Advertisement

ಪರಿಸರ ಸ್ನೇಹಿ ಬಿದಿರಿನ ಬಾಟಲಿ ಬಳಕೆ ಅಗತ್ಯ

10:24 AM Mar 09, 2020 | mahesh |

ಆಧುನಿಕ ಜಗತ್ತಿಗೆ ಎದುರಾಗಿರುವ ಅನೇಕ ಸಮಸ್ಯೆಗಳಲ್ಲಿ ಪ್ಲಾಸ್ಟಿಕ್‌ ಕೂಡ ಒಂದು. ಇತರ ಲೋಹಗಳಿಗಿಂತ ಹಗುರವಾಗಿದ್ದ ಪ್ಲಾಸ್ಟಿಕ್‌ ಎಲ್ಲರಿಗೂ ಇಷ್ಟವಾಗಿ ಮನೆಯ ಮೂಲೆ ಮೂಲೆಗಳನ್ನೂ ಆವರಿಸಲು ಹೆಚ್ಚು ಸಮವೇನೂ ಹಿಡಿಯಲಿಲ್ಲ. ಆದರೆ ಅಂದು ಪ್ರಿಯವಾಗಿದ್ದ ಪ್ಲಾಸ್ಟಿಕ್‌ ಇಂದು ಪರಿಸರಕ್ಕೆ, ಪಾಣಿ-ಪಕ್ಷಿ ಸೇರಿದಂತೆ ಮನುಕುಕ್ಕೂ ಮಹಾಮಾರಿಯಾಗಿ ಪರಿಣಮಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

Advertisement

ಪ್ಲಾಸ್ಟಿಕ್‌ ಬಳಕೆಯನ್ನು ತೀರಾ ಕಡಿಮೆ ಮಾಡಲೂ ಮತ್ತು ಇದಕ್ಕೆ ಪರ್ಯಾಯವಾದ ವಸ್ತುಗಳ ಹುಡಾಕಾಟದಲ್ಲಿ ವಿಜ್ಞಾನಿಗಳು, ಉದ್ಯಮಿಗಳು ಇಂದು ಒಂದಲ್ಲ ಒಂದು ಪ್ರಯೋಗಕ್ಕೆ ಕೈ ಹಾಕುತ್ತಲೇ ಇದ್ದಾರೆ. ಪ್ಲಾಸ್ಟಿಕ್‌ನಿಂದ ಇಂದು ಉಂಟಾಗುತ್ತಿರುವ ಮತ್ತು ಮುಂದೆ ಉಂಟಾಗುವ ಅಪಾಯಯಗಳನ್ನು ಅರಿತಿರುವ ಜನ ನಿಧಾನವಾಗಿ ಪ್ಲಾಸ್ಟಿಕ್‌ ಬಳಕೆಗೆ ಪರ್ಯಾವಾಗಿ ಪರಿಸರ ಸ್ನೇಹಿಯಾದ ವಸ್ತುಗಳನ್ನು ಹುಡುಕ ಹೊರಟಿದ್ದಾರೆ.

ನಮ್ಮ ದಿನ ನಿತ್ಯದ ಜೀವನದಲ್ಲಿ ಉಪಯೋಗಿಸುವ ವಸ್ತುಗಳು ಪರಿಸರ ಸ್ನೇಹಿಯಾಗಿದ್ದಷ್ಟು ಉತ್ತಮ.ಹೀಗೆ ಪ್ಲಾಸ್ಟಿಕ್‌ಗೆ ಪರ್ಯಾಯ ಮತ್ತು ಪರಿಸರ ಸ್ನೇಹಿಯಾದ ವಸ್ತುಗಳಲ್ಲಿ ಇತ್ತೀಚೆಗೆ ಹೆಚ್ಚು ಪ್ರಚಲಿತಕ್ಕ ಬರುತ್ತಿರುವ ಬಿದಿರಿನಿಂದ ತಯಾರಿಸಲ್ಪಡುವ ನೀರಿನ ಬಾಟಲಿಯೂ ಕೂಡ ಒಂದಾಗಿದೆ. ಧೃತಿಮನ್‌ ಬೊರಾ ಎನ್ನು ಅಸ್ಸಾಂನ ವ್ಯಕ್ತಿಯೊಬ್ಬ ತನ್ನ ಹೊಸ ಆಲೋಚನೆ ಮತ್ತು 17 ವರ್ಷದ ಪರಿಶ್ರಮದ ಮೂಲಕ ಬಿದಿರಿನಿಂದ ನೀರಿನ ಬಾಟಲಿ ತಯಾರಿಸಿದ್ದಾರೆ. ಇದು ಪರಿಸರ ಸ್ನೇಹಿ ಮತ್ತು ನೋಡಲು ಆಕರ್ಷಕವಾಗಿಯೂ ಇದ್ದು ಪ್ಲಾಸ್ಟಿಕ್‌ಗೆ ಪರ್ಯಾಯ ಯೋಚನೆಯೊಂದು ದೊರೆತಂತಿದೆ.

