Advertisement

ಮೋಡದ ನಡುವೆ ಗ್ರಹಣ ವೀಕ್ಷಣೆ

07:31 AM Jun 22, 2020 | Lakshmi GovindaRaj |

ಹಾಸನ: ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಭಾನುವಾರ ದೇವಾಲಯಗಳೆಲ್ಲಾ ಮುಚ್ಚಿದ್ದರೆ, ಬಹುತೇಕ ಜನರು ಮನೆಯಿಂದ ಹೊರ ಬಾರದಿದ್ದರಿಂದ ಹಾಸನ ನಗರದಲ್ಲಿ ಮಧ್ಯಾಹ್ನದವರೆಗೂ ರಸ್ತೆಗಳೆಲ್ಲಾ ಖಾಲಿಯಾಗಿದ್ದವು. ಸೂರ್ಯಗ್ರಹಣದ ಬಗ್ಗೆ ಜನರಲ್ಲಿ ಮೌಡ್ಯತೆ ನಿವಾರಿಸಲು ಶ್ರಮ ಸಮಾಜ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರವು ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್‌) ಸಹಕಾರದಲ್ಲಿ ನಗರದ ಹೇಮಾವತಿ ಪ್ರತಿಮೆ ಬಳಿ ಗ್ರಹಣೋತ್ಸವ  ಕಾರ್ಯಕ್ರಮ ಆಯೋಜಿಸಿತ್ತು.

Advertisement

ಮೌಡ್ಯ ನಿವಾರಣೆಗೆ ಕ್ರಮ: ಈ ಸಂದರ್ಭ ದಲ್ಲಿ ಮಾತನಾಡಿದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಸಾವಿತ್ರಿ, ಶ್ರಮ ಸಮಾಜ ಜ್ಞಾನ ಅಧ್ಯಯನ ಮತ್ತು ಸಂಶೋಧಕ ಕೇಂದ್ರದ ಅಧ್ಯಕ್ಷ ಧರ್ಮೇಶ್‌  ಹಾಗೂ ಕೆ.ಎಸ್‌.ರವಿಕುಮಾರ್‌, ಗ್ರಹಣ ಎಂಬುದು ಸೌರವ್ಯೂಹದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಖಗೋಳ ಕೌತುಕವಾಗಿದ್ದು, ಈ ಬಗ್ಗೆ ಮೌಡ್ಯ ಹೋಗಲಾಡಿಸಬೇಕಿದೆ.

ಆದರೆ ದೃಶ್ಯ ಮಾಧ್ಯಮಗಳಲ್ಲಿ ಗ್ರಹಣ ಸಂಬಂಧ ಮೌಡ್ಯ  ಬಿತ್ತರಿಸಲಾಗುತ್ತಿವೆ. ಜನರು ಮೂಢ ನಂಬಿಕೆ ಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿ ಕೊಳ್ಳಬೇಕಿದೆ ಎಂದರು. ಸೌರ ವಿದ್ಯಮಾನಗಳನ್ನು ಎಲ್ಲರೂ ನೋಡುವ ಮೂಲಕ ಸೌರ ಕೌತುಕಗಳನ್ನು ಅಧ್ಯಯನ ಮಾಡಬೇಕು. ಇಂತಹ ಘಟನೆಗಳನ್ನು ಜನಸಾಮಾನ್ಯರಿಗೆ ವೀಕ್ಷಿಸುವ ಅವಕಾಶ ಮಾಡಿಕೊಟ್ಟಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.

ವೈಜ್ಞಾನಿಕ ಮನೋಭಾವ ಬೆಳೆಸಿ: 2020 ವೈಜ್ಞಾನಿಕ ಮನೋಧರ್ಮದ ಪರಿಚಾರಕ ರಾದ ಎಚ್‌.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವ ವರ್ಷವಾಗಿದ್ದು, ಈ ಅಂಗವಾಗಿ ಗ್ರಹಣ ವೀಕ್ಷಣೆ ಕಾರ್ಯಕ್ರಮ ಹಯು¾ಕೊಳ್ಳಲಾಗಿದೆ.  ಗ್ರಹಣ ಸೌರವ್ಯೂಹದ ನೆರಳು ಬೆಳಕಿನ ಕೌತುಕವಾಗಿದೆ. ಇದನ್ನು ವೀಕ್ಷಣೆ ಮಾಡುವುದು ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ನೆರವಾಗಲಿದೆ. ಎಚ್ಚೆನ್‌ ಜನ್ಮಶತಮಾನೋತ್ಸವದ ಅಂಗವಾಗಿ ಇದೇ ರೀತಿಯ ವೈಜ್ಞಾನಿಕ ಮನೋಭಾವ  ಬೆಳೆಸುವ ಕಾರ್ಯಕ್ರಮಗಳು ಸೇರಿದಂತೆ ವಿವಿಧ ರೀತಿಯ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.

ವಿಜ್ಞಾನ ಬರಹಗಾರರಾದ ಅಹಮದ್‌ ಹಗರೆ ಮತ್ತು ಕವಿತಾ ಅವರು ಕಾರ್ಯಕ್ರಮದ ವೇಳೆ ಗ್ರಹಣ ವಿವರ  ನೀಡಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಯಪ್ರಕಾಶ್‌, ಕಾಂತರಾಜು, ಗೋಪಾಲಕೃಷ್ಣ, ಶ್ರಮ ಸಮಾಜ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಕೇಂದ್ರದ ಟ್ರಸ್ಟಿಗಳಾದ ಪೃಥ್ವಿ, ಸತ್ಯನಾರಾಯಣ ಅರವಿಂದ, ವಸಂತಕುಮಾರ್‌,  ದಸಂಸ ಮುಖಂಡರಾದ ಸಂದೇಶ್‌, ಕಲಾವಿದ ಗ್ಯಾರಂಟಿ ರಾಮಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Advertisement

ಗ್ರಹಣ ವೀಕ್ಷಣೆಗೆ ವ್ಯವಸ್ಥೆ: ಗ್ರಹಣ ವೀಕ್ಷಣೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ಸೋಲಾರ್‌ ಕನ್ನಡಕಗಳ ವ್ಯವಸ್ಥೆ ಮಾಡಿದ್ದರೂ ಮಳೆ ಮತ್ತು ಮೋಡದ ವಾತಾವರಣದಿಂದ ಸೂರ್ಯ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ. ಮೋಡದ  ಮರೆಯಲ್ಲಿ ಆಗಾಗ ಕಾಣಿಸುತ್ತಿದ್ದ ಸೂರ್ಯನಿಗೆ ಆವರಿಸಿದ ಗ್ರಹಣ ವೀಕ್ಷಿಸಿ ಸಾರ್ವಜನಿಕರು ಪುಳಕಿತರಾದರು. ಗ್ರಹಣದ ಸಂದರ್ಭದಲ್ಲಿ ಊಟ ತಿಂಡಿ ಮಾಡಬಾರದು ಎಂಬ ಮೌಡ್ಯ ನಿವಾರಿಸಿ ಸಾರ್ವಜನಿಕರಿಗೆ ಜಾಗೃತಿ  ಮೂಡಿಸಲು ಗ್ರಹಣದ ಸಮಯದಲ್ಲಿ ತಿಂಡಿ ಸೇವನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಸ್ಪಂದಿಸಿದ ಜನರು ಉಪಾಹಾರ ಸೇವಿಸಿ ಸೌರ ಕನ್ನಡ ಗಳ ಮೂಲಕ ಗ್ರಹಣ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next