Advertisement

ಆರ್ಥಿಕ ಸಮೀಕ್ಷೆಯ ಥಾಲಿನಾಮಿಕ್ಸ್: ದೇಶದಲ್ಲಿ ನಾನ್ ವೆಜ್ ಥಾಲಿಗಿಂತ ವೆಜ್ ಥಾಲಿ ದರ ಕಡಿಮೆ!

09:42 AM Feb 01, 2020 | Hari Prasad |

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ದೇಶದಲ್ಲಿನ ಆರ್ಥಿಕ ಪರಿಸ್ಥಿತಿಯು ಆಹಾರ ಪದಾರ್ಥಗಳ ಬೆಲೆಗಳ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಿದೆ ಎಂಬ ಅಂಶದ ಮೇಲೆ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ಮಾಡಿದೆ.

Advertisement

ಈ ಸಮೀಕ್ಷೆಯಲ್ಲಿ ಬಹಿರಂಗಗೊಂಡಿರುವಂತೆ ಸಸ್ಯಾಹಾರಿ ಥಾಲಿಗಳ ಬೆಲೆಯು 2015-16ರಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಹಾಗೂ 2019ರಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡಿರುವುದು ದಾಖಲಾಗಿದೆ. ಸಸ್ಯಾಹಾರಿ ಥಾಲಿಗಳ ಕೈಗೆಟಗುವಿಕೆ 2006-07 ಮತ್ತು 2019-20ರ ನಡುವೆ 29% ಸುಧಾರಣೆಗೊಂಡಿರುವುದು ಈ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಇದೇ ಸಂದರ್ಭದಲ್ಲಿ ಮಾಂಸಾಹಾರಿ ಥಾಲಿ ಕೈಗೆಟಗುವಿಕೆ 18% ಸುಧಾರಣೆಕಂಡಿದೆ.

ಸಾಮಾನ್ಯ ಕೈಗಾರಿಕಾ ಉದ್ಯೋಗಿಯೊಬ್ಬನ ವಾರ್ಷಿಕ ಆದಾಯವನ್ನು ಪರಿಗಣಿಸಿ ನಡೆಸಿರುವ ಈ ಸಮೀಕ್ಷೆಯ ಪ್ರಕಾರ ಸಸ್ಯಾಹಾರಿ ಥಾಲಿ ಖರೀದಿ ಸಾಮರ್ಥ್ಯವು 2006-07 ಮತ್ತು 2019-20ರ ನಡುವೆ 29% ಸುಧಾರಣೆ ಕಂಡಿದ್ದರೆ, ಮಾಂಸಾಹಾರಿ ಥಾಲಿ ಖರೀದಿ ಸಾಮರ್ಥ್ಯವು 18% ಸುಧಾರಣೆ ಕಂಡಿದೆ.

25 ರಾಜ್ಯಗಳ ಸುಮಾರು 80 ಕೇಂದ್ರಗಳಲ್ಲಿನ ಗ್ರಾಹಕ ದರ ಸೂಚ್ಯಂಕ ಮಾಹಿತಿಗಳನ್ನು ಈ ಸಮೀಕ್ಷೆಯು ವಿಶ್ಲೇಷಣೆಗೊಳಪಡಿಸಿ ಥಾಲಿಗಳ ದರ ನಿರ್ಣಯಕ್ಕೆ ಅದು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಜನಸಾಮಾನ್ಯರು ಸೇವಿಸುವ ಆಹಾರ ಪದಾರ್ಥಗಳ ಅಂಶವನ್ನು ಮೂಲವಾಗಿಟ್ಟುಕೊಂಡು ನಡೆಸಿರುವ ಪ್ರಥಮ ಸಮೀಕ್ಷೆ ಇದಾಗಿದೆ.

ಜನಸಾಮಾನ್ಯರು ತಾವು ಸೇವಿಸುವ ಆಹಾರಕ್ಕೆ ಎಷ್ಟು ದರವನ್ನು ನೀಡುತ್ತಾರೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನ ಇದಾಗಿದೆ ಎಂದು ಈ ಸಮೀಕ್ಷೆಯ ರೂವಾರಿ ಮುಖ್ಯ ಆರ್ಥಿಕ ಸಲಹೆಗಾರ ಕೆ. ಸುಬ್ರಮಣಿಯಣ್ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಆರ್ಥಿಕತೆಯು ಜನಸಾಮಾನ್ಯರ ಜೀವನದ ಮೇಲೆ ಹಲವು ರೀತಿಯಲ್ಲಿ ಪ್ರಭಾವವನ್ನು ಬೀರುತ್ತದೆ ಆದರೆ ಇದು ಬಹಳಷ್ಟು ಸಂದರ್ಭಗಳಲ್ಲಿ ಗಮನಕ್ಕೆ ಬಂದಿರುವುದಿಲ್ಲ. ಹಾಗಾಗಿ ಜನಸಾಮಾನ್ಯರು ಪ್ರತೀದಿನ ಅನುಭವಿಸುವ ವಿಷಯಗಳಿಗೆ ಆರ್ಥಿಕತೆಯನ್ನು ಅನ್ವಯಿಸುವು ಉತ್ತಮ ವಿಧಾನವಾಗಿದ್ದು, ತಾನು ಸೇವಿಸುವ ಆಹಾರ ಎಷ್ಟು ಅಗ್ಗದಲ್ಲಿ ಅವರಿಗೆ ದೊರೆಯುತ್ತದೆ ಎಂಬುದನ್ನು ಕಂಡುಕೊಳ್ಳುವುದೂ ಸಹ ಆರ್ಥಿಕತೆಯನ್ನು ಅಳೆಯುವ ಉತ್ತಮ ವಿಧಾನವಾಗಿದೆ ಎಂದು ಸಮೀಕ್ಷೆಯ ಪ್ರಾರಂಭದಲ್ಲಿ ಹೇಳಲಾಗಿದೆ. ಇದನ್ನೇ ಅದು ಥಾಲಿನಾಮಿಕ್ಸ್ ಎಂದು ಕರೆದಿದೆ.

ಐದು ಜನರಿರುವ ಒಂದು ಕುಟುಂಬವು ವರ್ಷ ಒಂದರಲ್ಲಿ 10,887 ಆಹಾರಕ್ಕೆ ವ್ಯಯಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅದೇ ಮಾಂಸಾಹಾರಿ ಕುಟುಂಬವು ವರ್ಷಕ್ಕೆ 11787 ರೂಪಾಯಿಗಳನ್ನು ವ್ಯಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಈ ಸಮೀಕ್ಷೆಯು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next