Advertisement

ಇನ್ನು ಬಲು ಸುಲಭ ಕೋವಿಡ್ ಫ‌ಲಿತಾಂಶ!

12:29 AM May 21, 2021 | Team Udayavani |

ಮನೆಯಲ್ಲೇ ಕೋವಿಡ್ ಪರೀಕ್ಷೆ ನಡೆಸುವ ಕೊವಿಸೆಲ್ಫ್ ಎಂಬ ಟೆಸ್ಟಿಂಗ್‌ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಒಪ್ಪಿಗೆ ನೀಡಿದೆ. ಇದೊಂದು ರ್ಯಾಪಿಡ್‌ ಆ್ಯಂಟಿಜೆನ್‌ ಮಾದರಿಯ ಟೆಸ್ಟ್‌ ಆಗಿದ್ದು, ಈ ಕಿಟ್‌ನ ಬಳಕೆ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಏನಿರುತ್ತೆ ಕಿಟ್‌ನಲ್ಲಿ? :

  1. ಬಳಕೆದಾರರ ಮಾಹಿತಿ ಚೀಟಿ
  2. ಪ್ರೀ-ಫಿಲ್ಡ್‌ ಎಕ್ಸ್‌ಟ್ರಾಕ್ಷನ್‌ ಟ್ಯೂಬ್‌
  3. ಹೈಜೀನ್‌ ಸ್ವಾಬ್‌
  4. ಟೆಸ್ಟಿಂಗ್‌ ಸ್ಟ್ರಿಪ್‌
  5. ತ್ಯಾಜ್ಯ ಬಿಸಾಡಲು ಪುಟ್ಟ ಪ್ಲಾಸ್ಟಿಕ್‌

ಟೆಸ್ಟ್‌ಗೂ ಮೊದಲು :

  • ಮೊಬೈಲ್‌ನಲ್ಲಿ ಮೈಲ್ಯಾಬ್‌ ಕೊವಿಸೆಲ್ಫ್ ಆ್ಯಪ್‌ ಡೌನ್‌ಲೋಡ್‌ ಮಾಡಬೇಕು.
  • ಆ್ಯಪ್‌ನಲ್ಲಿ ಪರೀಕ್ಷೆಗೊಳಪಡುವವರ ಹೆಸರು, ವಯಸ್ಸು ಇತ್ಯಾದಿ ಮಾಹಿತಿ ತುಂಬಬೇಕು.
  • ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
  • ಸ್ವತ್ಛವಾದ ಟೇಬಲ್‌ ಅಥವಾ ಇತರ ಮೇಲ್ಮೆ„ ಮೇಲೆ ಕಿಟ್‌ಗಳಲ್ಲಿನ ವಸ್ತುಗಳನ್ನು ಹೊರತಗೆಯಬೇಕು.

ಕಟ್ಟುನಿಟ್ಟಾದ ಸೂಚನೆಗಳು :

  • ಕೋವಿಡ್ ಗುಣಲಕ್ಷಣಗಳಿರುವವರು ಮಾತ್ರ ಈ ಕಿಟ್‌ ಬಳಸತಕ್ಕದ್ದು. ವಿವೇಚನಾ ರಹಿತವಾಗಿ ಸುಮ್ಮಸುಮ್ಮನೇ ಬಳಸುವಂತಿಲ್ಲ.
  • ಕೋವಿಡ್ ದೃಢಪಟ್ಟಿರುವವರ ಪ್ರಾಥಮಿಕ ಸಂಪರ್ಕ ದಲ್ಲಿರುವವರು ಕೂಡ ಇದನ್ನು ಬಳಸಬಹುದು.
  • ಪರೀಕ್ಷೆ ಮುಗಿದ ಅನಂತರ ಕಿಟ್‌ನಲ್ಲಿರುವ ಸ್ಟ್ರಿಪ್‌ನಲ್ಲಿ ಕಾಣಿಸುವ ಫ‌ಲಿತಾಂಶದ ಫೋಟೋ ತೆಗೆಯಬೇಕು.
  • ಯಾವ ಮೊಬೈಲ್‌ ಸಂಖ್ಯೆಯಿಂದ ಮೈಲ್ಯಾಬ್‌ ಕೊವಿಸೆಲ್ಫ್ ಆ್ಯಪ್‌ ಡೌನ್‌ಲೋಡ್‌ ಮಾಡಲಾ ಗಿದೆಯೋ ಅದೇ ಮೊಬೈಲ್‌ ಸಂಖ್ಯೆಯಿಂದ ಸ್ಟ್ರಿಪ್‌ಫೋಟೋ ಅಪ್‌ಲೋಡ್‌ ಮಾಡಬೇಕು.
  • ಕೋವಿಡ್ ಗುಣಲಕ್ಷಣಗಳಿದ್ದರೂ ಈ ಪರೀಕ್ಷೆ ಯಲ್ಲಿ ನೆಗೆಟಿವ್‌ ಬಂದರೆ ಅಂಥವರು ತತ್‌ಕ್ಷಣವೇ ಆರ್‌ಟಿ-ಪಿಸಿಆರ್‌ ಟೆಸ್ಟ್‌ಗೆ ಒಳಗಾಗಬೇಕು.
  • ಸೆಲ್ಫ್ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದವರನ್ನು ಶಂಕಿತ ಕೊರೊನಾ ಸೋಂಕಿತರೆಂದು ಪರಿಗಣಿಸಲಾ ಗುತ್ತದೆ. ಅಂಥವರು, ಐಸಿಎಂಆರ್‌ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಬಳಕೆ ಹೇಗೆ? :

Advertisement

ಈ ಟೆಸ್ಟ್‌ನ ವಿಧಾನ ಹೇಗೆ ಎಂಬುದನ್ನು ಈ ಕಿಟ್‌ ತಯಾರಕ ಮೈಲ್ಯಾಬ್‌ ಕಂಪೆನಿ, ಯುಟ್ಯೂಬ್‌ ವೀಡಿಯೋದಲ್ಲಿ ತಿಳಿ ಸಿದೆ. ಅದರ ಕ್ಯು.ಆರ್‌. ಕೋಡ್‌ ಅನ್ನು ಮೇಲೆ ನೀಡಲಾಗಿದ್ದು, ಆಸಕ್ತರು ಅದನ್ನು ಸ್ಕ್ಯಾನ್‌ ಮಾಡಿ, ಕಿಟ್‌ ಬಳಕೆಯ ಹಾಗೂ ಪರೀಕ್ಷಾ ವಿಧಾನವನ್ನು ತಿಳಿಯಬಹುದು.

ಪ್ರಮುಖ ಪ್ರಯೋಜನ :

  • ಕೇವಲ 15 ನಿಮಿಷಗಳಲ್ಲಿ ಫ‌ಲಿತಾಂಶ ಪಡೆಯಬಹುದು.
  • ಮನೆಯಲ್ಲೇ ಬಳಸಬಹುದಾದ್ದರಿಂದ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ.
  • ವಯಸ್ಸಾದವರಿಗೆ, ಸುಸ್ತಾದವರಿಗೆ ಹೆಚ್ಚು ಅನುಕೂಲ.
Advertisement

Udayavani is now on Telegram. Click here to join our channel and stay updated with the latest news.

Next