Advertisement

ಹೆಬ್ರಿ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರಿ ಕಾರ್ಯಾಗಾರ

06:47 PM Sep 16, 2023 | Team Udayavani |

ಹೆಬ್ರಿ: ಪರಿಸರಕ್ಕೆ ಪೂರಕವಾದ ಗಣಪತಿ ತಯಾರಿಕೆ ಬಗ್ಗೆ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಉದಯವಾಣಿ ಕಾಳಜಿ ಶ್ಲಾಘನೀಯ. ಉಡುಪಿ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆಯ್ಕೆ ಮಾಡಿರುವವುದರಿಂದ  ನಮ್ಮ ವಿದ್ಯಾರ್ಥಿಗಳು ಭಾಗ್ಯವಂತರು ಎಂದು ಹೆಬ್ರಿ ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲ ದಿವಾಕರ ಎಸ್ ಮರಕಾಲ ಹೇಳಿದರು.

Advertisement

ಅವರು ಸೆ.16 ರಂದು  ಉದಯವಾಣಿ ವತಿಯಿಂದ ಹೆಬ್ರಿ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ನಡೆದ ಬೆಳಗಲಿ ಬೆನಕ ಪರಿಸರ ಸ್ನೇಹಿ ಗಣಪನ ಮೂರ್ತಿ ತಯಾರಿ ಪ್ರಾತ್ಯಕ್ಷಿಕೆ ಮತ್ತು ಪರಿಸರ ಸ್ನೇಹಿ ಆಚರಣೆಯ ಮಾಹಿತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಸರಕ್ಕೆ ಹಾನಿಯಾಗುವ ವಿಜೃಂಭಣೆ ಬೇಡ: ಹಿಂದೆ ಹಬ್ಬ ಹರಿದಿನಗಳು ಪರಿಸರ ಸ್ನೇಹಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಇದೀಗ ಅತಿ ವಿಜೃಂಭಣೆಯಿಂದ ಸಮಸ್ಯೆಯಾಗಿದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಜೃಂಭಣೆಯಿಂದ ಸಂಭ್ರಮದ ಗಣೇಶೋತ್ಸವಗಳನ್ನು ಆಚರಣೆ ಮಾಡುವಲ್ಲಿ ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಉದಯವಾಣಿ ಸಂಪಾದಕ ಅರವಿಂದ ನಾವಡ ಹೇಳಿದರು.

ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಈ ಕಾರ್ಯಾಗಾರ ಅಭಿನಂದನೀಯ. ಪರಿಸರಕ್ಕೆ ಪೂರಕವಾಗ ಮಣ್ಣಿನ ಗಣಪತಿ ರಚನೆಯ ಬಗ್ಗೆ ಮಕ್ಕಳು ಮನೆಯವರ ಹಾಗೂ ಸುತ್ತಮುತ್ತಲಿನವರ ಗಮನಕ್ಕೆ ತಂದು ಪರಿಸರ ಸ್ನೇಹಿಯಾಗಿ ಆಚರಿಸಿದಾಗ ಈ ಕಾರ್ಯಾಗಾರದಿಂದ ಪರಿವರ್ತನೆ ಆದಂತೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರವೀಣ್ ಶೆಟ್ಟಿ ಹೇಳಿದರು.

Advertisement

ಈ ಸಂದರ್ಭದಲ್ಲಿ  ಚಿತ್ರ ಕಲಾವಿದ ಪ್ರಥಮ ಕಾಮತ್ ಕಟಪಾಡಿ, ಕಲಾವಿದ ನಾಗೇಶ ಕಾಮತ್ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು. ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ವತಿಯಿಂದ ಭಾಗವಹಸಿದ ಎಲ್ಲಾ ಮಕ್ಕಳಿಗೆ ಅವೆ ಮಣ್ಣನ್ನು ನೀಡಿದರು.

ವಿದ್ಯಾರ್ಥಿಗಳಾದ ಸಂಜನಾ ಭಟ್, ಪ್ರತೀಕ್ಷಾ, ಶ್ರಾವ್ಯ ಪ್ರಭು ಗಣಪತಿ ಗೀತೆಗಳನ್ನು ಹಾಡಿದರು. ಉದಯವಾಣಿ ಹೆಬ್ರಿ ವಲಯ ವರದಿಗಾರ ಹೆಬ್ರಿ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಜಗದೀಶ್ ಭಂಡಾರಿ ಕಾಯ೯ಕ್ರಮ ನಿರೂಪಿಸಿ, ಶಿಕ್ಷಕ ಹಿರಿಯಣ್ಣ ಪೂಜಾರಿ ವಂದಿಸಿದರು.

ಯುವ ಕಲಾವಿದ ಪ್ರಥಮ ಕಾಮತ್ ಅತ್ಯಂತ ಸರಳ ರೀತಿಯಲ್ಲಿ ಪರಿಸರ ಪೂರಕ ಬಣ್ಣ ರಹಿತ ಗಣಪತಿ ತಯಾರಿ ಮಾಡುವ ವಿಧಾನವನ್ನು ಮಕ್ಕಳಿಗೆ ಹೇಳಿಕೊಟ್ಟರು.

ಹೆಬ್ರಿ ಸರಕಾರಿ ಪ್ರೌಢಶಾಲೆ, ಎಸ್ .ಆರ್ .ಪಬ್ಲಿಕ್ ಸ್ಕೂಲ್ ಹೆಬ್ರಿ, ಕಾರ್ಕಳ ಭುವನೇಂದ್ರ ರೆಸಿಡೆನ್ಸಿಯಲ್  ಸ್ಕೂಲ್ ನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಮಕ್ಕಳ ಕೈಯಲ್ಲಿ ಅರಳಿದ ಗಣಪತಿ ಕಲಾಕೃತಿ

ಕಾರ್ಯಾಗಾರದಲ್ಲಿ ಒಟ್ಟು 14 ತಂಡಗಳನ್ನಾಗಿ ಮಾಡಲಾಗಿದ್ದು ತಂಡಕ್ಕೆ ಮಣ್ಣುನ್ನು ನೀಡುತ್ತಿದ್ದಂತೆ ಆಸಕ್ತಿಯಿಂದ ಮಣ್ಣನ್ನು ಹದಮಾಡಿ ಗಣಪತಿಯ ವಿವಿಧ ಭಾಗಗಳ ತಯಾರಿಯಲ್ಲಿ ಮುಂದಾದರು. ಹೇಳಿಕೊಟ್ಟದ್ದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಆಸಕ್ತಿ ವಿವಿಧ ಬಗೆಯ ಗಣಪತಿಗಳ ತಯಾರಿಕೆ ಗಮನ ಸೆಳೆಯಿತು. ಗಣಪತಿ ರಚನೆಯ ಜತೆ ಭಾಗವಹಿಸಿದ ಮಕ್ಕಳು ಗಣಪತಿ ಹಾಡು ಹಾಡಿ ಸಂಭ್ರಮಿಸಿದರು. ಗಣಪತಿ ಬಗೆಗಿನ ರಸಪ್ರಶ್ನೆಯಲ್ಲಿ ಭಾಗವಹಿಸಿದರು. ಶಾಲಾ ಶಿಕ್ಷಕ ವೃಂದದ ಪ್ರೋತ್ಸಾಹದಿಂದ ಸುಮಾರು 300 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next