Advertisement

ಬದಿಯಡ್ಕದಲ್ಲಿ ಇಕೋ ಮಾರುಕಟ್ಟೆ ಉದ್ಘಾಟನೆ

12:30 AM Feb 15, 2019 | |

ಬದಿಯಡ್ಕ: ಹತ್ತು ಹಲವು ಯೋಜನೆಗಳ ಅನುಷ್ಠಾನದ ಮೂಲಕ ಮನೆಯಂಗಳದಲ್ಲಿ ಕೃಷಿ, ಕೈತೋಟ, ಹಸಿರು ಕೇರಳ ಮುಂತಾದ ಪದ್ಧತಿಗಳನ್ನು ಅಳವಡಿಸಿ ಜನರಿಗೆ ಸಹಾಯಕವಾಗುವ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸಲಾಗುತ್ತಿದೆ. ಇದರ ಇನ್ನೊಂದು ರೂಪವೇ ಇಕೋ ಶೋಪ್‌. ರಾಜ್ಯದ ಎಲ್ಲಾ ಪಂಚಾಯತ್‌ಗಳಲ್ಲೂ ಸಾವಯವ ಕೃಷಿಯನ್ನು ಪೊÅàತ್ಸಾಹಿಸಿ ವಿಷಮುಕ್ತ ತರಕಾರಿಗಳನ್ನು ತಲುಪಿಸುವ ಯತ್ನ. ಈ ನಿಟ್ಟಿನಲ್ಲಿ ಬದಿಯಡ್ಕ ಪಂಚಾಯತ್‌ ತೋರುತ್ತಿರುವ ಆಸಕ್ತಿ ಹಾಗೂ ಮಾಡುವ ಕಾರ್ಯ ಮಾದರಿ ಎನ್ನಬಹುದು.

Advertisement

ಇಕೋ ಶೋಪ್‌ ಸಾವಯವ ಪದ್ಧತಿಯಲ್ಲಿ ಉತ್ಪಾದಿಸಿದ ಕೃಷಿ ಉತ್ಪನ್ನಗಳನ್ನು ಮಿತವಾದ ಬೆಲೆಯಲ್ಲಿ ಜನರಿಗೆ ತಲುಪಿ ಸಲಿದೆ. ಎಂಡೋಸಲ್ಫಾನ್‌ಗಿಂತಲೂ ಮಾರಕ ವಿಷ ಸಿಂಪಡಿಸಿ ಬೆಳೆಸುವ ಅನ್ಯ ರಾಜ್ಯದಿಂದ ತರಲಾಗುವ ತರಕಾರಿಗಳು ಜೀವಕ್ಕೆ ಮಾರಕ. ಆದುದರಿಂದ ಆದಷ್ಟು ಜೈವಿಕ ಪದ್ಧತಿಯಲ್ಲಿ ಕೃಷಿ ಮಾಡಿ ಅಥವಾ ಇಕೋ ಶೋಪ್‌ಗ್ಳನ್ನು ಆಶ್ರಯಿಸಿ ಎಂದು ಕಾಸರಗೋಡು ಶಾಸಕ ಎನ್‌. ಎ. ನೆಲ್ಲಿಕುನ್ನು ಕರೆ ನೀಡಿದರು. ಕೃಷಿ ಅಭಿವೃದ್ಧಿ ಮತ್ತು ಕೃಷಿಕರ ಕ್ಷೇಮ ಇಲಾಖೆ ಮತ್ತು ಬದಿಯಡ್ಕ ಪಂಚಾಯತ ಜೈವ ಕೃಷಿ ಸಮಿತಿಯ ಸಂಯುಕ್ತಾಶ್ರಯದಲ್ಲಿ ಬದಿಯಡ್ಕದಲ್ಲಿ  ಪ್ರಾರಂಭಿಸಿದ ಇಕೋ ಶೋಪನ್ನು ಉದ್ಘಾಟಿಸಿ ಅವರು ಮಾತನಾಡಿದ್ದರು.
 
ಕೃಷಿಕರಿಗೆ ನೆರವಾಗುವಂತೆ ಅವರು ಬೆಳೆಸಿದ ತರಕಾರಿಗಳಿಗೆ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಜನರಿಗೆ ಸುಲಭವಾಗಿ ತಾಜಾ ತರಕಾರಿಗಳು ಲಭಿಸುವಂತೆ ಮಾಡುವ ಉದ್ದೆಶದಿಂದ ಈ ಇಕೋ ಶಾಪ್‌ ಅನ್ನು ಸ್ಥಾಪಿಸಲಾಗಿದೆ. ಪಂಚಾಯತ್‌ಗೊಳಪಟ್ಟ ಎಲ್ಲಾ ಕೃಷಿಕರೂ ಸುಲಭವಾಗಿ ತಾವು ಬೆಳೆದ ತರಕಾರಿಗಳನ್ನು  ಮಾರುಕಟ್ಟೆಗೆ ತಂದು ಮಾರಾಟ ಮಾಡಬಹುದಾಗಿದ್ದು ಜನರು ಈ ತರಕಾರಿಗಳನ್ನು ನ್ಯಾಯವಾದ ಬೆಲೆ ನೀಡಿ ಕೊಂಡುಕೊಳ್ಳುವುದರ ಮೂಲಕ ಕೃಷಿಕರನ್ನೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪಂಚಾಯತು ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಹೇಳಿದರು.

