Advertisement

ಜ್ಯಾಮ್‌ ತಿಂದ್ರೆ ಹೊಟ್ಟೆ jam!

06:38 PM Jul 16, 2019 | mahesh |

ಸಿಟಿ ಮಕ್ಕಳ ಊಟದ ಬಾಕ್ಸ್‌ ತೆರೆದು ನೋಡಿದರೆ, ಕೆಲವರ ಬಾಕ್ಸ್‌ನಲ್ಲಾದರೂ ಬ್ರೆಡ್‌-ಜ್ಯಾಮ್‌ ಇರುತ್ತದೆ. ದಿನವೂ ಬಾಕ್ಸ್‌ನಲ್ಲಿ ಬ್ರೆಡ್‌-ಜ್ಯಾಮ್‌ ತುಂಬಿ ಕಳಿಸುವ ಬ್ಯುಸಿ ಅಮ್ಮಂದಿರೂ ಇದ್ದಾರೆ. ಯಾಕಂದ್ರೆ, ನಾಲ್ಕು ಸ್ಲೈಸ್‌ ಬ್ರೆಡ್‌ಗೆ ಎರಡು ಚಮಚ ಜ್ಯಾಮ್‌ ಹಚ್ಚಿ, ಡಬ್ಬಿಗೆ ತುಂಬುವುದಕ್ಕೆ ಐದು ನಿಮಿಷವೂ ಬೇಡ. ಬೆಳಗ್ಗಿನ ಗಡಿಬಿಡಿ, ಒತ್ತಡದಲ್ಲಿ ತಿಂಡಿ ತಯಾರಿಸುವುದು, ಆ ತರಕಾರಿ ಹಾಕಬೇಡ, ಈ ತಿಂಡಿ ತಿನ್ನೋದಿಲ್ಲ ಅಂತ ಹಠ ಹಿಡಿಯುವ ಮಕ್ಕಳಿಗೆ ಅದನ್ನು ತಿನ್ನಿಸುವುದು ಕಷ್ಟದ ಕೆಲಸವೇ. ಮಕ್ಕಳೂ ಕೂಡಾ, ಸಿಹಿಯಾದ ಜ್ಯಾಮ್‌ ಜೊತೆಗೆ ಬ್ರೆಡ್‌ ಅನ್ನು ತಕರಾರಿಲ್ಲದೆ ತಿನ್ನುವುದರಿಂದ, ಅಮ್ಮಂದಿರಿಗೆ ಅದೇ ಸುಲಭ ಅನ್ನಿಸುತ್ತದೆ. ಚಪಾತಿ, ರೊಟ್ಟಿ, ದೋಸೆಯ ಜೊತೆಗೂ ಜ್ಯಾಮ್‌ ಹಾಕುತ್ತಾರೆ. ಆದರೆ, ಮಕ್ಕಳಿಗೆ ದಿನವೂ ಜ್ಯಾಮ್‌ ತಿನ್ನಿಸುವುದು ಒಳ್ಳೆಯದಲ್ಲ. ಯಾಕೆ ಗೊತ್ತಾ?

Advertisement

-ತಾಜಾ ಹಣ್ಣಿನಿಂದ ತಯಾರಿಸಿದ್ದೆಂದು ಹೇಳಿದರೂ, ಹಣ್ಣುಗಳಿಂದ ಸಿಗುವ ಅರ್ಧದಷ್ಟು ಪೋಷಕಾಂಶವೂ ಜ್ಯಾಮ್‌ನಿಂದ ಸಿಗುವುದಿಲ್ಲ.
– ಹೆಚ್ಚು ದಿನಗಳ ಕಾಲ ಕೆಡದಂತೆ ಇಡಲು ಜ್ಯಾಮ್‌ನಲ್ಲಿ ಕೃತಕ ಸಂರಕ್ಷಕಗಳನ್ನು ಬಳಸಲಾಗುತ್ತದೆ.
-ಆ ಕೃತಕ ರಾಸಾಯನಿಕಗಳಿಂದ ಮಕ್ಕಳ ಹೊಟ್ಟೆ ಕೆಡುತ್ತದೆ.
-ಒಂದು ಚಮಚ ಜ್ಯಾಮ್‌ನಲ್ಲಿ ಎರಡು ಚಮಚದಷ್ಟು ಸಕ್ಕರೆ ಇರುತ್ತದೆ. ಅಷ್ಟು ಪ್ರಮಾಣದ ಸಕ್ಕರೆ ದೇಹಕ್ಕೆ ಒಳ್ಳೆಯದಲ್ಲ.
– ಹೈ ಕ್ಯಾಲೋರಿ ಉಳ್ಳ ಜ್ಯಾಮ್‌ ಅನ್ನು ನಿತ್ಯವೂ ಸೇವಿಸುವ ಮಕ್ಕಳಲ್ಲಿ ಬೊಜ್ಜು ಹಾಗೂ ಅದರಿಂದ ಬರುವ ಕಾಯಿಲೆಗಳು ಕಾಣಿಸಿಕೊಳ್ಳಬಹುದು.
-ಸಕ್ಕರೆ ಪ್ರಮಾಣ ಅಧಿಕವಾಗಿರುವುದರಿಂದ, ಚೂರು ಜ್ಯಾಮ್‌ ತಿಂದರೂ ಮಕ್ಕಳ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ.
– ಜ್ಯಾಮ್‌ ಜೊತೆಗೆ ಎರಡು ಬ್ರೆಡ್‌, ಒಂದು ಚಪಾತಿ ತಿನ್ನುವಷ್ಟರಲ್ಲಿ ಮಕ್ಕಳ ಹೊಟ್ಟೆ ತುಂಬಿ, ಬೇರೇನೂ ಬೇಡ ಅಂದು ಬಿಡುತ್ತಾರೆ. ಇದರಿಂದ ಮಕ್ಕಳ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗದೇ ಹೋಗಬಹುದು.

ಜ್ಯಾಮ್‌ ಬದಲಿಗೆ ಬೇರೇನು?
-ಜ್ಯಾಮ್‌ ಬದಲು ತಾಜಾ ಜೇನುತುಪ್ಪವನ್ನು ಬ್ರೆಡ್‌- ಚಪಾತಿ ಜೊತೆಗೆ ಕೊಡಿ.
-ಮಾವು, ಅನಾನಸ್‌ನಂಥ ಹಣ್ಣುಗಳಿಂದ ಮನೆಯಲ್ಲಿಯೇ ಜ್ಯಾಮ್‌ ತಯಾರಿಸಿ.
-ಎಲ್ಲ ತಿನಿಸಿಗೂ ಜ್ಯಾಮ್‌, ಸಾಸ್‌ ಸುರಿಯುವ ಅಭ್ಯಾಸ ನಿಲ್ಲಿಸಿ.
-ಲಂಚ್‌ಬಾಕ್ಸ್‌ನಲ್ಲಿ ಮೊಳಕೆ ಕಾಳು, ಹಣ್ಣು, ತರಕಾರಿ ತುಂಬಿಸಿ.
-ಮಕ್ಕಳು ಇಷ್ಟಪಡುವ ತಿಂಡಿಗಳನ್ನೇ, ಮತ್ತಷ್ಟು ಪೌಷ್ಟಿಕವಾಗಿ ತಯಾರಿಸಿ, ಬಾಕ್ಸ್‌ಗೆ ಹಾಕಿ ಕೊಡಿ.

Advertisement

Udayavani is now on Telegram. Click here to join our channel and stay updated with the latest news.

Next