Advertisement

ಶಿಡ್ಲಘಟ್ಟ ನಗರದಲ್ಲಿ ಪರಿಸರ ಸ್ನೇಹಿ ವಿದ್ಯಾರ್ಥಿನಿಲಯ

06:20 PM Dec 07, 2019 | Team Udayavani |

ಶಿಡ್ಲಘಟ್ಟ: ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಮತ್ತು ವಿದ್ಯಾರ್ಥಿನಿಲಯ ಗಳೆಂದರೇ, ಅಲ್ಲಿ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಅವ್ಯವಸ್ಥೆಗಳ ವಿರುದ್ಧ ಪ್ರತಿಭಟಿಸು ವುದು ಸಾಮಾನ್ಯ.

Advertisement

ಆದರೆ ನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯದಲ್ಲಿ ವ್ಯವಸ್ಥೆಗಳು ಸುಧಾರಣೆ ಕಂಡಿದೆ. ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಗೆ ಬರುವ 2ನೇ ಟಿಎಂಸಿ ಬಡಾವಣೆಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿಇಲಾಖೆ ಮತ್ತು ಸರ್ಕಾರದಿಂದ ಜಾರಿ ಗೊಳಿಸುವ ಆದೇಶಗಳು ಮತ್ತು ಸುತ್ತೋಲೆಗಳನ್ವಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಪ್ರವೇಶ ಮಾಡುತ್ತಿದ್ದಂತೆಯೇ ಪರಿಸರ ಸ್ನೇಹಿ ವಾತಾವರಣ ಕಂಡು ಬರುತ್ತದೆ. ಮೇಲ್ವಿ ಚಾರಕಿ ಪೂರ್ಣಿಮಾ ಎಂಬುವರು ವಿಶೇಷ ಕಾಳಜಿ ವಹಿಸಿ ವಿದ್ಯಾರ್ಥಿ ನಿಲಯವನ್ನು ಮಿನಿ ಉದ್ಯಾನವನವಾಗಿ ಪರಿವರ್ತಿಸಿದ್ದಾರೆ. ಬಗೆ ಬಗೆಯ ಹೂವು ಇನ್ನಿತರೆ ಗಿಡಗಳನ್ನು ನಾಟಿ ಮಾಡಿ ಪೋಷಣೆ ಮಾಡಿದ್ದಾರೆ.

ಸ್ವಚ್ಛತೆಗೆ ಆದ್ಯತೆ: ನಿಲಯದಲ್ಲಿ ಸ್ವತ್ಛತೆ ಕಾಪಾಡಲಾಗಿದೆ. ಶುದ್ಧ ನೀರು ಪೂರೈಕೆ ಮಾಡಲಾಗುತ್ತದೆ. ಕೆಲವೊಮ್ಮೆ ನಗರ ಸಭೆಯಿಂದ ಸರಬರಾಜು ಆಗುವ ನೀರು ಸಾಕಾಗುವುದಿಲ್ಲ. ಟ್ಯಾಂಕರ್‌ ಮೂಲಕ ನೀರು ತರಿಸಲಾಗುತ್ತದೆ. ಹೈಟೆಕ್‌ ಮಾದರಿಯಲ್ಲಿ ಪ್ರಾಜೆಕ್ಟರ್‌ನಲ್ಲಿ ಸಿಲೆಬಸ್‌ (ಪಠ್ಯಕ್ರಮ ಆಧಾರಿತ) ಮೂಲಕ ಬೋಧನೆ ಮಾಡಲಾಗುತ್ತಿದೆ.

ಸೋಲಾರ್‌, –ಯುಪಿಎಸ್‌: ವಿದ್ಯಾರ್ಥಿಗಳಿಗೆ ಸ್ನಾನಕ್ಕೆ ಬಿಸಿನೀರಿಗಾಗಿ ಸೋಲಾರ್‌ ವಾಟರ್‌ ಹೀಟರ್‌, ವಾಟರ್‌ ಫಿಲ್ಟರ್‌ ಅಳವಡಿಸಲಾಗಿದೆ. ವಿದ್ಯುತ್‌ ಕೈಕೊಟ್ಟರೇ ಯುಪಿಎಸ್‌ ಸೌಲಭ್ಯ ಮತ್ತು ಭದ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸ ಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಖಾತ್ರಿ ಮಾಡಲು ಬಯೋಮೆಟ್ರಿಕ್‌ ವ್ಯವಸ್ಥೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next