇಶದ ಇಂಟರ್‌ನೆಟ್‌ ಆರ್ಥಿಕತೆಯ ಒಟ್ಟು ಮೌಲ್ಯವು 2025ರ ವೇಳೆಗೆ 18 ಸಾವಿರ ಕೋಟಿ ಡಾಲರ್‌ ದಾಟಲಿದೆ ಎಂದು ಅದು ಭವಿಷ್ಯ ನುಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next