ಲಂಡನ್: 2008ರ ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಸ್ಪಷ್ಟ ಭವಿಷ್ಯ ನುಡಿದಿದ್ದ ಇರಾನ್ ಮೂಲದ ಅರ್ಥಶಾಸ್ತ್ರಜ್ಞ ನೋರಿಯಲ್ ರುಬಿನಿ ಜಗತ್ತಿಗೆ ಮತ್ತೊಂದು ಶಾಕ್ ನೀಡಿದ್ದಾರೆ.
ಅಮೆರಿಕ ಸೇರಿ ವಿಶ್ವಾದ್ಯಂತ ಈ ವರ್ಷದ ಅಂತ್ಯದಲ್ಲೇ ಹಿಂದಿನದ್ದಕ್ಕಿಂತಲೂ ಭೀಕರವಾದ ಮತ್ತು ದೀರ್ಘಾವಧಿಯ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ ಎಂದು ರುಬಿನಿ ಹೇಳಿದ್ದಾರೆ.
2023ರ ವರ್ಷಪೂರ್ತಿ ಈ ಹಿಂಜರಿತ ಇರಲಿದೆ ಎಂದೂ ಭವಿಷ್ಯ ನುಡಿದಿದ್ದಾರೆ.
ಸಾಮಾನ್ಯ ಆರ್ಥಿಕ ಬಿಕ್ಕಟ್ಟಿನಲ್ಲಿ ಅಮೆರಿಕದ ಷೇರು ಮಾರುಕಟ್ಟೆ ಶೇ.30ರಷ್ಟು ಕುಸಿತ ಕಾಣುತ್ತದೆ. ಪ್ರಸಕ್ತ ವರ್ಷದ ಹಿಂಜರಿತದ ವೇಳೆ ಅದು ಶೇ.40ರಷ್ಟು ಪತನಗೊಳ್ಳುವ ಸಾಧ್ಯತೆಯಿದೆ ಎಂದೂ ರುಬಿನಿ ಮ್ಯಾಕ್ರೋ ಅಸೋಸಿಯೇಟ್ಸ್‌ನ ಮುಖ್ಯಸ್ಥರಾದ ನೋರಿಯಲ್ ರುಬಿನಿ ಹೇಳಿದ್ದಾರೆ.
2008ರಿಂದ 2008ರ ವೇಳೆ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂಬ ರುಬಿನಿ ಅವರ ಭವಿಷ್ಯ ನೂರಕ್ಕೆ ನೂರರಷ್ಟು ನಿಜವಾಗಿತ್ತು. ಹೀಗಾಗಿ ಅವರಿಗೆ “ಡಾಕ್ಟರ್ ಡೂಮ್’ ಎಂಬ ಹೆಸರೂ ಬಂದಿತ್ತು.