Advertisement
ಆದರೆ ಸಂಸ್ಕೃತಿಯು ಆಹಾರ ಸೇವನೆ ಮತ್ತು ಆಹಾರ ಅಭ್ಯಾಸ ಇತ್ಯಾದಿಗಳ ಮೇಲೆ ಪ್ರಭಾವ ಬೀರುತ್ತದೆ. ಭಾರತದಂತಹ ದೇಶದಲ್ಲಿ ನಾವು ದೇಶಾದ್ಯಂತ ವೈವಿಧ್ಯಮಯ ರೀತಿಯ ಆಹಾರ ಪದ್ಧತಿಗಳು ಮತ್ತು ಅಭ್ಯಾಸಗಳನ್ನು ಗಮನಿಸಿದ್ದೇವೆ. ಆಹಾರ ಮತ್ತು ಆಹಾರಕ್ಕೆ ಸಂಬಂಧಿಸಿದ ಈ ಸಮಸ್ಯೆಗಳೆಂದರೆ, ಆಹಾರವನ್ನು ಬಾಯಿಗೆ ತರುವುದು, ಚಲನೆ ಅಥವಾ ಸಂವೇದನೆಯ ಕೊರತೆಗಳು, ಡಿಸ್ಪೇಜಿಯಾ, ಮನೋಸಾಮಾಜಿಕ ಆಧಾರಿತ ತಿನ್ನುವ ಅಸ್ವಸ್ಥತೆಗಳಂತಹ ಆಹಾರ ಗೀಳುಗಳು, ಅಸಮತೋಲನ ಆಹಾರ ಪದ್ಧತಿಗಳು ಮುಂತಾದ ದೈಹಿಕ ತೊಂದರೆಗಳು ಇತ್ಯಾದಿಗಳನ್ನೆಲ್ಲ ಒಳಗೊಂಡಿವೆ.
Related Articles
Advertisement
ಆಕ್ಯುಪೇಶನಲ್ ಚಿಕಿತ್ಸಕರು ಆಹಾರ ಸಮಸ್ಯೆಯನ್ನು ಎರಡು ವಿಭಿನ್ನ ಕೋನಗಳಿಂದ ನೋಡುತ್ತಾರೆ. ಒಬ್ಬ ವ್ಯಕ್ತಿಯು ಉಣ್ಣುವ ಅಥವಾ ತಿನ್ನುವ ಚಟುವಟಿಕೆಯಲ್ಲಿ ಸಂಪೂರ್ಣವಾಗಿ ಅವಲಂಬಿಸಿದ್ದಾರೆಯೇ ಅಥವಾ ಆರೈಕೆದಾರರಿಂದ ಸ್ವಲ್ಪ ಸಹಾಯದ ಅಗತ್ಯವಿದೆಯೇ; ಎರಡನೆಯದಾಗಿ ಸಹಾಯಕ ಮತ್ತು ಹೊಂದಾಣಿಕೆಯ ಸಾಧನಗಳ ಸಹಾಯದ ಅಗತ್ಯವಿದೆಯೇ ಎಂದು ನೋಡುತ್ತಾರೆ. ಅವರು ಹೆಚ್ಚಾಗಿ ಮೌಲ್ಯಮಾಪನಗಳು ಮತ್ತು ಚಿಕಿತ್ಸಾ ಪ್ರಕ್ರಿಯೆಯ ಭಾಗವಾಗಿ ಕುಟುಂಬ ಸದಸ್ಯರು ಮತ್ತು ಆರೈಕೆದಾರರನ್ನು ಸೇರಿಸಿಕೊಳ್ಳುತ್ತಾರೆ.
