ಚಿಕ್ಕೋಡಿ: ರೈತ ಮತ್ತು ಸೈನಿಕ ನಮ್ಮ ನಾಡಿನ ಎರಡು ಕಣ್ಣುಗಳು. ರೈತರು ಮತ್ತು ಸೆ„ನಿಕರು ಇಲ್ಲದಿದ್ದರೆ ನಾವು ಬದುಕಲು ಸಾಧ್ಯವಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರಾಯೋಜಕತ್ವದಲ್ಲಿ ಆರಂಭಗೊಂಡ ಬಸವಣ್ಣ ರೈತರ ಉತ್ಪಾದಕ ಕಂಪನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಮತ್ತು ಸೆ„ನಿಕರ ಅಭಿವೃದ್ಧಿಗೆ ವಿಶೇಷ ಯೋಜನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋ ಯವರು ಜಾರಿಗೆ ತಂದಿದ್ದಾರೆ. ರೈತರ ಮಕ್ಕಳೂ ಸಹ ಒಳ್ಳೆಯ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರಕಾರ ರೈತರ ಮಕ್ಕಳಿಗೆ ಶಿಷ್ಯವೇತನ ಘೋಷಣೆ ಮಾಡಿದೆ ಎಂದು ಹೇಳಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದರು. ದಲ್ಲಾಳಿಗಳ ಹಾವಳಿ ಹೋಗಲಾಡಿಸಲು ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಈ ಕಾರ್ಯಕ್ರಮ ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು. ದೇಶದ ಪ್ರತಿ ಜಿಲ್ಲೆಗಳಲ್ಲಿಯೂ ರೈತರ ಉತ್ಪಾದಕರ ಸಂಘಗಳನ್ನು ಆರಂಭಿಸಲು ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ದುರ್ಯೋಧನ ಐಹೋಳೆ ಮಾತನಾಡಿ, ರೈತರು ತಮ್ಮ ಬೆಳೆಯನ್ನು ಈ ರೈತರ ಉತ್ಪಾದಕ ಕಂಪನಿಯಲ್ಲಿಯೇ ಮಾರಾಟ ಮಾಡುವ ಮುಖಾಂತರ ಹೆಚ್ಚಿನ ಲಾಭ ಪಡೆದುಕೊಂಡು ಆರ್ಥಿಕ ಸಬಲತೆ ಸಾಧಿಸಲು ಮುಂದಾಗಬೇಕು ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಮತ್ತು ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮಿಗಳು ಮಾತನಾಡಿದರು. ಬಸವಣ್ಣ ರೈತರ ಉತ್ಪಾದಕ ಕಂಪನಿಯ ಕಚೇರಿಯನ್ನು ಸಚಿವ ಉಮೇಶ ಕತ್ತಿ ಉದ್ಘಾಟಿಸಿದರು.
ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಉಪ ಕೃಷಿ ನಿರ್ದೇಶಕ ಎಲ್.ಐ.ರೂಡಗಿ ಮಾತನಾಡಿದರು. ಅಪ್ಪಾಸಾಬ ಚೌಗಲಾ, ರವಿ ಹಿರೇಕೂಡಿ, ದಾನಪ್ಪಾ ಕೊಟಬಾಗಿ, ಚಿದಾನಂದ ಕಪಲಿ, ಎಂ.ಐ. ಬೆಂಡವಾಡೆ, ಸಂಜಯ ಪಾಟೀಲ, ರುದ್ರಪ್ಪಾ ಸಂಗಪ್ಪಗೋಳ, ಸಂತ್ರಾಮ ಕುಂಡ್ರುಕ್, ಅಶೋಕ ಸಿಂಗಾಯಿ, ರಾಮಪ್ಪ ಹುಚ್ಚನ್ನವರ, ಮಾರುತಿ ಹಿರೇಕೂಡಿ ಮುಂತಾದವರು ಉಪಸ್ಥಿತರಿದ್ದರು. ದುಂಡಪ್ಪಾ ಬೆಂಡವಾಡೆ ಪ್ರಾಸ್ತಾವಿಕ ಮಾತನಾಡಿದರು. ರಾಜು ಹರಗನ್ನವರ ಸ್ವಾಗತಿಸಿದರು.