Advertisement

ಅಂತರ ವಲಯ: ಪೂರ್ವ ವಲಯಕ್ಕೆ ಜಯ

03:45 AM Feb 17, 2017 | Team Udayavani |

ಮುಂಬೈ: ವಿರಾಟ್‌ ಸಿಂಗ್‌ ಮತ್ತು ಮನೋಜ್‌ ತಿವಾರಿ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಪೂರ್ವ ವಲಯ ತಂಡ ಅಂತರ ವಲಯ ಟಿ20 ಟೂರ್ನಿಯಲ್ಲಿ ಉತ್ತರ ವಲಯದ ವಿರುದ್ಧ 8 ವಿಕೆಟ್‌ ಜಯ ಸಾಧಿಸಿದೆ. 

Advertisement

ಮೊದಲು ಬ್ಯಾಟಿಂಗ್‌ ಮಾಡಿದ್ದ ಉತ್ತರ ವಲಯ 9 ವಿಕೆಟ್‌ಗೆ 159 ರನ್‌ ಬಾರಿಸಿತ್ತು. ತಂಡದ ಪರ ಯುವರಾಜ್‌ ಸಿಂಗ್‌ (38) ದೊಡ್ಡ ಮೊತ್ತ ಬಾರಿಸಿದರು. ಉಳಿದ ಬ್ಯಾಟ್ಸ್‌ಮನ್‌ಗಳು ವೈಫ‌ಲ್ಯ ಅನುಭವಿಸಿದರು.  ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನುಹತ್ತಿದ ಪೂರ್ವ ವಲಯ ಕೇವಲ 16.3 ಓವರ್‌ಗೆ 2 ವಿಕೆಟ್‌ ಕಳೆದುಕೊಂಡು ಜಯಸಾಧಿಸಿತು. ವಿರಾಟ್‌ ಸಿಂಗ್‌(74), ಮನೋಜ್‌ ತಿವಾರಿ (75) ಭರ್ಜರಿ ಜತೆಯಾಟ ನೀಡಿ ಗೆಲುವು ತಂದರು.

ಸಂಕ್ಷಿಪ್ತ ಸ್ಕೋರ್‌: ಉತ್ತರ ವಲಯ 20 ಓವರ್‌ಗೆ 159/9 (ಯುವರಾಜ್‌ 38, ಪ್ರದೀಪ್‌ ಸಾಂಗ್ವಾನ್‌ 21, ಪ್ರಗ್ಯಾನ್‌ ಓಜಾ 33ಕ್ಕೆ 3), ಪೂರ್ವ ವಲಯ 16.3 ಓವರ್‌ಗೆ 162/2 (ವಿರಾಟ್‌ ಸಿಂಗ್‌ 74, ಮನೋಜ್‌ ತಿವಾರಿ 75, ಪ್ರದೀಪ್‌ ಸಾಂಗ್ವಾನ್‌ 26ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next