ಏಕೆಂದರೆ ಆಹಾರ ಪದ್ಧತಿ ಮತ್ತು ಆಹಾರ ಸೇವನೆ ಸಾಮಾಜಿಕ ಪರಿಸರದಲ್ಲಿ ಸಂಭವಿಸುತ್ತದೆ. ಒಬ್ಬ ವ್ಯಕ್ತಿಯು ಆರೈಕೆದಾರರ ಮೇಲೆ ಅವಲಂಬಿತನಾಗಿದ್ದರೆ, ಆಕ್ಯುಪೇಶನಲ್ ಚಿಕಿತ್ಸೆಯು ರೋಗಿಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಅವರಿಗೆ ಸೂಕ್ತವಾದ ಅತ್ಯುತ್ತಮ ಆಹಾರ ಪದ್ಧತಿ ಮತ್ತು ತಿನ್ನುವ ಭಂಗಿ ಹಾಗೂ ಕುಳಿತುಕೊಳ್ಳುವ ಸ್ಥಳವನ್ನು ಸೂಚಿಸುತ್ತದೆ. ವಯಸ್ಕರು ಆಹಾರ ಸೇವನೆ ಪ್ರಕ್ರಿಯೆಯಲ್ಲಿ ಅವಲಂಬನೆ ಹೊಂದಿದ್ದರೆ ಊಟದ ಸಮಯದಲ್ಲಿ ಉತ್ತಮವಾಗಿ ಕುಳಿತುಕೊಳ್ಳುವ ಭಂಗಿಗೆ ಮೊದಲ ಆದ್ಯತೆ ನೀಡಬೇಕು. ಆಹಾರ ಸೇವಿಸುವಾಗ ಗಾಲಿ ಕುರ್ಚಿ, ಆರಾಮಕುರ್ಚಿ ಅಥವಾ ಹಾಸಿಗೆಯಲ್ಲಿ ಕುಳಿತಿರಲಿ, ಸ್ವಯಂ-ಆಹಾರ ಸೇವನೆ ಮತ್ತು ಸುರಕ್ಷೆಯ ಕಡೆಗೆ ಗಮನ ನೀಡಬೇಕು.
ಆಹಾರ ಸೇವಿಸುವಾಗ ಉಸಿರುಗಟ್ಟುವಿಕೆಯನ್ನು ತಡೆಗಟ್ಟಲು ತಿನ್ನುವ ಭಂಗಿ ಹಾಗೂ ಕುಳಿತುಕೊಳ್ಳುವ ಸ್ಥಳದ ಉತ್ತಮ ನಿರ್ವಹಣೆ ಅತ್ಯಗತ್ಯ. ಸೂಕ್ತ ಭಂಗಿಯನ್ನು ಉಳಿಸಿಕೊಳ್ಳಲು ಸರಿಯಾಗಿ ಬೆಂಬಲಿಸುವ ಸಾಧನಗಳು, ಹೊಂದಾಣಿಕೆಯ ಉಪಕರಣಗಳು ಅಥವಾ ಪರಿಸರ ಮಾರ್ಪಾಡುಗಳನ್ನು ಆಯ್ಕೆ ಮಾಡಲು ಅಥವಾ ರಚಿಸಲು ಆಕ್ಯುಪೇಶನಲ್ ಚಿಕಿತ್ಸಕರು ಸಹಾಯ ಮಾಡುತ್ತಾರೆ. ಅವರು ಕ್ರಮೇಣ ಹೇಗೆ ತಿನ್ನಬೇಕು ಎಂದು ಆರೈಕೆದಾರರಿಗೆ ಸೂಚಿಸುತ್ತಾರೆ ಮತ್ತು ತೋರಿಸುತ್ತಾರೆ. ಜತೆಗೆ ಆಹಾರ ಚಟುವಟಿಕೆಗಳ ಶ್ರೇಣೀಕೃತ ರೀತಿಯಲ್ಲಿ ಕಾರ್ಯ ನಿರ್ವಹಣೆ ಮತ್ತು ಉಣ್ಣುವ ಮತ್ತು ತಿನ್ನುವ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸುತ್ತಾರೆ.
