Advertisement

ಸುಲಭವಾಗಿ ತಯಾರಿಸಿ ರುಚಿ ರುಚಿಯಾದ ಟೊಮೊಟೊ ಪಲಾವ್

10:41 AM Aug 23, 2019 | Sriram |

ಇಂದು ಎಲ್ಲರೂ ಆಹಾರದಲ್ಲಿ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್ನಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿರುವ ಜೊತೆಗೆ ಹೊಸ ಹೊಸ ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ತಮ್ಮ ಕೈ ರುಚಿಯ ಸವಿಯನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳಲು ನಾವು ನಿಮಗೊಂದು ಸುಲಭ ರೀತಿಯಲ್ಲಿ ರುಚಿಕರವಾದ ಟೊಮೊಟೊ ಪಲಾವ್ವನ್ನು ನಾವು ಉಣಬಡಿಸಲಿದ್ದೇವೆ.

Advertisement

ಹಲವಾರು ಬಗೆಯ ಪಲಾವ್ ಗಳನ್ನು ನಾವು ತಿಂದಿರುತ್ತೇವೆ ಅದರಲ್ಲಿ ಮುಖ್ಯವಾಗಿ ಪನ್ನೀರ್ ಪಲಾವ್, ಕಾಶ್ಮೀರಿ ಪಲಾವ್,ಮಶ್ರೂಮ್ ಪಲಾವ್, ವೆಜಿಟೇಬಲ್ ಪಲಾವ್, ಗೋಬಿ ಪಲಾವ್ ಹೀಗೆ ರೈಸ್ ಐಟಮ್‌ ಗಳಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದು ಟೊಮೊಟೊ ಪಲಾವ್ . ಹಾಗಾದರೆ ಇನ್ನೇಕೆ ತಡ ರುಚಿ ರುಚಿಯಾದ ಟೊಮೊಟೊ ಪಲಾವ್ ಮಾಡುವ ವಿಧಾನವನ್ನು ಓದಿಕೊಂಡು ನಿಮ್ಮ ಮನೆಯಲ್ಲೇ ಮಾಡಿಕೊಂಡು ಸ್ವಾದಿಷ್ಟವಾಗಿ ಸವಿಯಿರಿ…

ಬೇಕಾಗುವ ಪದಾರ್ಥಗಳು:
ಬೆಳ್ತಿಗೆ ಅಕ್ಕಿ: 350 ಗ್ರಾಂ, ಈರುಳ್ಳಿ : 4ರಿಂದ 5, ಲವಂಗ: 4, ಏಲಕ್ಕಿ :3, ಕಾಳು ಮೆಣಸು 2ರಿಂದ 3, ಅರಿಶಿನ ಪುಡಿ 1 ಚಮಚ, ತುಪ್ಪ 4 ಚಮಚ, ಕರಿಬೇವು 2 ಎಳಸು, ಟೊಮೊಟೊ 4ರಿಂದ 5, ತೆಂಗಿನ ತುರಿ 2 ಕಪ್, ಚಕ್ಕೆ ಸ್ವಲ್ಪ, ಶುಂಠಿ ಸ್ವಲ್ಪ, ಒಣ ಮೆಣಸು 5 ರಿಂದ  7 ಗೋಡಂಬಿ 10, ತೆಂಗಿನ ಎಣ್ಣೆ 2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:
ಟೊಮೊಟೊ ತೊಳೆದುಕೊಂಡು ಹೆಚ್ಚಿ ,ಈರುಳ್ಳಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ ತುರಿದಿಟ್ಟ ತೆಂಗಿನಕಾಯಿಯನ್ನು ಮಿಕ್ಸಿಗೆ ಹಾಕಿ ಹಾಲನ್ನು ಮಾಡಿಕೊಳ್ಳಿ. ಲವಂಗ, ಕಾಳು ಮೆಣಸು, ಚಕ್ಕೆ, ಏಲಕ್ಕಿಯನ್ನು ಹುರಿದು ಪುಡಿ ಮಾಡಿ. ಒಂದು ಅಗಲವಾದ ಪಾತ್ರೆಗೆ ತುಪ್ಪ ಹಾಗೂ ಎಣ್ಣೆಯನ್ನು ಹಾಕಿಕೊಂಡು ಬಿಸಿಯಾದ ನಂತರ ಸಾಸಿವೆ, ಶುಂಠಿ ,ಒಣಮೆಣಸಿಕಾಯಿಯ ಪೇಸ್ಟ್ ಹಾಕಿ ಒಗ್ಗರಣೆ ಮಾಡಿದ ನಂತರ ಈರುಳ್ಳಿ ಚೂರುಗಳು, ಟೊಮೊಟೊ ಚೂರುಗಳು ಹಾಕಿ ಮೆತ್ತಗಾಗುವರೆಗೆ ಫ್ರೈ ಮಾಡಿ. ತದನಂತರ ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ . ಮಾಡಿಟ್ಟ ತೆಂಗಿನ ಹಾಲನ್ನು ಬೆರಸಿ. ಅಕ್ಕಿಗೆ ಹೊಂದುವಷ್ಟು ನೀರು ಸೇರಿಸಿ ಈ ಎಲ್ಲಾ ಮಸಾಲೆ ಹಾಗೂ ಗೋಡಂಬಿಯನ್ನು ಹಾಕಿ. ನೀರು ಕುದಿ ಬಂದ ಮೇಲೆ ಅರಿಶಿನ ಹಾಕಿ ಅಕ್ಕಿ ಸೇರಿಸಿ. ಅಕ್ಕಿ ಬೇಯುವಾಗ ಉಪ್ಪು ಸೇರಿಸಿ. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಹಾಕಿ. ಈಗ ಟೊಮೊಟೊ ಪಲಾವ್ ರೆಡಿ. ಬಿಸಿ ಇರುವಾಗ ಟೊಮೆಟೊ ಪಲಾವ್ ತಿನ್ನಲು ತುಂಬಾನೇ ರುಚಿಯಾಗಿರುವುದು.

Advertisement

Udayavani is now on Telegram. Click here to join our channel and stay updated with the latest news.

Next