ಹೊಸದಿಲ್ಲಿ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಇನ್ನೆರಡು ಪ್ರಕರಣಗಳಲ್ಲಿ ಕ್ಲೀನ್ ಚಿಟ್ ನೀಡಿದೆ.
ಎಪ್ರಿಲ್ 23 ರಂದು ಅಹಮದಾಬಾದ್‌ನಲ್ಲಿ ರೋಡ್ ಶೋ ನಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ದೂರು ಸಲ್ಲಿಸಿತ್ತು.
ಚಿತ್ರದುರ್ಗದಲ್ಲಿ ಎಪ್ರಿಲ್ 9 ರಂದು ಪ್ರಧಾನಿ ಮೋದಿ ಭಾಷಣದ ವೇಳೆ ಯುವ ಜನತೆ ಬಾಲಕೋಟ್ ವಾಯುದಾಳಿಯ ಹಿರೋಗಳಿಗೆ ಮತ ಕೊಡುಗೆ ನೀಡುವಂತೆ ಯುವಜನತೆಯನ್ನು ಕೇಳಿಕೊಂಡಿದ್ದುದರ ವಿರುದ್ಧ ಕಾಂಗ್ರೆಸ್ ದೂರು ಸಲ್ಲಿಸಿತ್ತು. ಅದೇ ದಿನ ಔಸಾ ಮತ್ತು ಲಾತೂರ್‌ನಲ್ಲಿ ಇದೇ ಮನವಿಯನ್ನು ಮಾಡಿದ್ದರು.
ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ.
ಒಟ್ಟು 8 ಪ್ರಕರಣಗಳಲ್ಲಿಯೂ ಆಯೋಗ ಪ್ರಧಾನಿ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಚುನಾವಣಾ ಕಾನೂನು ಉಲ್ಲಂಘನೆ ಮಾಡಿರುವುದು ಕಂಡು ಬಂದಿಲ್ಲ ಎಂದಿದೆ.