Advertisement

ಪರಿಸರ ಸಹ್ಯ ಮಾಲಿನ್ಯ ನಿಯಂತ್ರಣ: ಅಣಕು ಪ್ರದರ್ಶನ

12:26 PM Jul 28, 2018 | |

ಸುರತ್ಕಲ್‌ : ಒಎನ್‌ಜಿಸಿ ಎಂಪಿಎಲ್‌ ಸಂಸ್ಥೆಯ ವತಿಯಿಂದ ಕಳವಾರು ಪೇಜಾವರ ಪ್ರೌಢ ಶಾಲೆಯಲ್ಲಿ ಸುರಕ್ಷತೆ ಮತ್ತು ಪರಿಸರ ಸಹ್ಯ ಮಾಲಿನ್ಯ ನಿಯಂತ್ರಣ ಕುರಿತ ಅಣಕು ಪ್ರದರ್ಶನ ಜರಗಿತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದ.ಕ. ಇದರ ಅಧಿಕಾರಿ ರಾಜಶೇಖರ ಪುರಾಣಿಕ್‌ ಮಾತನಾಡಿ, ಪ್ಲಾಸ್ಟಿಕ್‌ ವಸ್ತುಗಳನ್ನು ಉಪಯೋಗಿಸುವುದನ್ನು ನಿಲ್ಲಿದರೆ ಬಹುತೇಕ ಮಾಲಿನ್ಯ ನಿಯಂತ್ರಣ ಸಾಧ್ಯವಿದೆ ಎಂದರು. ಕಾರ್ಖಾನೆ ಮತ್ತು ಬಾಯ್ಲರ್‌ ವಿಭಾಗದ ಉಪ ನಿರ್ದೇಶಕ ನರೇಂದ್ರ ಬಾಬು ಮಾತನಾಡಿ, ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಜವಾಬ್ದಾರಿಗಳಲ್ಲಿ ಒಂದಾಗಿದೆ ಎಂದರು.

Advertisement

ಒಎಂಪಿಎಲ್‌ ಇದರ ಸಿಒಒ ಎಸ್‌. ಎಸ್‌. ನಾಯಕ್‌, ಪೇಜಾವರ ಶಾಲಾ ಆಡಳಿತ ಸಮಿತಿಯ ಉಪಾಧ್ಯಕ್ಷ ಫ್ರಾನ್ಸಿಸ್‌ ಕೊರೆಯಾ, ಶಾಲಾ ಮುಖ್ಯ ಶಿಕ್ಷಕ ರಮೇಶ್‌ ಭಟ್‌ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next