ಮುಳಬಾಗಿಲು: ಭ್ರಷ್ಟಾಚಾರ ನಿಯಂತ್ರಿಸಿದರೆ ಮಾತ್ರ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ಹೇಳಿದರು.
ನಗರದ ಅಮರಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಏರ್ಪ ಡಿಸಿದ್ದ ಸಂಕ್ರಾಂತಿ ನೃತ್ಯ ಸಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ದೇಶದಲ್ಲಿ ಭ್ರಷ್ಟಾ ಚಾರ ತಾಂಡವವಾಡುತ್ತಿದೆ. ಅದನ್ನು ನಿಯಂತ್ರಿಸಿದರೆ ಮಾತ್ರ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಆದರೆ, ನಿರುದ್ಯೋಗ ಹೆಚ್ಚಾಗಿದ್ದು, ಇಂದಿನ ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆಯಿಂದ ಉತ್ತಮ ವಿದ್ಯೆ ನೀಡುವುದು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೌಲ್ಯಯುತ ಸಮಾಜ ನಿರ್ಮಿಸಿ: ಇಂತಹ ಸನ್ನಿವೇಶ ದಲ್ಲಿ ವೃತ್ತಿ ತರಬೇತಿಗೆ ಇಂತಹ ಕಾಲೇಜುಗಳು ಅಗತ್ಯವಾಗಿದೆ. ಉತ್ತಮ ಶಿಕ್ಷಣ ಪಡೆದ ವಿದ್ಯಾ ರ್ಥಿಗಳು ದುರಾಸೆ ಮತ್ತು ಅಪ್ರಾಮಾಣಿಕತೆಯ ಸಮಾಜವನ್ನು ಬದಲಿಸಲು ಗಟ್ಟಿಯಾಗಿ ನಿಲ್ಲುವ ಮೂಲಕ ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಿಂದೆ ಜನರು ಪ್ರಾಮಾಣಿಕರಾಗಿದ್ದರು: ದೇಶ ದುರಾಸೆಯ ಹಿಂದೆ ಓಡುತ್ತಿದೆ, ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳಿಗೆ ನೈತಿಕ ಮೌಲ್ಯ, ಶಾಂತಿ ಸೌಹಾರ್ದ ಮತ್ತು ನೆಮ್ಮದಿ ಜೀವನ ರೂಢಿಸಿ ಕೊಳ್ಳುವುದನ್ನು ಕಲಿಯಬೇಕು, ಹಿಂದೆ ಜನರು ಪ್ರಾಮಾಣಿಕರಾಗಿದ್ದರು. ಮತ್ತೂಬ್ಬ ಪ್ರಾಮಾಣಿಕ ರನ್ನು ಗುರುತಿಸಿ ಅಭಿನಂದಿಸುತ್ತಿದ್ದರು. ಆದರೆ, ಪ್ರಸ್ತುತ ಜನರು ಮಾನವೀಯತೆ ಮರೆಯುತ್ತಿದ್ದಾರೆ. ಶ್ರೀಮಂತರಾಗಬೇಕೆಂಬ ದುರಾಸೆಯಿಂದ ಒಬ್ಬರನ್ನು ತುಳಿದು ಅಥವಾ ಇನ್ನೊಬ್ಬರಿಗೆ ಮೋಸ ಮಾಡಿ ಶ್ರೀಮಂತಿಕೆ ಮತ್ತು ಅಧಿಕಾರ ಪಡೆದು ಅಪ್ರಮಾಣಿಕರಾಗಿದ್ದಾರೆ ಎಂದು ವಿಷಾದಿಸಿದರು.
Related Articles
ಜೈಲಿಗೆ ಹೋಗಿ ಬಂದ್ರೆ ಹಾರ ಹಾಕ್ತಾರೆ: ಹಿಂದೆ ಕಾರಣಾಂತರಗಳಿಂದ ಜೈಲಿಗೆ ಹೋಗಿ ಬಂದವರ ಕುಟುಂಬವನ್ನು ಜನರು ಕೀಳಾಗಿ ನೋಡುತ್ತಿದ್ದರು. ಆದರೆ, ಪ್ರಸ್ತುತ ಜೈಲಿಗೆ ಹೋಗಿ ಬರುವವರಿಗೆ ಹಾರ ತುರಾಯಿ ಹಾಕಿ, ಜೈಕಾರ ಹಾಕಿ ಅಭಿನಂದಿ ಸುತ್ತಿದ್ದಾರೆಂದು ವಿಷಾದಿಸಿದರು. ಇಂತಹ ಸಮಾಜ ವನ್ನು ಬದಲಾಯಿಸಲು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಮೇರು ವ್ಯಕ್ತಿಗಳಾಗಬೇಕೆಂದರು.
ಸಂಸ್ಥೆ ಪ್ರಾರಂಭಿಸಿ 24 ವರ್ಷ: ಅಮರಜ್ಯೋತಿ ವಿದ್ಯಾಸಂಸ್ಥೆ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಮಾತನಾಡಿ, ತಾಲೂಕಿನ ಜನತೆಗೆ ಉತ್ತಮ ವಿದ್ಯೆ ನೀಡುವ ನಿಟ್ಟಿನಲ್ಲಿ ಸಂಸ್ಥೆಯನ್ನು ಪ್ರಾರಂಭಿಸಿ 24 ವರ್ಷ ಆಗಿದೆ. ಪ್ರಾಥಮಿಕ ಹಂತದಿಂದ ಪದವಿವ ರೆಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಾಕಷ್ಟು ಮೈಲಿಗಲ್ಲು ಸಾಧಿಸಲಾಗಿದೆ. ಇಷ್ಟು ವರ್ಷಗಳಿಂದ ವಿದ್ಯಾಸಂಸ್ಥೆ ಬೆಳೆಯಲು ಪ್ರೋತ್ಸಾಹ ನೀಡಿದ ಸಾರ್ವಜನಿಕರು, ಅಧಿಕಾರಿಗಳು, ಉಪನ್ಯಾ ಸಕರು, ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ರಂಗನಾಥ್, ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸಮೃದ್ಧಿ ಮಂಜುನಾಥ್, ಅಮರಜ್ಯೋತಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಆರ್.ಅಶೋಕ್‌ಕುಮಾರ್, ಬಿಇಒ ಗಂಗರಾಮಯ್ಯ, ಪ್ರಾಂಶುಪಾಲ ಸತ್ಯ ಮಯ್ಯ, ಮುಖ್ಯ ಶಿಕ್ಷಕರಾದ ಚಂಗಾರೆಡ್ಡಿ, ಮುನಿ ನಾರಾಯಣಪ್ಪ, ಪಿ.ಎಸ್.ವರದರಾಜಪ್ಪ, ಎಂ. ಗೊಲ್ಲಹಳ್ಳಿ ಪ್ರಭಾಕರ್, ರೆಸಾರ್ಟ್ ಚಂದ್ರಹಾಸ್, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.