Advertisement
ರೈಲು ಸಂಚಾರವೂ ದೇಶದ ಅತಿದೊಡ್ಡ ಸಂಚಾರ ವ್ಯವಸ್ಥೆಯಲ್ಲಿ ಒಂದಾಗಿದೆ. ಸುಮಾರು 1.21 ಲಕ್ಷ ಕಿ.ಮೀ. ರೈಲು ಸಂಚಾರ ಸಂಪರ್ಕ ಹೊಂದಿರುವ ನಮ್ಮ ದೇಶ ಪ್ರಪಂಚದ ನಾಲ್ಕನೇ ಅತಿದೊಡ್ಡ ರಾಷ್ಟ್ರವಾಗಿದೆ. ದೇಶದ ಮೂಲೆ ಮೂಲೆಗೆ ಇಂದು ಅತಿ ಕಡಿಮೆ ವೆಚ್ಚದಲ್ಲಿ ತಲುಪಲು ಸಾಧ್ಯವಿರುವುದಿಂದ, ಸರಕು- ಸಾಗಾಟ ಹಾಗೂ ಜನ ಸಂಚಾರಕ್ಕೆಂದು ರೈಲು ಸಾರಿಗೆಯೇ ಹೆಚ್ಚು ಬಳಕೆಯಾಗುತ್ತಿದೆ.
Related Articles
ಬೆಳೆಯುತ್ತಿರುವ ಜರ್ಮನ್ ದೇಶವೂ ಹೊಸ ಪ್ರಯೋಗದ ಮೂಲಕ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಅಂತೆಯೇ ಇತ್ತೀಚೆಗೆ ಜರ್ಮನ್ ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ತಗ್ಗಿಸಬೇಕು ಎಂಬ ಸದುದ್ದೇಶದಿಂದ ಜಲಜನಕ ಆಧಾರಿತ ರೈಲಿನ ಓಡಾಡವನ್ನು ಆರಂಭಿಸಿತ್ತು. ಫ್ರಾನ್ಸ್‌ನ ಅಲ್‌ಸ್ಟಾಮ್ ಎಂಬ ಕಂಪೆನಿಯೂ ಈ ಜಲಜನಕ ರೈಲಿನ ನಿರ್ಮಾಣ ಮಾಡಿದೆ. ಈ ರೈಲು ಜಲಜನಕ ಅಣುಗಳ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾಗುವ ವಿದ್ಯುತ್ಛಕ್ತಿಯಿಂದಾಗಿ ಓಡಾಡುತ್ತದೆ.
Advertisement
ಹೆಚ್ಚುವರಿ ವಿದ್ಯುತ್ತನ್ನು ರೈಲಿನಲ್ಲಿರುವ ಲೀಥಿಯಂ ಆಯಾನ್ ಬ್ಯಾಟರಿಗಳಿಂದ ರೀಚಾರ್ಚ್ ಮಾಡಬಹುದಾಗಿದ್ದು, ಇದು ಒಂದು ಬಾರಿ ಜಲಜನಕ ಪೂರೈಕೆಯಿಂದ ಸುಮಾರು 1,000 ಕಿ.ಮೀ. ದೂರದವರೆಗೆ ಚಲಿಸುತ್ತದೆ. ಇದರ ಬಾಳಿಕೆ ಡಿಸೇಲ್ ರೈಲಿನ ಬಾಳಿಕೆಗೆ ಸಮಾನ ಎಂದು ಕಂಪೆನಿ ತಿಳಿಸಿದೆ. ಈ ರೈಲಿನ ಒಟ್ಟು ವೆಚ್ಚ 50 ಕೋಟಿ ರೂ. ಮಾತ್ರ. ಅತಿದೊಡ್ಡ ರೈಲು ಸಾರಿಗೆ ಸಂಪರ್ಕ ಹೊಂದಿರುವ ಭಾರತ ದೇಶವೂ ಕೂಡ ಜರ್ಮನ್ ಮಾದರಿಯ ಪರಿಸರ ಸ್ನೇಹಿ ರೈಲುಗಳನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ.
ದುಬಾರಿ ವೆಚ್ಚ ವ್ಯಯಿಸಿ, ಇಂಧನ ಉರಿಸಿ ಸಂಚಾರಿಸುವ ರೈಲಿಗಿಂತ, ಪರಿಸರ ಸ್ನೇಹಿ ರೈಲಿನ ಆವಶ್ಯಕತೆ ಇಂದು ನಮಗೂ ಹೆಚ್ಚಾಗಿದೆ. ಇಂಥ ರೈಲುಗಳು ನಮ್ಮಲ್ಲೂ ಬಂದರೆ ಸಾರ್ವಜನಿಕರಿಗೂ ಹೆಚ್ಚಿನ ಪ್ರಯೋಜನವಾಗಲಿದೆ ಜತೆಗೆ ಸಂಪರ್ಕ ಜಾಲ ಇನ್ನೂ ವಿಸ್ತರಿಸಲು ಸಾಧ್ಯವಾಗಲಿದೆ.
ಶಿವ ಸ್ಥಾವರಮಠ