ಹೊಸದಿಲ್ಲಿ : ಇಲೆಕ್ಟ್ರಾನಿಕ್ ಓಟಿಂಗ್ ಮಶೀನ್‌ಗಳನ್ನು ಹ್ಯಾಕ್ ಮಾಡಲು ಸಾಧ್ಯ; ಆ ಪ್ರಕಾರ 2014ರ ಲೋಕಸಭಾ ಚುನಾವಣೆಗಳಲ್ಲಿ ಇವಿಎಂ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿರುವ ಸ್ವಘೋಷಿತ ಸೈಬರ್ ಪರಿಣತನ ವಿರುದ್ಧ ಚುನಾವಣಾ ಆಯೋಗ ದಿಲ್ಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದು ಈ ಬಗ್ಗೆ ಎಫ್ಐಆರ್ ದಾಖಲಿಸುವಂತೆ ಕೇಳಿಕೊಂಡಿದೆ.
ಇವಿಎಂ ಗಳನ್ನು ಹ್ಯಾಕ್ ಮಾಡಲು ಸಾಧ್ಯ ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ಇವಿಎಂ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳುವ ಮೂಲಕ ತಥಾಕಥಿತ ಸೈಬರ್ ಪರಿಣತನು ಜನರಲ್ಲಿ ಭೀತಿ ಹುಟ್ಟಿಸುವ, ವದಂತಿ ಹಬ್ಬಿಸುವ ಅಪರಾಧ ಕೃತ್ಯ ಎಸಗಿದ್ದಾನೆ. ಆತನು ಆ ಮೂಲಕ ಐಪಿಸಿ ಮತ್ತು ಇತರ ಕಾನೂನುಗಳ ಉಲ್ಲಂಘನೆ ಮಾಡಿದ್ದಾನೆ. ಅಂತೆಯೇ ಆತನನ್ನು ತನಿಖೆಗೆ ಗುರಿಪಡಿಸಬೇಕಿದೆ ಎಂದು ಚುನಾವಣಾ ಆಯೋಗ ತನ್ನ ದೂರಿನಲ್ಲಿ ಹೇಳಿದೆ.