Advertisement
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಭೂಕಂಪನದ ತೀವ್ರತೆ ಇರುವುದು ವಿರಳ. 1969ರಲ್ಲಿ ಭದ್ರಾಚಲಂನಲ್ಲಿ 5.7 ತೀವ್ರತೆಯ ಭೂಕಂಪ ದಾಖಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ 5.3 ಪ್ರಮಾಣದ ಭೂಕಂಪ ದಾಖಲಾಗಿದೆ. 1969ರ ಬಳಿಕ ಸಣ್ಣ ಪ್ರಮಾಣದ ಭೂಕಂಪನಗಳು ದಾಖಲಾಗಿದ್ದವು ಎಂದು ರಾಷ್ಟ್ರೀಯ ಭೂಗೋಳಿಕ ಸಂಶೋಧನ ಸಂಸ್ಥೆಯ (ಎನ್‌ಜಿಆರ್‌ಐ) ನಿವೃತ್ತ ವಿಜ್ಞಾನಿ ಪೂರ್ಣಚಂದ್ರ ರಾವ್ ಪ್ರತಿಕ್ರಿಯಿಸಿದ್ದಾರೆ.
ದಕ್ಷಿಣ ಭಾರತದಲ್ಲಿರುವ ಭೂಫಲಕಗಳ ರಚನೆಯಲ್ಲಿ ಹೆಚ್ಚಿನ ಬಿರುಕುಗಳು ಇಲ್ಲದಿರುವುದರಿಂದ ಹಾಗೂ ಇದು ಸಾಕಷ್ಟು ಗಟ್ಟಿಯಾಗಿರುವುದರಿಂದ ಇಲ್ಲಿ ಭೂಕಂಪಗಳ ಪ್ರಮಾಣ ಕಡಿಮೆ ಇದೆ. ಅಲ್ಲದೆ, ದಖನ್ ಪ್ರಸ್ಥಭೂಮಿ ಗಟ್ಟಿಯಾದ ಕಲ್ಲುಗಳಿಂದ ರಚನೆಯಾಗಿದ್ದು, ಇವು ಭೂಮಿ ಕಂಪಿಸುವುದನ್ನು ತಡೆಯುವುದರಿಂದ ಇಲ್ಲಿ ಭೂಕಂಪನ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳಿದ್ಧಾರೆ. ಒಂದು ವೇಳೆ ಇಲ್ಲಿ ಭೂಮಿ ಕಂಪಿಸಿದರೂ ಅಪಾಯಗಳ ಸಾಧ್ಯತೆಯೂ ಕಡಿಮೆ ಎಂದು ಅವರು ಹೇಳಿದ್ದಾರೆ.