ನವದೆಹಲಿ: ಮುಂಬರುವ ಜಮ್ಮು-ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗಳ ಚುನಾವಣೋತ್ತರ (Exit polls) ಸಮೀಕ್ಷೆಗಳನ್ನು ಬಿಡುಗಡೆ ಮಾಡದಂತೆ ನಿಷೇಧ ಹೇರಿ ಕೇಂದ್ರ ಚುನಾವಣ ಆಯೋಗ (Election commission of India) ಗುರುವಾರ (ಸೆ.05) ಅಧಿಸೂಚನೆ ಹೊರಡಿಸಿದೆ.
ಸೆಪ್ಟೆಂಬರ್ 18ರ ಬೆಳಗ್ಗೆ 7ಗಂಟೆಯಿಂದ ಅಕ್ಟೋಬರ್ 5ರ ಸಂಜೆ 6.30ರವರೆಗೆ ಚುನಾವಣೋತ್ತರ ಸಮೀಕ್ಷೆ ಬಿಡುಗಡೆ ಮಾಡದಂತೆ ಕೇಂದ್ರ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಚುನಾವಣೆಯ ಸಮಯದಲ್ಲಿ ನ್ಯಾಯಸಮ್ಮತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
1951ರ ಜನತಾ ಕಾಯ್ದೆಯ ಸೆಕ್ಷನ್ 126ಎ ಅನ್ವಯ ನಿಗದಿಪಡಿಸಿದ ದಿನಾಂಕದವರೆಗೆ ಮುದ್ರಣ, ದೃಶ್ಯ ಮಾಧ್ಯಮ ಅಥವಾ ಯಾವುದೇ ಮಾಧ್ಯಮಗಳಲ್ಲಿ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸುವಂತಿಲ್ಲ.
ಚುನಾವಣ ಪ್ರಕ್ರಿಯೆಯಲ್ಲಿ ಮತದಾರರ ಮೇಲೆ ಚುನಾವಣೋತ್ತರ ಸಮೀಕ್ಷೆಯ ಪ್ರಭಾವ ಬೀರದಿರಲಿ ಎಂಬ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.