ಕ್ರಿಯಾತ್ಮಕ ಸಾಮರ್ಥ್ಯಗಳು ಮತ್ತು ಭವಿಷ್ಯದ ಚೇತರಿಕೆ
ಕುಳಿತುಕೊಳ್ಳುವ ಭಂಗಿಯ ಆವಶ್ಯಕತೆಗಳ ಜತೆಗೆ ಆಹಾರ ಪದ್ಧತಿ ಮತ್ತು ತಿನ್ನುವ ಚಟುವಟಿಕೆಗೆ ರೋಗಿಗೆ ಸಹಾಯ ಬೇಕು ಎಂದು ಭಾವಿಸೋಣ. ಅಂತಹ ಸಂದರ್ಭದಲ್ಲಿ ಆಕ್ಯುಪೇಶನಲ್ ಚಿಕಿತ್ಸಕರು ಉಣ್ಣುವ ಮತ್ತು ತಿನ್ನುವ ಸಮಸ್ಯೆಗಳಿಗೆ ಚಿಕಿತ್ಸಾ ತಂತ್ರ ಯೋಜಿಸಲು ವ್ಯಕ್ತಿಯ ಕ್ರಿಯಾತ್ಮಕ ಸಾಮರ್ಥ್ಯಗಳು ಮತ್ತು ಭವಿಷ್ಯದ ಚೇತರಿಕೆಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಚಿಕಿತ್ಸಾ ಸಹಾಯವೂ ಬದಲಾಗುತ್ತದೆ. ಸ್ವಯಂ ಆಹಾರ ಸೇವನೆ ಮಾಡುವ ಒಬ್ಬರ ಸಾಮರ್ಥ್ಯದಲ್ಲಿ ಕುಸಿತಕ್ಕೆ ಆರೈಕೆದಾರರಿಂದ ಸಂಪೂರ್ಣ ಸಹಾಯದ ಅಗತ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ಸಣ್ಣ ಮೌಕಿಕ ಸೂಚನೆಗಳು ಅಥವಾ ಸ್ವಲ್ಪ ದೈಹಿಕ ಸಹಾಯವನ್ನು ಒದಗಿಸುವುದು ಸ್ವತಂತ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ವ್ಯಕ್ತಿಯ ಸ್ಥಿತಿಗೆ ಅನುಸಾರವಾಗಿ ಚಿಕಿತ್ಸೆಗಳು ಅವಲಂಬಿಸಿರುತ್ತದೆ ಮತ್ತು ಕಾಲಕಾಲಕ್ಕೆ ಮೌಖೀಕ ಅಥವಾ ದೃಶ್ಯ ಸೂಚನೆಗಳನ್ನು ನೀಡಲು ಆರೈಕೆದಾರರಿಗೆ ಮಾರ್ಗದರ್ಶನ ನೀಡುತ್ತದೆ. ಆಕ್ಯುಪೇಶನಲ್ ಚಿಕಿತ್ಸಕರು ವೈದ್ಯರೊಂದಿಗೆ ಆಹಾರ ಪದ್ಧತಿ ಮತ್ತು ದ್ರವ ಮಾರ್ಪಾಡುಗಳ ಸಮಾಲೋಚನೆಯನ್ನು ಕೂಡ ಶಿಫಾರಸು ಮಾಡುತ್ತಾರೆ. ಆಕ್ಯುಪೇಶನಲ್ ಚಿಕಿತ್ಸಕರು ಉತ್ತಮವಾಗಿ ತಿನ್ನುವ ಕಾರ್ಯ
ಕ್ಷಮತೆಯನ್ನು ಹೆಚ್ಚಿಸಲು ಹ್ಯಾಂಡ್ ಅಡಾಪ್ಟಿವ್ (ಸಹಾಯಕ ಸಾಧನ)ಗಳ ಶ್ರೇಣಿಯನ್ನು ರಚಿಸುತ್ತಾರೆ, ಮಾರ್ಪಡಿಸುತ್ತಾರೆ ಅಥವಾ ಸೂಕ್ತವಾದ ಆಯ್ಕೆ ಮಾಡುತ್ತಾರೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:
ಮುಖ್ಯಸ್ಥರು,
ಆಕ್ಯುಪೇಶನಲ್ ಥೆರಪಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
ಕೌಶಿಕ್ ಸಾಹು
ಸಹಾಯಕ ಪ್ರೊಫೆಸರ್
ಲಾವಣ್ಯಾ ಪದ್ಮಶಾಲಿ
ಕ್ಲಿನಿಕಲ್ ಸೂಪರ್ ವೈಸರ್
ಆಕ್ಯುಪೇಶನಲ್ ಥೆರಪಿ ವಿಭಾಗ
ಎಂಸಿಎಚ್‌ಪಿ, ಮಾಹೆ