Advertisement

ಪಂಜಾಬ್‌ ಸರಕಾರಿ ನೌಕರರಿಗೆ, ಪಿಂಚಣಿದಾರರಿಗೆ ಶೇ.5 ಇಂಟೆರಿಮ್‌ ರಿಲೀಫ್

03:34 PM Feb 16, 2017 | Team Udayavani |

ಚಂಡೀಗಢ : ಪಂಜಾಬ್‌ ಸರಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಶೇ. 5 ಮಧ್ಯಾವಧಿ ಪರಿಹಾರ (interim relief )ನೀಡುವುದಕ್ಕೆ ಚುನಾವಣಾ ಆಯೋಗವು ಸಮ್ಮತಿಸಿದೆ.

Advertisement

ಚುನಾವಣೆಯ ನಿಮಿತ್ತವಾಗಿ ರಾಜ್ಯದಲ್ಲೀಗ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತನ್ನ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಶೇ.5ರ ಮಧ್ಯಾವಧಿ ಪರಿಹಾರ ನೀಡಲು ಅನುಮತಿ ನೀಡಬೇಕೆಂದು ಪಂಜಾಬ್‌ ಸರಕಾರ ಚುನಾವಣಾ ಆಯೋಗವನ್ನು ಕೋರಿತ್ತು. 

ಈ ಪ್ರಸ್ತಾವಕ್ಕೆ ಅನುಮೋದನೆ ನೀಡುವ ಪತ್ರವನ್ನು ರಾಜ್ಯ ಸರಕಾರದ ಹಣಕಾಸು ಇಲಾಖೆಯ ಖರ್ಚು ವೆಚ್ಚ ವಿಭಾಗದ ಕಾರ್ಯದರ್ಶಿಗೆ ಕಳುಹಿಸಲಾಗಿದೆ ಎಂದು ಆಯೋಗದ ವಕ್ತಾರ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next