Advertisement

ವಿಜಯಪುರದಲ್ಲಿ ಭೂಕಂಪನ

06:05 AM Aug 10, 2017 | |

ವಿಜಯಪುರ: ನಗರ ಹಾಗೂ ಹೊರ ವಲಯದಲ್ಲಿ ಬುಧವಾರ ಸಂಜೆ 4ರ ವೇಳೆ ಭೂಕಂಪನವಾಗಿದೆ.

Advertisement

ಐನಾಪುರ ಹಾಗೂ ಜಲನಗರ ಪ್ರದೇಶದಲ್ಲಿ 3-4 ಸೆಕೆಂಡ್‌ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಬೆನ್ನಲ್ಲೇ ಮನೆಯಲ್ಲಿನ ವಸ್ತುಗಳು ಅಲುಗಾಡಿದ್ದು, ಐನಾಪುರ ಗ್ರಾಮದ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಭೂಗರ್ಭ ಶಾಸ್ತ್ರ ಇಲಾಖೆ ಅಧಿಕಾರಿ ಮೋಹನ, ಬೆಂಗಳೂರು ಹೊರತಾಗಿ ನಮ್ಮ ಬಳಿ ರಿಕ್ಟರ್‌ ಮಾಪನ ಇಲ್ಲ. ಹೀಗಾಗಿ ವಿಜಯಪುರ ನಗರಕ್ಕೆ ಹತ್ತಿರ ಇರುವ ನೆರೆಯ ಮಹಾರಾಷ್ಟ್ರದ ಲಾತೂರ ಬಳಿ ಸ್ಥಾಪಿಸಿರುವ ಕೇಂದ್ರದ ಮೂಲಕ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದೇವೆ. ಅಲ್ಲದೆ, ಭೂಕಂಪನದ ಅನುಭವದ ಕುರಿತು ಐನಾಪುರ ಜನರಿಂದ ಮಾಹಿತಿ ಪಡೆದು ಹೆಚ್ಚಿನ ವಿವರ ನೀಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next