ದುರದೃಷ್ಟಕರ ಸಂಗತಿ
ಈಗಿನ ದುರದೃಷ್ಟಕರ ಸಂಗತಿ ಎಂದರೆ ಈ ತರಹದ ಬಾಟಲಿಗಳು, ವಸ್ತುಗಳು ಇವೆೆ ಎಂದು ಇನ್ನೂ ಎಷ್ಟೋ ಜನಕ್ಕೆ ಗೊತ್ತೆ ಇಲ್ಲ. ಅಲ್ಲದೇ ಜನರು ಈ ತರದ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡದಿರುವುದು ಒಂದು ದುರದೃಷ್ಟಕರ. ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ನಿಲ್ಲಿಸಿ ನಿಸರ್ಗದತ್ತವಾದ ಇಂತಹ ವಸ್ತುಗಳ ಬಳಕೆ ಹೆಚ್ಚಿಸುವ ಮೂಲಕ ಪರಿಸರ ಕಾಪಾಡುವತ್ತ ಗಮನ ಹರಿಸಬೇಕಾಗಿದೆ. ಜನರು ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಇತರರನ್ನು ಬಳಕೆ ಮಾಡುವಂತೆ ಮನವೊಲಿಸುವ ಅಗತ್ಯತೆ ಇಂದಿದೆ. ಅಲ್ಲದೇ ಸರಕಾರವೂ ಈ ರೀತಿಯ ವಸ್ತುಗಳು ಮತ್ತು ಅವುಗಳ ತಯಾರಕರ ಬೆನ್ನಿಗೆ ನಿಲ್ಲುವ ಮೂಲಕ ಪರಿಸರ ಸ್ನೇಹಿ ಕಾಲಜಿಯನ್ನು ಜನರಲ್ಲಿ ಬಿತ್ತುವಂತಾಗಲಿ.

ಪರಿಸರ ಸ್ನೇಹಿ ಬಿದಿರಿನ ವಸ್ತುಗಳು
ಅಸ್ಸಾಂನ ಧೃತಿಮನ್‌ ಬೊರಾ ನೀರಿನ ಬಾಟಲಿಗಳು ಮಾತ್ರವಲ್ಲದೇ ಬಿದಿರಿನಿಂದ ಇನ್ನಿತರ ಮನೆ ಬಳಕೆ ವಸ್ತುಗಳನ್ನು ಸಹ ತಯಾರಿಸಿದ್ದಾರೆ. ಇವುಗಳಿಂದ ಪರಿಸರಕ್ಕೆ ಮತ್ತು ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯಾದ ಹಾನಿ ಉಂಟಾಗುವುದಿಲ್ಲ. ಇವುಗಳು ನಿಸರ್ಗದತ್ತವಾದ್ದರಿಂದ ಮನೆಗೆ ಸಾಂಪ್ರದಾಯಿಕ ಮೆರಗನ್ನು ಸಹ ನೀಡುತ್ತವೆ.

Advertisement

ನಗರದಲ್ಲಿ ಬಳಕೆಗೆ ಬರಲಿ
ನಗರಗಳಲ್ಲಿ ಇಂದು ನಾವು ಕುಡಿಯಲು ನೀರಿನ ಬಾಟಲಿ ಖರೀದಿಸಿ ಒಮ್ಮೆ ಬಳಸಿ ಎಸೆಯುತ್ತಿದ್ದೇವೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನಗರದಲ್ಲಿ ತಾಜ್ಯ ಸೃಷ್ಟಿಯಾಗುತ್ತಿದೆ. ಇದರ ನಿವಾರಣೆಗೆ ದೀರ್ಘ‌ ಕಾಲದವರೆಗೂ ಬಾಳಿಕೆ ಬರುವ ಮತ್ತು ಪರಿಸರ ಸ್ನೇಹಿಯಾದ ಬಿದಿರಿನ ಬಾಟಲಿ ಬಳಕೆಗೆ ಮುಂದಾದಲ್ಲಿ ಆದಷ್ಟು ಮಟ್ಟಿಗೆ ನಮ್ಮಿಂದ ತಾಜ್ಯವನ್ನು ಕಡಿಮೆ ಮಾಡಿದಂತಾಗುತ್ತದೆ. ಅಲ್ಲದೇ ಪರಿಸರ ಸಂರಕ್ಷಣೆಗೆ ನಮ್ಮಿಂದಾದ ಕೊಡಗೆ ನೀಡಿದ ತೃಪಿಯೂ ನಮ್ಮಲ್ಲಿರುತ್ತದೆ.

ಶೇ. 100ರಷ್ಟು ಲೀಕ್‌ ಪ್ರೂಫ್
ಇವುಗಳ ಇನ್ನೊಂದು ವಿಶೇಷತೆ ಎಂದರೆ ಈ ಬಿದಿರಿನ ಪಾತ್ರೆ, ಬಾಟಲಿಯಲ್ಲಿ ಹಾಕುವ ಪದಾರ್ಥ ಅಥವಾ ನೀರು ಸೋರಿಕೆಯಾಗದಂತೆ ತಯಾರಿಸಲಾಗಿದ್ದು ಶೇ. 100ರಷ್ಟು ಲೀಕ್‌ ಪ್ರೂಫ್ ಆಗಿವೆ. ಇದರಲ್ಲಿ ನೀರನ್ನು ತುಂಬಿಸಿಟ್ಟರೆ ನೀರು ಸದಾ ತಂಪಾಗಿರುತ್ತದೆ. ಅಲ್ಲದೇ ಆಹಾರ ತಯಾರಿಸಿದ ಅನಂತರ ಬಿದಿರಿನ ಪಾತ್ರೆಗಳಲ್ಲಿ ಹಾಕಿಟ್ಟರೆ ಅದರ ರುಚಿಯೂ ಹೆಚ್ಚಾಗುತ್ತದೆ.

- ಶಿವಾನಂದ

Advertisement

Udayavani is now on Telegram. Click here to join our channel and stay updated with the latest news.

Next