ಮಾರುಕಟ್ಟೆಯ ಕೊರತೆಯಿಂದ ಕೃಷಿಕರು ಕೃಷಿಯಿಂದ ಹಿಂಜರಿಯುತ್ತಿರುವ ಸಮಯದಲ್ಲಿ ಅವರನ್ನು ಪ್ರೋತ್ಸಾಹಿಸುವ ಪ್ರಯತ್ನ ಶ್ಲಾಘನೀಯ. ಮನೆಯಲ್ಲೇ ಅಗತ್ಯದ ತರಕಾರಿಗಳನ್ನು ಬೆಳೆಸಿ ಪ್ರತಿಯೊಬ್ಬರೂ ಕೃಷಿಕರಾಗಬೇಕಾದ ಅಗತ್ಯವಿದೆ. ಹಾಗಾದರೆ ಮಾತ್ರ ಕೀಟನಾಶಕಗಳ, ರಾಸಾಯನಿಕ ಗೊಬ್ಬರಗಳ ವಿಷವನ್ನು ಸೇವಿಸಿ ಕ್ಯಾನ್ಸರ್‌ನಂತ ಭೀಕರ ರೋಗಗಳು ಬಾರದಂತೆ ಜಾಗƒತರಾಗಬೇಕು. ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತಿಲ್ಲ. ಇಂದು ನಾವು ಸೇವಿಸುವ ಆಹಾರಗಳೇ ಜೀವಕ್ಕೆ ಸವಾಲಾಗಿ ಪರಿಣಮಿಸಿದೆ. ಎಂದು ಮಂಜೇಶ್ವರ ಕೃಷಿ ಉಪನಿದೆೇìಶಕರಾದ ಆನಂದ ಅವರು ಅಭಿಪ್ರಾಯ ಪಟ್ಟರು. ಸಜಿನಿ ಮೋಳ್‌ ಪದ್ಧತಿಗಳ ಕುರಿತಾದ ಮಾಹಿತಿ ನೀಡಿದರು.  ಕಾಸರಗೋಡು ಜಿಲ್ಲೆಯಲ್ಲಿ ಆಯ್ದ ಪಂಚಾಯತುಗಳಲ್ಲಿ ಇಕೋ ಶೋಪ್‌ಗ್ಳನ್ನು ಸ್ಥಾಪಿಸಲಾಗಿದ್ದು ಇಂದು ಬದಿಯಡ್ಕದಲ್ಲಿ 25ನೇ ಇಕೋ ಶಾಪ್‌ ಉದ್ಘಾಟನೆಗೊಂಡಿತು ಎಂದವರು ಹೇಳಿದರು.

ಪಂಚಾಯತ್‌ ಉಪಾಧ್ಯಕ್ಷೆ ಸೆ„ಬುನ್ನಿಸಾ, ಬ್ಲೋಕ್‌ ಪಂಚಾ ಯತ್‌ ಸದಸ್ಯರಾದ ಎ ಎಸ್‌ ಅಹಮ್ಮದ್‌, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ಯಾಮ ಪ್ರಸಾದ ಹಾಗೂ ಶಬನಾ ಪಂಚಾಯತ್‌ಸದಸ್ಯರಾದ ಅನ್ವರ್‌ ಓಝೋನ್‌, ಶಂಕರ, ಜಯಶ್ರೀ, ಮುನೀರ್‌, ಮುಹ್ಮಮದ್‌, ಶುಭಾಶಂಸನೆಗೆ„ದರು. ಮಾಹಿನ್‌ ಕೇಳ್ಳೋಟು, ಜಗನ್ನಾಥ ಶೆಟ್ಟಿ , ಚಂದ್ರಹಾಸ ರೈ, ಬದರುದ್ದೀನ್‌ ಖಾಸಿಂ, ಟಿಂಬರ್‌ ಮುಹಮ್ಮದ್‌, ನಾರಾಯಣ ಭಟ್‌, ಜೀವನ್‌ ತೋಮಸ್‌, ಜನಾರ್ದನನ್‌, ಸುಧಾ ಜಯರಾಂ, ಪಿ.ಎನ್‌.ಆರ್‌. ಅಮ್ಮಣ್ಣಾಯ, ಜಯಂತಿ, ಪ್ರಸನ್ನ, ವಿಶ್ವನಾಥ ಪ್ರಭು, ಪುಷ್ಪ ಕುಮಾರಿ, ಶಾಂತ, ಅನಿತ ಕ್ರಾಸ್ತಾ, ಆನಂದ, ಶೈಲೇಂದ್ರನ್‌ ಮುಂತಾದವರು ಉಪಸ್ಥಿತರಿದ್ದರು.

ಉತ್ತಮ ಕೃಷಿಕರಿಗೆ ಸಮ್ಮಾನ
ಪಂಚಾಯತ್‌ಗೊಳಪಟ್ಟ ಜೈವ ಕೃಷಿಕರಾದ ಕೇಶವ ಪ್ರಭು ಕರಿಂಬಿಲ, ಉಷಾ ಜಿ.ಕೆ. ಭಟ್‌ ಕಿಳಿಂಗಾರು, ಮುಸ್ತಫ ಕಾಡಮನೆ, ದಯಾನಂದ ಮೇಗಿನಡ್ಕ, ಅಂಬಾಡಿ ಬೆಳ್ಚಪ್ಪಾಡ ಕಮ್ಮಾಡ್ತಮೂಲೆ, ಈಶ್ವರ ಭಟ್‌ ಚುಕ್ಕಿನಡ್ಕ , ಮುಹಮ್ಮದ್‌ ಮುಬಶೀರ್‌ ಸಮ್ಮಾನಿಸಲಾಯಿತು. ಮೀರಾ ಎನ್‌ ಸ್ವಗತಿಸಿ, ಅಬ್ದುಲ್‌ ಸತಾರ್‌ ಕುಡ³ಂಗುಳಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next