Advertisement

ದೇಶದ ಆರ್ಥಿಕ ಸ್ಥಿತಿ ಉತ್ತಮ: ನಿರ್ಮಲಾ

11:17 PM Apr 26, 2023 | Team Udayavani |

ಕಲಬುರಗಿ: ದೇಶದ ಆರ್ಥಿಕ ಸ್ಥಿತಿ ಸ್ಥಿರವಾಗಿದೆ ಮತ್ತು ಉತ್ತಮವಾಗಿದೆ. ಪ್ರಸ್ತುತ ಎರಡು ಲಕ್ಷ ಕೋಟಿ ರೂಪಾಯಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ಚುನಾವಣ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಉದ್ಯಮಿಗಳು ಹಾಗೂ ಹೂಡಿಕೆದಾರರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಪಕ್ಷಗಳು ಹಾಗೂ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ ಆರೋಪಿಸುತ್ತಿರುವಂತೆ ದೇಶದ ಆರ್ಥಿಕ ಸ್ಥಿತಿ ಡೋಲಾ ಯಮಾನವಾಗಿಲ್ಲ. ಈಗಾ ಗಲೇ ಎರಡು ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಆ ಮೊತ್ತವನ್ನು ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ದೇಶದ ಜನರಿಗೆ ಒದಗಿಸಿ ಕೊಡುವ ನಿಟ್ಟಿನಲ್ಲಿ ವ್ಯಯ ಮಾಡಲಾಗುತ್ತಿದೆ. ಇದರಿಂದ ಜಿಡಿಪಿ ಕೂಡ ಮೇಲ್ಮುಖವಾಗಿದೆ ಎಂದರು.

ಡಿಜಿಟಲೀಕರಣ, ಜನರ ದುಡಿಮೆ ಮೂಲಕ ತೆರಿಗೆ ರೂಪದಲ್ಲಿ ಸಂಗ್ರಹ ವಾಗುತ್ತಿರುವ ಪ್ರತಿಯೊಂದು ಪೈಸೆ ಯನ್ನೂ ಪ್ರಧಾನಿ ಮೋದಿ ಅತ್ಯಂತ ಯೋಚನಾತ್ಮಕವಾಗಿ ಮತ್ತು ಯೋಜ ನಾತ್ಮಕವಾಗಿ ವ್ಯಯಿಸುತ್ತಿದ್ದಾರೆ. ಒಂದು ಪೈಸೆಯೂ ಸೋರದಂತೆ ನೇರವಾಗಿ ಫಲಾನುಭವಿಗಳ ಖಾತೆಗೆ ಸೇರಲಿ ಎಂದು ಜನಧನ್‌ ಖಾತೆಗಳನ್ನು ತೆರೆಯಲಾಗಿದೆ. ಅಲ್ಲದೆ ನಾನಾ ಯೋಜನೆಗಳ ಅಡಿ ಡಿಜಿಟಲ್‌ ಮಾಡಿ ಹಣ ವ್ಯಯವಾಗದಂತೆ ಜನರಿಗೆ ಮುಟ್ಟಿಸುವ ಎಲ್ಲ ಪ್ರಯತ್ನಗಳನ್ನ ಮೋದಿ ಸರಕಾರ ಮಾಡುತ್ತಿದೆ. ಹಿಂದೆ ದೇಶವಾಳಿದ ಸರಕಾರಗಳೇ ಹೇಳಿದಂತೆ ಸಹಾಯಧನ ಫಲಾನು ಭವಿಗಳಿಗೆ ತಲುಪುವ ಮೊದಲೇ ಸೋರಿಕೆಯಾಗುತ್ತಿತ್ತು. ಅದನ್ನು ತಡೆಯಲು ಆನ್‌ಲೈನ್‌ ವ್ಯವಸ್ಥೆಯಲ್ಲಿ ಬಲವಾಗಿ ಜಾರಿಗೆ ತರಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next