ತೆಲಂಗಾಣ: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಮಾವೋವಾದಿಗಳು ಹತರಾಗಿರುವುದಾಗಿ ಭಾನುವಾರ(ಡಿ.1) ಮುಂಜಾನೆ ನಡೆದಿದೆ.
ಮಾವೋವಾದಿಗಳ ಗುಂಪೊಂದು ಇಬ್ಬರು ಆದಿವಾಸಿಗಳನ್ನು ಪೊಲೀಸ್ ಮಾಹಿತಿದಾರರು ಎಂದು ತಿಳಿದು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ಎನ್ಕೌಂಟರ್ ನಡೆದಿದೆ ಎನ್ನಲಾಗಿದೆ.
ಈಕುರಿತು ಮಾಹಿತಿ ನೀಡಿದ ಮುಲುಗು ಎಸ್ಪಿ ಡಾ.ಶಬರೀಶ್, ಏತೂರುನಗರಂ ಅರಣ್ಯ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಪೊಲೀಸರು ಮತ್ತು ನಕ್ಸಲೀಯರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಈ ವೇಳೆ ಏಳು ಮಂದಿ ನಕ್ಸಲರು ಹತರಾಗಿದ್ದಾರೆ ಅಲ್ಲದೆ ಘಟನಾ ಸ್ಥಳದಲ್ಲಿ ಎರಡು ಎಕೆ 47 ರೈಫಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎನ್ಕೌಂಟರ್ನಲ್ಲಿ ಹತರಾದವರಲ್ಲಿ ಒಬ್ಬನನ್ನು ನಿಷೇಧಿತ ಸಿಪಿಐ (ಮಾವೋವಾದಿ) ತೆಲಂಗಾಣ ರಾಜ್ಯ ಸಮಿತಿಯ (ಯೆಲ್ಲಾಂಡು ನರಸಂಪೇಟ್) ಕಾರ್ಯದರ್ಶಿ ಕುರ್ಸಮ್ ಮಂಗು ಅಲಿಯಾಸ್ ಭದ್ರು ಎಂದು ಗುರುತಿಸಲಾಗಿದೆ.
ಸದ್ಯ ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Udupi: ಗೀತಾರ್ಥ ಚಿಂತನೆ 110: ಸಾವಿನ ಕಡೆಯ ಪಯಣ ಹುಟ್ಟಿದಂದಿನಿಂದ…