Advertisement

ಕುಡಿವ ನೀರಿನ ಸಮಸ್ಯೆ ನಿವಾರಣೆ

07:58 AM Mar 11, 2019 | Team Udayavani |

ಶಹಾಪುರ: ನಗರದಲ್ಲಿ ಪ್ರಸ್ತುತ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದ್ದು, ನೀರಿನ ಸೌಲಭ್ಯ ಕಲ್ಪಿಸಲು ನಗರದ ಫಿಲ್ಟರ್‌ ಬೆಡ್‌ ಕೆರೆಯನ್ನು ಕಾಲುವೆ ನೀರಿನಿಂದ ತುಂಬಿಸಲು ಕ್ರಮ ತೆಗೆದುಕೊಂಡಿದ್ದು, ಕೆರೆ ತುಂಬಿದ್ದಲ್ಲಿ , ನಗರದ ನೀರಿನ ಕೊರತೆ ನೀಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು. ನಗರದ ಫಿಲ್ಟರ್‌ ಬೆಡ್‌ ಕೆರೆಗೆ ಕಾಲುವೆ ಮೂಲಕ ತುಂಬುತ್ತಿರುವ ನೀರನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Advertisement

ನಾರಾಯಣಪುರ ಬಸವಸಾಗಾರದಿಂದ ಕೃಷ್ಣ ಕಾಡಾ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ ಕಳೆದ ಐದು ದಿನದಿಂದ ಕಾಲುವೆ ನೀರನ್ನು ಇಲ್ಲಿನ ಫಿಲ್ಟರ್‌ ಬೆಡ್‌ ಕೆರೆಗೆ ತುಂಬಿಸುವ ಕಾರ್ಯ ಭರದಿಂದ ನಡೆದಿದ್ದು, ಕೂಡಲೇ ಕರೆ ತುಂಬಿಕೊಂಡಲ್ಲಿ ಏಪ್ರಿಲ್‌ ಮತ್ತೆ ಮೇ ತಿಂಗಳವರೆಗೆ ನೀರು ಸರಿದೂಗಿಸಲಬಹುದು. 

ಈ ಕೆರೆ ತುಂಬಿದ್ದಲ್ಲಿ ಇಡಿ ನಗರಕ್ಕಾಗುವಷ್ಟು ನೀರು ಸರಬರಾಜಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ನಾಗಪ್ಪ ತಹಶೀಲ್ದಾರ್‌, ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next