ವಿಜಯಪುರ: ಮಂಗಳವಾರ ಬೆಳಿಗ್ಗೆ ವಿಜಯಪುರ ನಗರದ ಸುತ್ತ ಭೂಕಂಪ ಸಂಭವಿಸಿದೆ. ಆದರೆ ಸದರಿ ಭೂಕಂಪದಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಬೆಳಿಗ್ಗೆ 11-21ಕ್ಕೆ ಭಾರಿ ಸದ್ದಿನೊಂದಿಗೆ ಕಂಪಿಸಿದ ಭೂಮಿ ಜನರನ್ನು ಬೆಚ್ಚಿಬೀಳಿಸಿದೆ.
ಭೂಕಂಪದಿಂದ ವಿಜಯಪುರ ಜಿಲ್ಲೆಯ ಉಕ್ಕಲಿ ಪರಿಸರದಲ್ಲಿ ಕೇಂದ್ರೀಕೃತವಾಗಿದ್ದ ಭೂಕಂಪ 10 ಕಿ.ಮೀ. ಆಳದಲ್ಲಿತ್ತು. 3.5 ತೀವ್ರತೆ ಹೊಂದಿತ್ತು. ಭೂಕಂಪದಿಂದ ಯಾವುದೇ ಅಪಾರ ಸಂಭವಿಸದಿದ್ದರೂ ಜಿಲ್ಲೆಯ ಜನರು ಪದೇ ಪದೇ ಭೂಕಂಪ ಸಂಭವಿಸುತ್ತಿರುವ ಕಾರಣ ಆತಂಕದಲ್ಲಿದ್ದಾರೆ.
ಈ ಕೆಲವೇ ತಿಂಗಳ ಹಿಂದೆ ಜಿಲ್ಲೆಯ ಬಹುತೇಕ ಎಲ್ಲೆಡೆ ಹಲವು ಬಾರಿ ಭೂಕಂಪ ಸಂಭವಿಸಿದ್ದು, ಭೂಗರ್ಭ ತಜ್ಞರು ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದರು.
ಇದನ್ನೂ ಓದಿ:ಕಾಶ್ಮೀರಿ ಪಂಡಿತರ ವಲಸೆ; ಒಂದು ವೇಳೆ ನಾನೇ ತಪ್ಪಿತಸ್ಥನಾದರೆ ಗಲ್ಲಿಗೇರಿಸಿ: ಫಾರೂಖ್ ಸಂದರ್ಶನ
ಮಳೆಗಾಲದ ಕಾರಣ ಭೂಮಿಯ ಆಳದಲ್ಲಿ ಅಂತರ್ಜಲ ಹೆಚ್ಚಿ, ನೀರಿನ ಸಂಚಲನೆ ಹೆಚ್ಚಾಗಿದೆ. ಇದು ಭೂಕಂಪನ ಸಂಭವಿಸಲು ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದ್ದರು.
ಆದರೆ ಇದೀಗ ಬೇಸಿಗೆ ಸ್ಥಿತಿ ಇದ್ದು, ಈಗ ಭೂಕಂಪನ ಸಂಭವಿಸಿರುವುದು ಜಿಲ್ಲೆಯ ಜನರನ್ನು ಕಂಗಾಲಾಗಿಸಿದೆ.