Advertisement

ಎಐಎಡಿಂಕೆ ಪಕ್ಷದ ಎರಡೆಲೆ ಚಿಹ್ನೆ ವಿವಾದ : ಅ.5ರಂದು ವಿಚಾರಣೆ

04:32 PM Sep 22, 2017 | Team Udayavani |

ಹೊಸದಿಲ್ಲಿ : ಎಐಎಡಿಎಂಕೆ ಪಕ್ಷದ ಅಧಿಕೃತ “ಎರಡೆಲೆ ಚಿಹ್ನೆ’ ಕುರಿತ ವಿವಾದದ ವಿಚಾರಣೆಯನ್ನು ಚುನಾವಣಾ ಆಯೋಗ ಅ.5ರಂದು ನಡೆಸಲಿದೆ. 

Advertisement

ಎಐಎಡಿಎಂಕೆ ಪಕ್ಷದ ಎರಡು ಎದುರಾಳಿ ಗುಂಪುಗಳು ಎರಡೆಲೆ ಚಿಹ್ನೆ ತಮಗೇ ಸೇರಿದ್ದೆಂದು ವಿವಾದವನ್ನು ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಈ ಚಿಹ್ನೆಯನ್ನು ಚುನಾವಣಾ ಆಯೋಗ ಸ್ತಂಭನಗೊಳಿಸಿತ್ತು. 

ಸೆ.29ರೊಳಗೆ ತಮ್ಮ ತಾಜಾ ಉತ್ತರಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಉಭಯ ಎದುರಾಳಿ ಬಣಗಳಿಗೆ ಸೂಚಿಸಿತ್ತು. 2016ರ ಡಿಸೆಂಬರ್‌ 5ರ ಪ್ರಕಾರ ಪಕ್ಷದ ಕೇಂದ್ರ ಕಾರ್ಯಕಾರಿಸಮಿತಿಯ ಸದಸ್ಯರು ಮತ್ತು ಸಾಮಾನ್ಯ ಮಂಡಳಿ ಸದಸ್ಯರ ಪಟ್ಟಿಯನ್ನು ಸಲ್ಲಿಸುವಂತೆ ಆಯೋಗವು ಸಂಬಂಧಿಸಿದ ಎಲ್ಲರಿಗೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next