ಅಸಂಘಟಿತ ಕಾರ್ಮಿಕರಿಗೆಲ್ಲರಿಗೂ ಆರ್ಥಿಕ ಭದ್ರತೆ ಕಲ್ಪಿಸಿಕೊಡುವ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
Advertisement
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಡೆದಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ, ಕಾನೂನು ಅರಿವು ಮತ್ತು ನೋಂದಣಿ ಅಭಿಯಾನದ ರಥಕ್ಕೆ ಚಾಲನೆ
ನೀಡಿ ಮಾತನಾಡಿದ ಅವರು, ಈ ಯೋಜನೆಯಲ್ಲಿ 18 ವರ್ಷದಿಂದ 40 ವರ್ಷದವರೆಗೆ ಇರುವ ಅಸಂಘಟಿತ ಕಾರ್ಮಿಕರು ಪ್ರತಿ ತಿಂಗಳು 55 ರೂ.ನಿಂದ 200 ರೂ.ವರೆಗೆ ಬ್ಯಾಂಕಿನಲ್ಲಿ ಹಣವನ್ನು ಜಮಾವಣೆ ಮಾಡಿದರೆ, 60 ವರ್ಷದ ನಂತರ
ಜೀವಿತಾವಧಿವರೆಗೂ 3000 ರೂ. ಪಿಂಚಣಿ ಪ್ರತಿ ತಿಂಗಳು ಪಡೆಯಬಹುದು ಎಂದರು.
ಉತ್ತಮವಾದ ಕಾರ್ಯಕ್ರಮವಾಗಿದೆ. ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಇದು ವರದಾನವಾಗಿದೆ. ಆಕಸ್ಮಿಕವಾಗಿ ಮರಣಕ್ಕೆ ತುತ್ತಾದರೆ ಅವರ ಅವಲಂಬಿತರಿಗೆ(ಹೆಂಡತಿ, ಗಂಡ, ಮಕ್ಕಳು) ಜೀವಿತಾವಧಿವರೆಗೂ ಪ್ರತಿ ತಿಂಗಳು 3000 ರೂ. ಪಿಂಚಣಿ ಬರುತ್ತದೆ. ಈ ಯೋಜನೆಯನ್ನು ಎಲ್ಲರೂ ಕೂಡ ಉಪಯೋಗಿ ಸಿ ಕೊಳ್ಳಬೇಕು. ಹೆಚ್ಚಿನ ಜಾಗೃತಿಯನ್ನು ಪಡೆದರೆ ಹೇಗೆ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿರುವವರಿಗೆ ಸೇವಾ ಭದ್ರತೆ, ಪಿಂಚಣಿ ಸೌಲಭ್ಯ ಸಿಗುವುದೋ
ಆ ನಿಟ್ಟಿನಲ್ಲಿ ಈ ಯೋಜನೆಯ ಸೌಲಭ್ಯವನ್ನು ಅಸಂಘಟಿತ ಕೂಲಿ ಕಾರ್ಮಿಕರೆಲ್ಲರೂ ಪಡೆಯಬಹುದು ಎಂದು ತಿಳಿಸಿದರು. ಇದನ್ನೂ ಓದಿ:ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು: ಕುಮಾರಸ್ವಾಮಿ ಒತ್ತಾಯ
Related Articles
ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಉತ್ತಮವಾದ ಸಂಬಳವನ್ನು ಪಡೆಯುತ್ತಾರೆ. ನಿವೃತ್ತಿಯ ನಂತರ ಸರ್ಕಾರದ ಸೌಲಭ್ಯಗಳನ್ನು ಪಡೆದು ರಕ್ಷಣಾತ್ಮಕ ಜೀವನವನ್ನು ಸಾಗಿಸುತ್ತಿರುತ್ತಾರೆ. ಆ ಹಿನ್ನಲೆಯಲ್ಲಿ ಅಸಂಘಟಿತ ಕೂಲಿ ಕಾರ್ಮಿಕರ ಹಿತಶಕ್ತಿಗಾಗಿ, ಭದ್ರತೆಗಾಗಿ ಸರ್ಕಾರ ಈ ಕಾರ್ಯಕ್ರಮ ಮಾಡಿದ್ದು, ಯೋಜನೆ ಉತ್ತಮವಾಗಿದೆ.
Advertisement
ಅಸಂಘಟಿತ ಕಾರ್ಮಿಕರು 60 ವರ್ಷದ ನಂತರ ವಯೋ ಸಹಜವಾಗಿ ಕೆಲಸ ಮಾಡಲು ಸಾಧ್ಯವಿಲ್ಲದಿದ್ದಾಗ ಈ ಯೋಜನೆಯಿಂದ ಪ್ರತಿ ತಿಂಗಳು ಪಿಂಚಣಿ ಸೌಲಭ್ಯ ಪಡೆದು ರಕ್ಷಣಾತ್ಮಕ ಜೀವನವನ್ನು ಸಾಗಿಸಬಹುದು ಎಂದು ಹೇಳಿದರು.
ಉಪವಿಭಾಗ ಕಾರ್ಮಿಕ ಅಧಿಕಾರಿ ಎಚ್. ಆರ್.ನಾಗೇಂದ್ರ, ಎಸ್.ಎಂ.ಮಂಜುಳಾ ದೇವಿ, ಕಾರ್ಮಿಕ ನಿರೀಕ್ಷಕರಾದ ಎಂ.ಸ್ವಾಮಿ,ಬಿ.ಎನ್.ನಾಗರತ್ನ ಸೇರಿದಂತೆ ಅನೇಕರು ಹಾಜರಿದ್ದರು.